ಮನೆ ರಾಜ್ಯ ಮೈಸೂರಿನಲ್ಲಿ ಸಂಭ್ರಮದಿಂದ ರಂಜಾನ್‌ ಹಬ್ಬ ಆಚರಣೆ..!

ಮೈಸೂರಿನಲ್ಲಿ ಸಂಭ್ರಮದಿಂದ ರಂಜಾನ್‌ ಹಬ್ಬ ಆಚರಣೆ..!

0

ಮೈಸೂರು : ಇಂದು ನಾಡಿನಾದ್ಯಂತ ರಂಜಾನ್‌ ಹಬ್ಬದ ಸಂಭ್ರಮ ಮನೆಮಾಡಿದ್ದು, ಸಾಂಸ್ಕೃತಿ ನಗರಿಯ ಮೈಸೂರಿನಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಸಡಗರದಿಂದ ಹಬ್ಬವನ್ನು ಆಚರಣೆ ಮಾಡಿದ್ದಾರೆ.

ಮೈಸೂರಿನ ಮಂಡಿ ಮೊಹಲ್ಲಾದಲ್ಲಿರುವ ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆ ವೇಳೆ ಶಾಸಕರುಗಳಾದ ತನ್ವೀರ್‌ ಸೇಠ್‌, ಹರೀಶ್‌ ಗೌಡ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ಸಹ ಭಾಗಿಯಾಗಿದ್ದರು.

ರಂಜಾನ್‌ ಹಬ್ಬದ ಹಿನ್ನೆಲೆಯಲ್ಲಿ ಇಂದು ಮುಂಜಾನೆ ಮಸೀದಿಗಳಿಗೆ ತೆರಳಿದ ಮುಸ್ಲಿಮರು ವಿಶೇಷ ಪ್ರಾರ್ಥನೆ ಸಲ್ಲಿಸಿ ಉಪವಾಸ ಅಂತ್ಯಗೊಳಿಸಿದರು. ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ವಯಸ್ಸಿನ ಅಂತರ ಮರೆತು ಪರಸ್ಪರ ಒಬ್ಬರಿಗೊಬ್ಬರು ಅಪ್ಪಿಕೊಂಡು ರಂಜಾನ್‌ ಶುಭಾಶಯ ವಿನಿಮಯ ಮಾಡಿಕೊಂಡರು.