ಮೈಸೂರು(Mysuru) : ಪ್ರಸಿದ್ಧ ಸ್ತ್ರೀರೋಗ ತಜ್ಞ ವೈದ್ಯರು, ರಾಮನ್ ಮೆಮೋರಿಯಲ್ ಆಸ್ಪತ್ರೆ ಸಂಸ್ಥಾಪಕಿ ಡಾ. ಜೆ.ಕಮಲ ರಾಮನ್ (88) ಸೋಮವಾರ ಬೆಳಗ್ಗೆ ಕೃಷ್ಣಮೂರ್ತಿಪುರಂನ ತಮ್ಮ ಆಸ್ಪತ್ರೆಯಲ್ಲಿ ನಿಧನರಾದರು.
ದಿವಂಗತ ಡಾ.ಜೆ.ಎಸ್ ರಾಮನ್ ಅವರ ಪತ್ನಿಯಾದ ಡಾ. ಕಮಲಾ ರಾಮನ್, ಪುತ್ರಿ ಡಾ.ಜಯಶ್ರೀ ರಂಗನಾಥ್, ಪುತ್ರರಾದ ಜೆ.ವಿ.ರಾಮನ್, ಅಪ್ರಮೇಯ ರಾಮನ್, ಅಳಿಯ ಡಾ. ಎಂ.ಎಸ್.ರಂಗನಾಥ್, ಸೊಸೆಯಂದಿರಾದ ಡಾ.ಅನುರಾಧ ರಾಮನ್, ಮೈಥಿಲಿ ರಾಮನ್, ಮೊಮ್ಮಕ್ಕಳು, ಹಿತೈಷಿಗಳು, ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.
ಅವರ ಅಂತ್ಯಕ್ರಿಯೆ ಮೈಸೂರಿನ ತಪ್ಪಲಿನಲ್ಲಿ ನಿನ್ನೆ ಸಂಜೆ ನೆರೆವೇರಿಸಲಾಗಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.