ರಾಮನಗರ: ಕಾಡಾನೆ ದಾಳಿಗೆ ವ್ಯಕ್ತಿ ಬಲಿಯಾದ ಘಟನೆ ಕನಕಪುರ ತಾಲೂಕಿನ ಗೇರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪುಟ್ಟ ನಂಜಯ್ಯ (62) ಮೃತಪಟ್ಟ ವ್ಯಕ್ತಿ.
ಪುಟ್ಟ ನಂಜಯ್ಯ ರಾತ್ರಿ ಹೊಲದಲ್ಲಿ ಒಕ್ಕಣೆ ಮಾಡಿದ್ದ ರಾಗಿ ಹುಲ್ಲನ್ನು ಕಾಯಲು ಹೋಗಿದ್ದು, ಆತ ಹೊಲದಲ್ಲಿ ಮಲಗಿದ್ದ ವೇಳೆ ಕಾಡಾನೆಗಳು ತಲೆ ಮೇಲೆ ಕಾಲು ಇಟ್ಟು ಸಾಯಿಸಿವೆ ಎನ್ನಲಾಗಿದೆ.
ಇಂದು ನಸುಕಿನ ಜಾವ ಮೂರು ಕಾಡಾನೆಗಳು ದಾಳಿ ನಡೆಸಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತದೇಹ ಕನಕಪುರ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದ್ದು, ಸಾತನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Saval TV on YouTube