ರಾಮನಗರ: ವಾಹನ ಡಿಕ್ಕಿಯಾಗಿ ಎಂಜಿನಿಯರಿಂಗ್ ವಿದ್ಯಾರ್ಥಿ ಗಂಭೀರ ಗಾಯಗೊಂಡ ಘಟನೆ ರಾಮನಗರ ಜಿಲ್ಲೆ ಹಾರೋಹಳ್ಳಿ ತಾಲೂಕಿನ ಜೈನ್ ವಿವಿ ಹಾಸ್ಟೆಲ್ ಬಳಿ ಸಂಭವಿಸಿದೆ.
ಆಂಧ್ರಪ್ರದೇಶದ ಮೂಲದ ವಿದ್ಯಾರ್ಥಿ ತೇಜಸ್ ರೆಡ್ಡಿ (19) ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ತೇಜಸ್ ರೆಡ್ಡಿ ಜೈನ್ ವಿವಿಯಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಹಾಸ್ಟೆಲ್ ಮುಂದೆ ರಸ್ತೆ ದಾಟುವಾಗ ಅಪರಿಚಿತ ವಾಹನ ಡಿಕ್ಕಿಯಾಗಿತ್ತು. ಜೈನ್ ವಿವಿ ಹಾಸ್ಟೆಲ್ ಮುಂದಿನ ಬೆಂಗಳೂರು-ಕನಕಪುರ ಹೆದ್ದಾರಿಯಲ್ಲಿ ಘಟನೆ ಸಂಭಿಸಿತ್ತು. ಗಾಯಾಳು ವಿದ್ಯಾರ್ಥಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ತೇಜಸ್ ಬದುಕಿಲ್ಲ ಆದರೂ ಆಸ್ಪತ್ರೆಗೆ ಕರೆದೊಯ್ದಿದ್ದಾರೆಂದು ಇತರ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Saval TV on YouTube