ಮನೆ ಮನರಂಜನೆ ರಮೇಶ್ ಅರವಿಂದ್ ನಟನೆಯ ಮುಂದಿನ ಚಿತ್ರ ‘ದೈಜಿ’

ರಮೇಶ್ ಅರವಿಂದ್ ನಟನೆಯ ಮುಂದಿನ ಚಿತ್ರ ‘ದೈಜಿ’

0

ರಮೇಶ್ ಅರವಿಂದ್ ನಟನೆಯ ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ಶಿವಾಜಿ ‘ಸೂರತ್ಕಲ್’ ಸೂಪರ್ ಹಿಟ್ ಆಗಿದ್ದು ಗೊತ್ತೇಯಿದೆ. ಇತ್ತೀಚೆಗೆ ಕಥೆಯ ಮುಂದುವರೆದ ಭಾಗ ಕೂಡ ಪ್ರೇಕ್ಷಕರ ಮುಂದೆ ಬಂದು ಸದ್ದು ಮಾಡಿತ್ತು. ಆಕಾಶ್ ಶ್ರೀವತ್ಸ ನಿರ್ದೇಶನದ ಈ ಸಿನಿಮಾ ರಮೇಶ್ ಅರವಿಂದ್ಗೆ ಹೊಸ ಇಮೇಜ್ ಕೊಟ್ಟಿದೆ.

Join Our Whatsapp Group

ರಮೇಶ್ ಅರವಿಂದ್ ಮತ್ತು ನಿರ್ದೇಶಕ ಆಕಾಶ್ ಶ್ರೀವತ್ಸ ಕೈಜೋಡಿಸಿರುವ ಹೊಸ ಸಿನಿಮಾ ಹೆಸರು ‘ದೈಜಿ’. ವಿಭಾ ಕಶ್ಯಪ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ರವಿ ಕಶ್ಯಪ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸದ್ಯ ‘ದೈಜಿ’ ಚಿತ್ರದ ನಾಯಕಿಗಾಗಿ ಹುಡುಕಾಟ ಶುರುವಾಗಿದೆ.

ರಮೇಶ್ ಅರವಿಂದ್ ಹುಟ್ಟುಹಬ್ಬದ ಸಂಭ್ರಮದಲ್ಲೇ ಫಸ್ಟ್ ಲುಕ್ ಪೋಸ್ಟರ್ ಸಮೇತ ‘ದೈಜಿ’ ಸಿನಿಮಾ ಘೋಷಿಸಲಾಗಿದೆ. ಈ ಚಿತ್ರದಲ್ಲಿ ಜೋಕರ್ ರೀತಿ ಮುಖಕ್ಕೆ ಬಣ್ಣ ಬಳಿದುಕೊಂಡು ಕಿವಿಯಲ್ಲಿ ಓಲೆ, ಜುಮುಕಿ ತೊಟ್ಟು ಕಿವಿಯಲ್ಲಿ ದೊಡ್ಡ ಸೂರ್ಯಕಾಂತಿ ಹೂ ಮುಡಿದು ಕುಹಕ ನಗು ಬೀರುತ್ತಿರುವ ರಮೇಶ್ ಅರವಿಂದ್ ‘ದೈಜಿ’ ಲುಕ್ ಗಮನ ಸೆಳೆಯುತ್ತಿದೆ.

ಹಿಂದಿನ ಲೇಖನಬೆಂಗಳೂರು: ಬಸ್, ರೈಲು ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ದರೋಡೆ, ಮೂವರ ಬಂಧನ
ಮುಂದಿನ ಲೇಖನಬೆಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯ ಎಂಟು ವಲಯಗಳ 63 ಉಪವಿಭಾಗಗಳಲ್ಲಿ ಗಣೇಶ ಮಂಟಪಗಳನ್ನು ಸ್ಥಾಪಿಸಲು ಪೂರ್ವಾನುಮತಿ ನೀಡಲು ಏಕ ಗವಾಕ್ಷಿ ವ್ಯವಸ್ಥೆ