ರಾಮನಗರ: ಹಾಡಹಗಲೇ ಯುವತಿಗೆ ಚಾಕುವಿನಿಂದ ಇರಿದು ಕಿಡ್ನ್ಯಾಪ್ ಮಾಡಿದ ಘಟನೆ ರಾಮನಗರದ ಸರ್ಕಾರಿ ಮಹಿಳಾ ಕಾಲೇಜು ಬಳಿ ಆ.28ರ ಸೋಮವಾರ ನಡೆದಿದೆ.
ಸಂಜನಾ(16) ಕಿಡ್ನಾಪ್ ಆದ ಪ್ರಥಮ ಪಿಯುಸಿ ವಿದ್ಯಾರ್ಥಿನಿ.
ಇನ್ನೋವಾ ಕಾರಿನಲ್ಲಿ ಅಪಹರಣ ಮಾಡುವ ಮೊದಲು ಯುವತಿಯ ಕೈ ಹಾಗೂ ಬುಜದ ಭಾಗಕ್ಕೆ ಚಾಕು ಇರಿದಿದ್ದು, ಬಳಿಕ ಕಾರಿನಲ್ಲಿ ಕೂರಿಸಿಕೊಂಡು ಅಪಹರಿಸಿದ್ದಾರೆ.
ಸ್ಥಳಕ್ಕೆ ರಾಮನಗರ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಇನ್ನೋವಾ ಕಾರನ್ನ ಚೇಸ್ ಮಾಡಿ ಯುವಕನನ್ನು ಬಂಧಿಸಲಾಗಿದೆ. ಸಂಜನಾಳನ್ನು ರಕ್ಷಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Saval TV on YouTube