ಮನೆ ರಾಜ್ಯ ಪ್ರವಾಸಿಗರ ಸೆಳೆಯುತ್ತಿರುವ ರಂಗನತಿಟ್ಟು ಪಕ್ಷಿಧಾಮ

ಪ್ರವಾಸಿಗರ ಸೆಳೆಯುತ್ತಿರುವ ರಂಗನತಿಟ್ಟು ಪಕ್ಷಿಧಾಮ

0

ಮಂಡ್ಯ: ಚಳಿಗಾಲ ಆರಂಭವಾದ  ಹಿನ್ನಲೆ ಪ್ರಸಿದ್ದ ರಂಗನತಿಟ್ಟು ಪಕ್ಷಿಧಾಮದಲ್ಲಿ ಪಕ್ಷಿಗಳ ಕಲರವ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಪ್ರಸಿದ್ದ ರಂಗನತಿಟ್ಟು ಪಕ್ಷಿಧಾಮಕ್ಕೆ ವಂಶಾಭಿವೃದ್ಧಿಗಾಗಿ ವಿವಿಧ ಜಾತಿಯ ಪಕ್ಷಿಗಳು ಆಗಮಿಸುತ್ತಿವೆ. ದೇಶ ವಿದೇಶದಿಂದ 2 ಸಾವಿರ ಕ್ಕೂ ಹೆಚ್ಚು ಪಕ್ಷಿಗಳು ವಂಶಾಭಿವೃದ್ಧಿಗೆ ಪಕ್ಷಿಧಾಮಕ್ಕೆ ಆಗಮಿಸಿವೆ. ಪೆಲಿಕಾನ್, ಸ್ಪೂನ್ ಬಿಲ್, ಪೇಟೆಂಟ್ ಸ್ಪೋರ್ಕ್, ರಿವರ್ ಟರ್ನ್, ವೈಟ್ ಐಬಿಸ್, ಕಾರ್ಮೋರೆಂಟ್ ಸೇರಿ ಹಲವು ಬಗೆಯ ಪಕ್ಷಿಗಳ ಆಗಮನವಾಗಿದೆ.

ವಿದೇಶಿ ಪಕ್ಷಿಗಳ ಆಗಮನವಾಗುತ್ತಿದ್ದಂತೆ ಪಕ್ಷಿಧಾಮಕ್ಕೆ ಪ್ರವಾಸಿಗರ ದಂಡು ಆಗಮಿಸುತ್ತಿದೆ. ಪಕ್ಷಿಗಳ ಕಲರವ ಕೇಳಲು ಬೋಟಿಂಗ್ ನಡೆಸಿ ಕಲರವ ಕೇಳಿ ಪಕ್ಷಿ ಪ್ರಿಯರು ಸಂಭ್ರಮಿಸುತ್ತಿದ್ದಾರೆ.

ಪಕ್ಷಿಧಾಮದಲ್ಲಿನ ಪ್ರಕೃತಿ ಸೌಂದರ್ಯ  ಹಾಗು ಪಕ್ಷಿ ಕಲರವಕ್ಕೆ ಪ್ರವಾಸಿಗರು ಮನಸೋತಿದ್ದಾರೆ.

ಹಿಂದಿನ ಲೇಖನಭ್ರೂಣ ಹತ್ಯೆ ಪ್ರಕರಣ: ಮಂಡ್ಯ ಎಸ್’ಪಿ ಅವರಿಂದ ತನಿಖೆ ನಡೆಸುವಂತೆ ಗೃಹ ಸಚಿವರಿಗೆ ಪತ್ರ ಬರೆದ ಶಾಸಕ ದರ್ಶನ್ ಪುಟ್ಟಣ್ಣಯ್ಯ
ಮುಂದಿನ ಲೇಖನಹೆಚ್ಚುವರಿಯಾಗಿ 188 ಇಂದಿರಾ ಕ್ಯಾಂಟೀನ್ ಗಳ ಸ್ಥಾಪನೆ : ಮುಖ್ಯಮಂತ್ರಿ ಸಿದ್ದರಾಮಯ್ಯ