ಮನೆ ಮನರಂಜನೆ “ರಂಗನಾಯಕ’ ಟ್ರೇಲರ್‌: ಶಿವರಾತ್ರಿಗೆ ಜಗ್ಗೇಶ್‌-ಗುರುಪ್ರಸಾದ್‌ ಸಿನಿಮಾ ತೆರೆಗೆ

“ರಂಗನಾಯಕ’ ಟ್ರೇಲರ್‌: ಶಿವರಾತ್ರಿಗೆ ಜಗ್ಗೇಶ್‌-ಗುರುಪ್ರಸಾದ್‌ ಸಿನಿಮಾ ತೆರೆಗೆ

0

ನಟ ಜಗ್ಗೇಶ್‌-ಗುರುಪ್ರಸಾದ್‌ ಕಾಂಬಿನೇಶನ್‌ ನಲ್ಲಿ ಈಗಾಗಲೇ ಬಂದಿರುವ ಎರಡೂ ಸಿನಿಮಾಗಳು ಸೂಪರ್‌ ಹಿಟ್‌ ಆಗಿದ್ದು ಇತಿಹಾಸ. ಈಗ ಇದೇ ಜೋಡಿ ಸುಮಾರು 15 ವರ್ಷಗಳ ನಂತರ ಮತ್ತೆ ಒಂದಾಗಿ ತೆರೆಮೇಲೆ ಹ್ಯಾಟ್ರಿಕ್‌ ಬಾರಿಸಲು ರೆಡಿಯಾಗಿದೆ.

ಜಗ್ಗೇಶ್‌ – ಗುರು ಜೋಡಿಯ ಬಹು ನಿರೀಕ್ಷಿತ ಸಿನಿಮಾ “ರಂಗನಾಯಕ’ ಬಿಡುಗಡೆಗೆ ಕೌಂಟ್‌ಡೌನ್‌ ಶುರುವಾಗಿದೆ. ಇದೇ ಮಾರ್ಚ್‌ 8ರ ಶಿವರಾತ್ರಿ ಹಬ್ಬದಂದು “ರಂಗನಾಯಕ’ನನ್ನು ಪ್ರೇಕ್ಷಕರ ಮುಂದೆ ಬರಲಿದ್ದು, ಈಗ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ.

ಡಾ. ರಾಜ್‌ ಕುಮಾರ್‌, ಡಾ. ವಿಷ್ಣು ವರ್ಧನ್‌, ಅಂಬರೀಶ್‌, ಕಲ್ಪನಾ, ದರ್ಶನ್‌, ಸುದೀಪ್‌, ಯಶ್‌ ಸೇರಿದಂತೆ ಅನೇಕರನ್ನು ಟ್ರೇಲರ್‌ನಲ್ಲಿ ತೋರಿಸಲಾಗಿದೆ. ಅದಕ್ಕೊಂದು ಕಾರಣವೂ ಇದೆ. ಜೊತೆಗೆ ಗುರುಪ್ರಸಾದ್‌ ಕೆಲವು ನಿರ್ದೇಶಕರನ್ನು ತಮ್ಮದೇ ಶೈಲಿಯಲ್ಲಿ ಕೆಣಕಿದ್ದಾರೆ. ಅದರಾಚೆ ಜಗ್ಗೇಶ್‌ ಮ್ಯಾನರಿಸಂ, ಗುರು ಸಂಭಾಷಣೆ ಗಮನ ಸೆಳೆಯುತ್ತಿದೆ.  ಮಾ. 17ರಂದು ಜಗ್ಗೇಶ್‌ ಹುಟ್ಟು ಹಬ್ಬವಿದೆ. ವಾರಕ್ಕೂ ಮುನ್ನವೇ ಉಡುಗೊರೆಯಾಗಿ ಈ ಚಿತ್ರ ತೆರೆ ಕಾಣಲಿದೆ. ಈಗಾಗಲೇ “ಜೀ ಸ್ಟುಡಿಯೋಸ್‌’ ಸಂಸ್ಥೆ “ರಂಗನಾಯಕ’ ಸಿನಿಮಾದ ವಿತರಣಾ ಹಕ್ಕುಗಳನ್ನು ಪಡೆದುಕೊಂಡಿದ್ದು, ರಾಜ್ಯಾದ್ಯಂತ ಸಿನಿಮಾವನ್ನು ಬಿಡುಗಡೆ ಮಾಡಲಿದೆ.

ಇನ್ನು ಜಗ್ಗೇಶ್‌ – ಗುರುಪ್ರಸಾದ್‌ ಅವರ ಈ ಕಾಂಬೋ ಸಿನಿಮಾವನ್ನು “ವಿಖ್ಯಾತ್‌ ಚಿತ್ರ ಪ್ರೊಡಕ್ಷನ್ಸ್‌’ ಬ್ಯಾನರ್‌ ನಲ್ಲಿ ಎ. ಆರ್‌. ವಿಖ್ಯಾತ್‌ ನಿರ್ಮಿಸುತ್ತಿದ್ದಾರೆ. “ವಿಭಿನ್ನ ಕಥಾಹಂದರ, ಜಗ್ಗೇಶ್‌ ಅವರ ವಿನೂತನ ಗೆಟಪ್‌, ಅದ್ಧೂರಿ ಸೆಟ್‌, ಅನೂಪ್‌ ಸೀಳಿನ್‌ ಸಂಗೀತ ಎಲ್ಲವೂ “ರಂಗನಾಯಕ’ ಸಿನಿಮಾದ ಪ್ಲಸ್‌ ಪಾಯಿಂಟ್‌. ಕನ್ನಡ ಪ್ರೇಕ್ಷಕರಿಗೆ “ರಂಗನಾಯಕ’ ಭರಪೂರ ಮನರಂಜನೆ ನೀಡಲಿದೆ’ ಎಂಬುದು ನಿರ್ಮಾಪಕರ ವಿಶ್ವಾಸದ ಮಾತು.

ಹಿಂದಿನ ಲೇಖನತನ್ನ ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ರಾಜ್ಯ ಸರ್ಕಾರ ಕೇಂದ್ರದ ಮೇಲೆ ಬೆರಳು ತೋರುತ್ತಿದೆ: ಸಿ.ಟಿ. ರವಿ
ಮುಂದಿನ ಲೇಖನಆಟೋಗಾಗಿ ಕಾಯುತ್ತಿದ್ದ ಅಪರಿಚಿತ ಮಹಿಳೆ ಕರೆದೊಯ್ದು ಅತ್ಯಾಚಾರವೆಸಗಿ ಕೊಲೆ: ಆರೋಪಿ ಬಂಧನ