ಮನೆ ಉದ್ಯೋಗ ರಾಣಿ ಚನ್ನಮ್ಮ ವಿವಿ: ತಾತ್ಕಾಲಿಕ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ರಾಣಿ ಚನ್ನಮ್ಮ ವಿವಿ: ತಾತ್ಕಾಲಿಕ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

0

ಬೆಂಗಳೂರು: ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ತಾತ್ಕಾಲಿಕ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ವಿ.ವಿ.ಯ ವಿವಿಧ ಸ್ನಾತಕೋತ್ತರ ಅಧ್ಯಯನ ವಿಭಾಗಗಳಲ್ಲಿ ನೇಮಕಾತಿ ನಡೆಯಲಿದೆ.


ಹುದ್ದೆಗಳು: ಒಟ್ಟು 51 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಯಾವ ವಿಭಾಗದಲ್ಲಿ ಎಷ್ಟು ಹುದ್ದೆಗಳಿವೆ?
ಕನ್ನಡ – 4
ಅರ್ಥಶಾಸ್ತ್ರ – 2
ವಾಣಿಜ್ಯ – 4
ಎಂಎಸ್​ಡಬ್ಲ್ಯೂ – 2
ಇಂಗ್ಲಿಷ್​​ – 3
ಕ್ರಿಮಿನಾಲಜಿ ಮತ್ತು ಫಾರೆನ್ಸಿಕ್​ ಸೈನ್ಸ್​ – 1
ಕಂಪ್ಯೂಟರ್​​ ಸೈನ್ಸ್​​ – 8
ಶಿಕ್ಷಣ – 1
ಇತಿಹಾಸ – 3
ರಸಾಯನಶಾಸ್ತ್ರ – 1
ಭೌತಶಾಸ್ತ್ರ – 3
ಪ್ರಾಣಿಶಾಸ್ತ್ರ – 5
ಸಸ್ಯಶಾಸ್ತ್ರ – 5
ಪತ್ರಿಕೋದ್ಯಮ – 3
ಭೂಗೋಳಶಾಸ್ತ್ರ – 1
ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ – 2
ಗಣಿತಶಾಸ್ತ್ರ – 3
ವಿದ್ಯಾರ್ಹತೆ: ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.
ನೇಮಕಾತಿ ಅವಧಿ: 10 ತಿಂಗಳು.
ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗುವ ಮೊದಲು ವಿ.ವಿ.ಯ ಅಧಿಕೃತ ಜಾಲತಾಣದಲ್ಲಿನ ಗೂಗಲ್​ ಶೀಟ್​ ಲಿಂಕ್​ ಮೂಲಕ ಅರ್ಜಿ ಭರ್ತಿ ಮಾಡಬೇಕು. ಅರ್ಜಿ ಹಾಗೂ ಮೂಲ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು. ಮೌಖಿಕ ಸಂದರ್ಶನದ ದಿನಾಂಕ ಮತ್ತು ಸಮಯವನ್ನು ವಿಶ್ವವಿದ್ಯಾಲಯದ ಜಾಲತಾಣದಲ್ಲಿ ಮುಂಬರುವ ದಿನಗಳಲ್ಲಿ ಪ್ರಕಟಿಸಲಾಗುತ್ತದೆ.
ಅಕ್ಟೋಬರ್​ 14ರಿಂದ ಗೂಗಲ್​ ಶೀಟ್​ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕಡೇಯ ದಿನಾಂಕ ಅಕ್ಟೋಬರ್​ 30. ಈ ಕುರಿತು ಹೆಚ್ಚಿನ ಮಾಹಿತಿಗೆ rcub.ac.in ಇಲ್ಲಿಗೆ ಭೇಟಿ ನೀಡಿ.