ಹಾಸನ: ಮಹಿಳೆಯೊಬ್ಬರ ಮೇಲೆ ಅತ್ಯಾಚಾರದ ಆರೋಪದ ಪ್ರಕರಣದಲ್ಲಿ ನಾಳೆ ಜೂ. ೭ರ ವರೆಗೂ ನ್ಯಾಯಾಂಗ ಬಂಧನದಲ್ಲಿರುವ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಅವರ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.
ಹಾಸನದ ೨ನೇ ಹೆಚ್ಚುವರಿ ಸತ್ರ ನ್ಯಾಯಾಲಯದಲ್ಲಿ ಇಂದು ದೇವರಾಜೇಗೌಡ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಯಿತು. ಆದರೆ ನ್ಯಾಯಾಧೀಶರು ದೇವರಾಜೇಗೌಡರ ಜಾಮೀನು ಅರ್ಜಿಯನ್ನು ವಜಾ ಮಾಡಿ ಕೋರ್ಟ್ ಆದೇಶ ಹೊರಡಿಸಿದೆ. ದೇವರಾಜೇಗೌಡ ಕಳೆದ ೨೫ ದಿನಗಳಿಂದ ಹಾಸನ ಕಾರಗೃಹದಲ್ಲಿದ್ದಾರೆ.
Saval TV on YouTube