ಬೆಂಗಳೂರು: ಕಿರುತೆರೆ ಜಗತ್ತಿನಲ್ಲಿ “ಕಾಮಿಡಿ ಕಿಲಾಡಿಗಳು” ಶೋ ಮೂಲಕ ಪ್ರಖ್ಯಾತಿ ಗಳಿಸಿದ್ದ ನಟ ಮಡೆನೂರು ಮನು ಈಗ ದೊಡ್ಡ ವಿವಾದದಲ್ಲಿ ಸಿಲುಕಿದ್ದಾರೆ. ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದ್ದು, ಪ್ರಕರಣ ಸಂಬಂಧ FIR ಕೂಡ ದಾಖಲಾಗಿದೆ.
ಕಿರುತೆರೆ ನಟಿಯೊಬ್ಬರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಈ ಘಟನೆ ಸಂಬಂಧ ತನಿಖೆ ಆರಂಭವಾಗಿದೆ ಹಾಗೂ ಮನು ಅವರನ್ನು ಹಿಡಿಯಲು ಹುಡಕಾಟ ಆರಂಭಿಸಲಾಗಿದೆ.
ಇದೇ ಮಧ್ಯೆ, ಮನು ಅಭಿನಯಿಸಿರುವ “ಈ ಕುಲದಲ್ಲಿ ಕೀಳ್ಯಾವೋದು” ಎಂಬ ಹೊಸ ಸಿನಿಮಾ ನಾಳೆ ರಿಲೀಸ್ ಆಗಬೇಕಿತ್ತು. ಆದರೆ ಇದರ ಮಧ್ಯೆ ನಟ ಮಡೆನೂರು ಮನು ಮೇಲೆ ಅತ್ಯಾಚಾರದ ಆರೋಪ ಕೇಳಿ ಬಂದಿದೆ. ಇದೀಗ ಈ ಆರೋಪ ಹಿನ್ನೆಲೆಯಲ್ಲಿ ಸಿನಿಮಾ ಬಿಡುಗಡೆಗೂ ತಾತ್ಕಾಲಿಕ ಅನಿಶ್ಚಿತತೆ ಎದುರಾಗಿದೆ.














