ಮನೆ ಮನೆ ಮದ್ದು ದದ್ದು ರೋಗ

ದದ್ದು ರೋಗ

0

1. ಓಮು ಕಾಳನ್ನು ಪುಡಿ ಮಾಡಿ, ಈರುಳ್ಳಿ ರಸದಲ್ಲಿ ಸೇರಿಸಿ, ಚರ್ಮದ ಮೇಲೆ ಲೇಪಿಸುವುದರಿಂದ ದದ್ದು ರೋಗ ನಿವಾರಣೆ ಆಗುವುದು.

Join Our Whatsapp Group

 ಪಾಂಡು ರೋಗ :.

1. ಪ್ರತಿದಿನವೂ ಮಧ್ಯಾಹ್ನ, ರಾತ್ರಿ ಮೇಕೆ ಹಾಲಿನಿಂದ ಮಜ್ಜಿಗೆ ಮಾಡಿ ಬಿಡದೆ ಸೇವಿಸುತ್ತಿದ್ದರೆ ಪಾಂಡುರೋಗದಿಂದ ಪಾರಾಗಬಹುದು.

 ಪಾರ್ಶ್ವವಾಯು ರೋಗ :

1. ಬೆಳ್ಳುಳ್ಳಿ ಬೀಜವನ್ನು ಅರೆದು, ಒಂದು ಬಟ್ಟಲು ಕಾದ ಹಾಲಿನಲ್ಲಿ ಕದಡಿ ಕುಡಿಯುತ್ತಿದ್ದರೆ ಪಾಶ್ವ ವಾಯು ರೋಗ ಸುಲಭವಾಗಿ ಗುಣ ಹೊರಡುವುದು.

 ರತಿ ಸುಖ ಹೆಚ್ಚಲು :

1. ಹಾಲಿಗೆ ಏಲಕ್ಕಿ ಪುಡಿ ಸೇರಿಸಿ,ಕುದಿಸಿ ಅದಕ್ಕೆ ಮೂರು ಟೀ ಸ್ಪೂನ್ ನಷ್ಟು ಜೇನುತುಪ್ಪ ಸೇರಿಸಿ ದಿನವೂ ರಾತ್ರಿ ಮಲಗುವ ಮುನ್ನ ಸೇವಿಸುವುದರಿಂದ ಲೈಂಗಿಕ ಆಸಕ್ತಿ ಹೆಚ್ಚಾಗಿ,ರತಿ ಸುಖ ಉತ್ತಮಗೊಳ್ಳುವುದು.

2. ಕಬ್ಬಿನ ಹಾಲನ್ನು ದಿನವೂ ನಿಯಮಿತ ರೂಪದಲ್ಲಿ ಸೇವಿಸಿದವರಿಂದ ರತಿ ಸುಖ ಹೆಚ್ಚುವುದು.

3. ಕೆಂಪು ಮೂಲಂಗಿಯ ಹಲ್ವ ತಿಂದರೆ ಸಂಭೋಗ ಶಕ್ತಿ ವೃದ್ಧಿಸುವುದು.

4. ಎಳೆಯ ಸೌತೆಕಾಯಿಯನ್ನು ತಿನ್ನುವುದರಿಂದ ವೀರ್ಯವೃದ್ಧಿಯಾಗಿ ರತಿಸುಖದಲ್ಲಿ ಆಸಕ್ತಿ ಹೆಚ್ಚುವುದು.

5. ಗೋಡಂಬಿಯನ್ನು ಚೆನ್ನಾಗಿ ಸೇವಿಸುವುದರಿಂದಲೂ ರತಿ ಸುಖ ವೃದ್ಧಿಸುವುದು.

6. ಈರುಳ್ಳಿಯನ್ನು ಹೆಚ್ಚಾಗಿ ಬಳಸುವುದರಿಂದಲೂ ರತಿಸುಖ ಹೆಚ್ಚುವುದು.