ಮನೆ ರಾಷ್ಟ್ರೀಯ ಆರ್’ಬಿಐ ರೆಪೊ ದರ ಶೇ.6.5 ಏರಿಕೆ

ಆರ್’ಬಿಐ ರೆಪೊ ದರ ಶೇ.6.5 ಏರಿಕೆ

0

ಮುಂಬೈ: ಹಣದುಬ್ಬರ ತಗ್ಗಿಸಲು ಭಾರತೀಯ ರಿಸರ್ವ್​ ಬ್ಯಾಂಕ್ ಮತ್ತೆ ರೆಪೋ ದರವನ್ನು ಹೆಚ್ಚಿಸಿದೆ. 25 ಬೇಸ್​ ಪಾಯಿಂಟ್​ಗಳೊಂದಿಗೆ ಶೇ.6.5 ರಷ್ಟು ಹೆಚ್ಚಳ ಮಾಡಲಾಗಿದೆ

ಕೇಂದ್ರ ಬಜೆಟ್‌’ನ ಬಳಿಕ ನಡೆದ ಮೊದಲ ಹಣಕಾಸು ನೀತಿಯಲ್ಲಿ (ಎಂಪಿಸಿ), ಆರ್‌’ಬಿಐ ಗವರ್ನರ್ ಶಕ್ತಿತಾಂತ ದಾಸ್ ರೆಪೊ ದರ ಹೆಚ್ಚಳವನ್ನು ಪ್ರಕಟಿಸಿದ್ದಾರೆ.

ಕಳೆದ ವರ್ಷ ಮೇ ತಿಂಗಳಿನಿಂದ ಆರ್‌ಬಿಐ ಆರನೇ ಸಲ ಬಡ್ಡಿದರವನ್ನು ಹೆಚ್ಚಿಸಿದೆ. ದ್ವೈಮಾಸಿಕ ಹಣಕಾಸು ನೀತಿ ಸಮಿತಿಯ ಬಹುತೇಕ ಸದಸ್ಯರು ಹಣದುಬ್ಬರ ನಿಯಂತ್ರಣ ಮಾಡಲು ಬಡ್ಡಿದರ ಹೆಚ್ಚಳದ ಪರವಾಗಿಯೇ ಮತ ನೀಡಿದ್ದಾರೆ.

ಮುಂದಿನ ಹಣಕಾಸು ವರ್ಷದಲ್ಲಿ ಶೇ 6.4 ಬೆಳವಣಿಗೆ ದರ ಇರಲಿದೆ ಎಂದು ಆರ್‌’ಬಿಐ ಅಂದಾಜಿಸಿದೆ.

ಪ್ರಸಕ್ತ ತ್ರೈಮಾಸಿಕದಲ್ಲಿ ಚಿಲ್ಲರೆ ಹಣದುಬ್ಬರದ ಪ್ರಮಾಣವು ಶೇ 6.5 ಆಗಿರಲಿದೆ ಎಂದು ದಾಸ್ ತಿಳಿಸಿದ್ದಾರೆ. ಜಾಗತಿಕ ಆರ್ಥಿಕ ಅನಿಶ್ಚಿತತೆಯ ನಡುವೆಯೂ ಭಾರತ ಚೇತರಿಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.

ಹಿಂದಿನ ಲೇಖನಗೂಗಲ್ ಫೋಟೋ ಆ್ಯಪ್’ನಲ್ಲಿ ಹೊಸ ಫೀಚರ್
ಮುಂದಿನ ಲೇಖನದೆಹಲಿ ಅಬಕಾರಿ ನೀತಿ ಪ್ರಕರಣ: ಎಂಎಲ್’ಸಿ ಕವಿತಾರ ಮಾಜಿ ಆಡಿಟರ್ ಬಂಧನ