ಮನೆ ರಾಷ್ಟ್ರೀಯ ಸಾಲ ವಸೂಲಿ ಕಿರುಕುಳ ಮುಕ್ತಿಗೆ ಆರ್ ಬಿ ಐ ಕ್ರಮ: ಬೆಳಿಗ್ಗೆ 8ಕ್ಕೆ ಮೊದಲು ರಾತ್ರಿ...

ಸಾಲ ವಸೂಲಿ ಕಿರುಕುಳ ಮುಕ್ತಿಗೆ ಆರ್ ಬಿ ಐ ಕ್ರಮ: ಬೆಳಿಗ್ಗೆ 8ಕ್ಕೆ ಮೊದಲು ರಾತ್ರಿ 9ರ ಬಳಿಕ ಕರೆ ಮಾಡುವಂತಿಲ್ಲ

0

ಮುಂಬಯಿ: ಸಾಲಗಾರರನ್ನು ಬ್ಯಾಂಕ್ ಗಳ ಸಾಲ ವಸೂಲಿ ಕಿರುಕುಳದಿಂದ ಪಾರು ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಮುಂದಾಗಿದೆ. ಸಾಲ ವಸೂಲಿ ಮಾಡಲು ಬೆಳಿಗ್ಗೆ 8 ಗಂಟೆಗೂ ಮುನ್ನ ಹಾಗೂ ರಾತ್ರಿ 7 ಗಂಟೆಯ ನಂತರ ಸಾಲಗಾರರಿಗೆ ದೂರವಾಣಿ ಕರೆ ಮಾಡುವುದನ್ನು ತಡೆಯಲು ಆರ್ ಬಿಐ ನಿರ್ಧರಿಸಿದ್ದು, ಈ ಸಂಬಂಧ ಕರಡು ನಿಯಮಗಳನ್ನು ಸಿದ್ಧಪಡಿಸಿದೆ.

ಬ್ಯಾಂಕ್ ಮತ್ತಯ ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್ ಬಿ ಎಫ್ ಸಿ) ಪ್ರಮುಖ ಬ್ಯಾಂಕಿಂಗ್ ಕೆಲಸಗಳನ್ನು ಹೊರ ಗುತ್ತಿಗೆ ನೀಡುವಂತಿಲ್ಲ. ನೀತಿ ರೂಪಿಸುವುದು,  ಕೆವೈಸಿ ನಿಯಮಗಳ ಅನುಸರಣೆ, ಸಾಲ ಮಂಜೂರು ಸೇರಿದಂತೆ ಇನ್ನೂ ಕೆಲವು ಪ್ರಮುಖ ಕೆಲಸಗಳನ್ನು ಹೊರಗುತ್ತಿಗೆ ನೀಡದಂತೆ ನಿರ್ಬಂಧಿಸಲು ಆರ್ ಬಿಐ ಕ್ರಮ ಕೈಗೊಂಡಿದೆ. ಈ ಕುರಿತು ನವೆಂಬರ್ 28ರ ಒಳಗಾಗಿ ಸಲಹೆಗಳನ್ನು, ಪ್ರತಿಕ್ರಿಯೆಗಳನ್ನು ಆರ್ ಬಿಐ ಆಹ್ವಾನಿಸಿದೆ.

ಹಣಕಾಸು ಸಂಸ್ಥೆಗಳು ಮತ್ತು ಏಜೆಂಟರು ಸಾಲ ವಸೂಲಿ ಮಾಡುವ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯಲ್ಲಿಯೂ ಸಾಲಗಾರರ ಗೌರವಕ್ಕೆ ಚ್ಯುತಿ ಬರುವಂತೆ ನಡೆದುಕೊಳ್ಳಬಾರದು. ಸಾರ್ವಜನಿಕವಾಗಿ ಅವಹೇಳನ ಮಾಡಬಾರದು. ಸಾಲಗಾರರು/ಖಾತರಿದಾರರ ಕುಟುಂಬದ ಸದಸ್ಯರಿಗೂ ಅವಹೇಳನ ಮಾಡಬಾರದು ಎಂದು ಕರಡು ನೀತಿಯಲ್ಲಿ  ಆರ್ ಬಿಐ ತಿಳಿಸಿದೆ.

ಸಾಲಗಾರರಿಗೆ ಮೊಬೈಲ್/ ಜಾಲತಾಣಗಳ ಮೂಲಕ ಅನುಚಿತವಾದ ಮೆಸೇಜ್ ಕಳುಹಿಸುವುದು, ಬೆದರಿಕೆ ಒಡ್ಡುವುದು, ಅನಾಮಧೇಯ ನಂಬರ್ ಗಳಿಂದ ಕರೆ ಮಾಡುವುದಕ್ಕೆ ನಿರ್ಬಂಧ ಬೀಳಲಿದೆ. ಸಾಲ ಪಡೆದವರಿಗೆ/ಖಾತರಿದಾರರಿಗೆ ಸತತವಾಗಿ ಕರೆ ಮಾಡುವಂತಿಲ್ಲ  ಎಂದು ಹೇಳಿದೆ.