ಬೆಂಗಳೂರು : ಯಾವ ದಿನ ಆರ್‌ಸಿಬಿ ಫ್ರ್ಯಾಂಚೈಸಿಯ ಇತಿಹಾಸದಲ್ಲಿಯೇ ಅತ್ಯಂತ ಸಂತೋಷದ ಕ್ಷಣವಾಗಬೇಕಿತ್ತೋ, ಅದು ದುರಂತದ ಕ್ಷಣವಾಯಿತು ಎಂದು ಚಿನ್ನಸ್ವಾಮಿ ಕಾಲ್ತುಳಿತ ನೆನೆದು ವಿರಾಟ್ ಕೊಹ್ಲಿ ದುಃಖಿಸಿದ್ದಾರೆ. ದುರಂತವಾದ 3 ತಿಂಗಳ ಬಳಿಕ ಆರ್‌ಸಿಬಿ ಆಟಾಗಾರ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಸಂದೇಶವೊಂದನ್ನು ನೀಡಿದ್ದಾರೆ.
ಜೂ.4ರಂದು ನಡೆದ ಘಟನೆಯನ್ನು ಎದುರಿಸಲು ಜೀವನದಲ್ಲಿ ಯಾರಿಂದಲೂ ಸಾಧ್ಯವಿಲ್ಲ. ಯಾವ ದಿನ ಆರ್‌ಸಿಬಿ ಫ್ರ್ಯಾಂಚೈಸಿಯ ಇತಿಹಾಸದಲ್ಲಿಯೇ ಅತ್ಯಂತ ಸಂತೋಷದ ಕ್ಷಣವಾಗಬೇಕಿತ್ತೋ, ಅದು ದುರಂತವಾಗಿ ಬದಲಾಯ್ತು. ಆ ಸಮಯದಲ್ಲಿ ಜೀವ ಕಳೆದುಕೊಂಡವರು ಮತ್ತು ಗಾಯಾಳುಗಳ ಬಗ್ಗೆ ನಾನು ಚಿಂತಿತನಾಗಿದ್ದೇನೆ.
ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸಿದ್ದೇನೆ. ನೀವೆಲ್ಲರೂ ಇದೀಗ ನಮ್ಮ ಕಥೆಯ ಭಾಗವಾಗಿದ್ದೀರಿ. ಇನ್ಮುಂದೆ ನಾವು ಒಟ್ಟಾಗಿ ಕಾಳಜಿ, ಜವಾಬ್ದಾರಿ ಹಾಗೂ ಗೌರವದೊಂದಿಗೆ ಮುಂದುವರಿಯೋಣ ಎಂದು ಬರೆದು, ಆರ್‌ಸಿಬಿ ಅಧಿಕೃತ ಎಕ್ಸ್ ಖಾತೆಯ ಮೂಲಕ ಕೊಹ್ಲಿ ಸಂದೇಶ ಕೊಟ್ಟಿದ್ದಾರೆ.















