ಮನೆ ರಾಜ್ಯ ಸಮಾಜ ವಿಜ್ಞಾನ ಪಾಠದಲ್ಲಿ ‘ಸಂವಿಧಾನ ಶಿಲ್ಪಿ’ ಪದ  ಪುನರ್‌ ಸೇರ್ಪಡೆ: ಸರ್ಕಾರದ ಆದೇಶ

ಸಮಾಜ ವಿಜ್ಞಾನ ಪಾಠದಲ್ಲಿ ‘ಸಂವಿಧಾನ ಶಿಲ್ಪಿ’ ಪದ  ಪುನರ್‌ ಸೇರ್ಪಡೆ: ಸರ್ಕಾರದ ಆದೇಶ

0

ಬೆಂಗಳೂರು(Bengaluru): ಪಠ್ಯ ಪರಷ್ಕರಣೆ ವೇಳೆ 9ನೇ ತರಗತಿಯ ಸಮಾಜ ವಿಜ್ಞಾನ ಪಾಠದಲ್ಲಿ ‘ಸಂವಿಧಾನ ಶಿಲ್ಪಿ’ ಎಂಬ ಪದವನ್ನು ಕೈಬಿಟ್ಟಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಪದವನ್ನು ಪುನರ್ ಸೇರ್ಪಡೆಗೊಳಿಸುವಂತೆ ಸರ್ಕಾರ ಆದೇಶ ನೀಡಿದೆ.

9ನೇ ತರಗತಿ ಸಮಾಜ ವಿಜ್ಞಾನದ‌ ಭಾಗ 1ರ ‘ನಮ್ಮ ಸಂವಿಧಾನ’ ಪಾಠದಲ್ಲಿ ಸಂವಿಧಾನದ ಕರಡು ರಚನೆ ಬಗ್ಗೆ ಉಲ್ಲೇಖವಿದೆ. ಪರಿಷ್ಕೃತ ಪಠ್ಯದಲ್ಲಿ ‘ಇವರು ಸಂವಿಧಾನ ರಚನೆಗೆ ನೀಡಿರುವ ಕೊಡುಗೆಯನ್ನು ಆಧರಿಸಿ ಅವರನ್ನು ‘ಸಂವಿಧಾನ ಶಿಲ್ಪಿ’ ಎಂದು ಕರೆಯಲಾಗಿದೆ’ ಎಂಬ ವಾಕ್ಯವು ಇಲ್ಲವಾಗಿದೆ. ಇದರ ಪುನರ್ ಸೇರ್ಪಡೆ ಮಾಡಿ ತಿದ್ದೋಲೆ ಹೊರಡಿಸುವಂತೆ ಸೂಚಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಅದೇ ರೀತಿ, 7ನೇ ತರಗತಿ ಸಮಾಜ ವಿಜ್ಞಾನ ಭಾಗ 1ರ ಭಕ್ತಿ ಪಂಥ ಹಾಗೂ ಸೂಫಿ ಸಂತರ ಪಾಠವನ್ನು ಪೂರ್ಣವಾಗಿ ಕೈಬಿಡಲಾಗಿತ್ತು. ಇದನ್ನು ಸೇರ್ಪಡೆಗೊಳಿಸಿ ತಿದ್ದೋಲೆ ಹೊರಡಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ಸರ್ಕಾರದ ಆದೇಶ ತಿಳಿಸಿದೆ.