ಬೆಂಗಳೂರು(Bengaluru): ಪಿಎಸ್ಐ(PSI) ನೇಮಕಾತಿಗೆ(recruitment) ಮರುಪರೀಕ್ಷೆ(Re-exam) ನಿರ್ಧಾರದ ಮೂಲಕ ನೊಂದ ಅರ್ಹ ಅಭ್ಯರ್ಥಿಗಳಿಗೆ ಸರ್ಕಾರವು ನ್ಯಾಯ ಒದಗಿಸಿದೆ ಎಂದು ಐಪಿಎಸ್ ಅಧಿಕಾರಿ(IPS Officer) ಡಿ. ರೂಪಾ(D.Roopa) ಹೇಳಿದ್ದಾರೆ.
ಇಂದು ಟ್ವೀಟ್ ಮಾಡಿರುವ ಡಿ.ರೂಪಾ, ನೇಮಕಾತಿ ಉಸ್ತುವಾರಿ ಹೊತ್ತಿರುವ ಹಿರಿಯ ಅಧಿಕಾರಿಗಳಿಂದ ಹಿಡಿದು ಎಲ್ಲರಿಗೂ ಅಮಾನತು ಮುಂತಾದ ಶಿಸ್ತು ಕ್ರಮ(ಟ್ರಾನ್ಸ್ಫರ್ ಶಿಸ್ತುಕ್ರಮ ಅಲ್ಲ) ಆದಾಗ ಮಾತ್ರ ಮುಂದೆ ಇಂತಹ ಘಟನೆ ತಡೆಯಲು ಸಾಧ್ಯ. ಇಲ್ಲವಾದಲ್ಲಿ ಅಧಿಕಾರಿಗಳು ಆಡಿದ್ದೇ ಆಟ ಎಂದು ಹೇಳಿದ್ದಾರೆ.
545 ಪಿಎಸ್ಐ ಹುದ್ದೆ ನೇಮಕಾತಿಗೆ ಮರುಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಿತ್ರದುರ್ಗದಲ್ಲಿ ಘೋಷಿಸಿದರು.