ಮೈಸೂರು: ವಿ-ಕೇರ್ ಸಂಸ್ಥೆ ಆಶ್ರಯದಲ್ಲಿ ‘ಪುಸ್ತಕ ಓದು’ ಕಾರ್ಯಕ್ರಮದ ಎರಡನೇ ಸಂಚಿಕೆಯನ್ನು ಆಗಸ್ಟ್ 25 ಭಾನುವಾರದಂದು ಬೆಳಿಗ್ಗೆ 10.30ಕ್ಕೆ ಹೂಟಗಳ್ಳಿಯ ಕೆಎಚ್ ಬಿ ಕಾಲೋನಿಯ ಗ್ರೂಪ್-2ರ ಹೆಚ್ ಐ ಜಿ-1, ನಂ.29 ರಲ್ಲಿನ ವಿ-ಕೇರ್ ಸಂಸ್ಥೆಯ ತಾಂಜಲಾದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಬಾರಿ ಪೂರ್ಣಚಂದ್ರ ತೇಜಸ್ವಿಯವರ ಪರಿಸರದ ಕತೆ ಪುಸ್ತಕದಿಂದ ಆಯ್ದ ‘ಎಂಗ್ಟನ ಪುಂಗಿ’ ಹಾಗೂ ‘ಮಾಸ್ತಿ ಮತ್ತು ಭೈರ ‘ ಕಥೆಗಳನ್ನು ಓದುವುದು ಹಾಗೂ ಸಮಯ ಉಳಿದರೆ ಇನ್ನಿತರ ಕಥೆಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಲಾಗುವುದು. ಪುಸ್ತಕ ಓದಿನ ಜೊತೆ ಚರ್ಚೆ, ವಿಶ್ಲೇಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪುಸ್ತಕ ಓದು ಕಾರ್ಯಕ್ರಮ ಅಗತ್ಯವಿರುವ ಸ್ಥಳಗಳಲ್ಲಿ ಆಯೋಜನೆ ಮಾಡಿಕೊಂಡು ಬರಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗಿದೆ.ಮಕ್ಕಳು ಸೇರಿದಂತೆ ಹಿರಿಯರು ಕೂಡ ಗ್ಯಾಜೆಟ್ ಗಳಿಗೆ ಅಡಿಕ್ಟ್ ಆಗಿದ್ದಾರೆ.ಇದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹಾಗೂ ಸಾಹಿತಿಗಳು, ಲೇಖಕರನ್ನು ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕನ್ನಡ ಭಾಷೆಯ ಸ್ಪಷ್ಟವಾಗಿ ಓದುವುದನ್ನು ಉತ್ತೇಜಿಸುವುದು ಹಾಗೂ ಜ್ಞಾನ ಪಸರಿಸುವ ಸಲುವಾಗಿ ಕಾರ್ಯಕ್ರಮ ಪ್ರಾರಂಭ ಮಾಡಲಾಗಿದೆ. ಸರ್ಕಾರಿ ಶಾಲಾ, ಕಾಲೇಜುಗಳು, ಸಂಘ ಸಂಸ್ಥೆಗಳು, ಜನರು ಹೆಚ್ಚು ಸೇರುವ ಉದ್ಯಾನವನಗಳಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತದೆ.