ಮನೆ ಮನರಂಜನೆ ಸೆ.18 ರಂದು ರಿಯಲ್ ಸ್ಟಾರ್ ಉಪೇಂದ್ರ  ಹುಟ್ಟು ಹಬ್ಬ: ರ್ಊರ್ವಶಿ ಥಿಯೇಟರ್ ನಲ್ಲಿ UI ಸಿನಿಮಾದ...

ಸೆ.18 ರಂದು ರಿಯಲ್ ಸ್ಟಾರ್ ಉಪೇಂದ್ರ  ಹುಟ್ಟು ಹಬ್ಬ: ರ್ಊರ್ವಶಿ ಥಿಯೇಟರ್ ನಲ್ಲಿ UI ಸಿನಿಮಾದ ಟೀಸರ್ ರಿಲೀಸ್ 

0

ರಿಯಲ್ ಸ್ಟಾರ್ ಉಪೇಂದ್ರ ನಟನೆಯ ‘UI’ ಸಿನಿಮಾ ರಿಲೀಸ್ ಡೇಟ್ ಹತ್ತಿರವಾಗ್ತಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ವರ್ಕ್ ಭರದಿಂದ ಸಾಗ್ತಿದ್ದು, ಟೀಸರ್ ರಿಲೀಸ್ ಅಪ್ಡೇಟ್ ಸಿಕ್ಕಿದೆ.

ಇತ್ತೀಚೆಗೆ ಟೀಸರ್ ರಿಲೀಸ್ ಬಗ್ಗೆ ಚಿತ್ರತಂಡ ಸ್ಪೆಷಲ್ ವಿಡಿಯೋ ಹಂಚಿಕೊಂಡಿತ್ತು. ಇದೀಗ ಮತ್ತೊಂದು ವಿಡಿಯೋ ರಿಲೀಸ್ ಆಗಿ ಗಮನ ಸೆಳೆಯುತ್ತಿದೆ.

ಈಗ ಹೊಸ ವಿಡಿಯೋದಲ್ಲಿ ಅಭಿಮಾನಿಗಳೇ ಉಪೇಂದ್ರ ಮನೆ ಮುಂದೆ ಬಂದುಬಿಟ್ಟಿದ್ದಾರೆ. ನಮಗೆ ‘UI’ ಸಿನಿಮಾ ಟೀಸರ್ ಬೇಕೇ ಬೇಕು, ಯಾವಾಗ ರಿಲೀಸ್ ಅಂತ ಕೇಳಿದ್ದಾರೆ. ಉಪ್ಪಿ ಏನೋ ಒಂದು ಹೇಳಿ ಎಲ್ಲರನ್ನು ಸಾಗ ಹಾಕಲು ನೋಡಿದ್ದಾರೆ. ಆದರೆ ನಿರ್ಮಾಪಕರ ಬಾಮೈದ ಅಭಿಮಾನಿಗಳ ಕೈಲಿ ಉಪ್ಪಿನ ಸರಿಯಾಗಿ ತಗ್ಲಾಕಿದ್ದಾನೆ. ಇದು ಜಸ್ಟ್ ಸಿನಿಮಾ ಪ್ರಮೋಷನ್ ಗಾಗಿ ಮಾಡಿರೋ ಆಕ್ಟ್ ಅಷ್ಟೇ. ಉಪೇಂದ್ರ ಕೊನೆಗೂ ಟೀಸರ್ ರಿಲೀಸ್ ಡೇಟ್, ಪ್ಲೇ ಹೇಳುವಂತೆ ಮಾಡಿದ್ದಾರೆ. ಅಲ್ಲಿಗೆ ನಿರ್ಮಾಪಕರು ಖುಷಿಯಾಗಿದ್ದಾರೆ.

“ಇದೇ ಸೆಪ್ಟೆಂಬರ್ 18, ಅಭಿಮಾನಿಗಳ ದಿನ(ತಮ್ಮ ಹುಟ್ಟುಹಬ್ಬ) ಊರ್ವಶಿ ಥಿಯೇಟರ್ ನಲ್ಲಿ UI ಸಿನಿಮಾ ಟೀಸರ್ ರಿಲೀಸ್ ಆಗುತ್ತದೆ” ಎಂದು ಉಪೇಂದ್ರ ಘೋಷಿಸಿದ್ದಾರೆ. ‘UI’ ಚಿತ್ರಕ್ಕೆ ಉಪೇಂದ್ರ ಆಕ್ಷನ್ ಕಟ್ ಹೇಳಿದ್ದಾರೆ.

ರೀಷ್ಮಾ ನಾಣಯ್ಯ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ. ಕೆ. ಪಿ ಶ್ರೀಕಾಂತ್ ಹಾಗೂ ಜಿ. ಮನೋಹರನ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ನಿಧಿ ಸುಬ್ಬಯ್ಯ, ಇಂದ್ರಜಿತ್ ಲಂಕೇಶ್ ಹಾಗೂ ಪ್ರಶಾಂತ್ ಸಂಬರಗಿ ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ.