ಮನೆ ಮನರಂಜನೆ ರಿಯಲ್‌ ಸ್ಟಾರ್‌ ಉಪೇಂದ್ರ ಅವರ ʼಯುಐʼ ಚಿತ್ರ ಡಿಸೆಂಬರ್‌ 20ರಂದು ತೆರೆಗೆ

ರಿಯಲ್‌ ಸ್ಟಾರ್‌ ಉಪೇಂದ್ರ ಅವರ ʼಯುಐʼ ಚಿತ್ರ ಡಿಸೆಂಬರ್‌ 20ರಂದು ತೆರೆಗೆ

0

ಬೆಂಗಳೂರು: ಅನೌನ್ಸ್‌ ಮಾಡಿದ ದಿನದಿಂದ ಒಂದಲ್ಲಾ ಒಂದು ವಿಚಾರದಲ್ಲಿ ಕುತೂಹಲ ಕೆರಳಿಸಿರುವ ರಿಯಲ್‌ ಸ್ಟಾರ್‌ ಉಪೇಂದ್ರ ಅವರ ʼಯುಐʼ (UI) ಸಿನಿಮಾದ ಬಗ್ಗೆ ದೊಡ್ಡ ಅಪ್ಡೇಟ್‌ ಒಂದು ಇದೀಗ ಹೊರ ಬಿದ್ದಿದೆ.

Join Our Whatsapp Group

ಈಗಾಗಲೇ ಟೀಸರ್‌, ಹಾಡುಗಳ ಮೂಲಕ ಚಿತ್ರದ ತುಣುಕಿನೊಂದಿಗೆ ಜನರ ಎದುರು ಬಂದಿದ್ದ ಉಪೇಂದ್ರ ಇದೀಗ ಚಿತ್ರದ ಬಿಡುಗಡೆಯ ದಿನಾಂಕ ನಿಗದಿ ಮಾಡಿದ್ದಾರೆ. ಈ ಹಿಂದೆ ನವೆಂಬರ್‌ ನಲ್ಲಿ ಚಿತ್ರ ರಿಲೀಸ್‌ ಮಾಡುವ ಬಗ್ಗೆ ಉಪೇಂದ್ರ ಸುಳಿವು ನೀಡಿದ್ದರು. ಆದರೆ ಇಂದು ಅಧಿಕೃತವಾಗಿ ರಿಲೀಸ್‌ ಬಗ್ಗೆ ಮಾಹಿತಿ ನೀಡಿದ್ದಾರೆ. ಅಂದಹಾಗೆ ಉಪೇಂದ್ರ ಅವರು ನಿರ್ದೇಶನ ಮಾಡಿ ನಟಿಸಿರುವ ʼಯು-ಐʼ ಚಿತ್ರವು ಡಿಸೆಂಬರ್‌ 20ರಂದು ತೆರೆಗೆ ಬರಲಿದೆ.

ಸದಾ ಪ್ರೇಕ್ಷಕರ ತಲೆಗೆ ಹುಳ ಬಿಡುವ ಉಪೇಂದ್ರ ಅವರು ʼಯು-ಐʼ ಚಿತ್ರ ರಿಲೀಸ್‌ ಪೋಸ್ಟರ್‌ ನಲ್ಲಿಯೂ ಟ್ವಿಸ್ಟ್‌ ನೀಡಿದ್ದಾರೆ. “ಇಷ್ಟ್ ದಿನ ಸಿನಿಮಾ ನೋಡಿ ನೀವ್ ಹಿಟ್ / ಫ್ಲಾಪ್ ಅಂತ ಹೇಳ್ತಿದ್ರೀ, ಈ ಸಿನಿಮಾ ನಿಮ್ಮನ್ ನೋಡಿ…..” ಎಂದು ಬರೆಯುವ ಮೂಲಕ ಮತ್ತಷ್ಟು ಹುಳ ಬಿಡುವ ಕೆಲಸ ಮಾಡಿದ್ದಾರೆ ಉಪೇಂದ್ರ.

ಜಿ ಮನೋಹರನ್‌ ಮತ್ತು ಶ್ರೀಕಾಂತ್‌ ಕೆಪಿ ನಿರ್ಮಾಣದಲ್ಲಿ ತಯಾರಾಗಿರುವ ʼಯು-ಐʼ ಸಿನಮಾ ಪ್ಯಾನ್‌ ಇಂಡಿಯಾ ಚಿತ್ರವಾಗಿದ್ದು, ಕನ್ನಡದೊಂದಿಗೆ ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ತೆರೆಗೆ ಬರಲಿದೆ.

ಚಿತ್ರದಲ್ಲಿ ಉಪೇಂದ್ರ ಅವರ ಜತೆ ರೀಶ್ಮಾ ನಾಣಯ್ಯ, ಮುರಳಿ ಶರ್ಮಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಅಜನೀಶ್‌ ಲೋಕನಾಥ್‌ ಸಂಗೀತವಿದೆ.