ಮನೆ ಉದ್ಯೋಗ ತುಮಕೂರು ಹಾಲು ಉತ್ಪಾದಕರ ಸಂಘದಿಂದ ನೇಮಕಾತಿ: ಅರ್ಜಿ ಸಲ್ಲಿಸಲು ಏ.17 ಕೊನೆ ದಿನ

ತುಮಕೂರು ಹಾಲು ಉತ್ಪಾದಕರ ಸಂಘದಿಂದ ನೇಮಕಾತಿ: ಅರ್ಜಿ ಸಲ್ಲಿಸಲು ಏ.17 ಕೊನೆ ದಿನ

0

ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘವು ವಿವಿಧ 219 ಪೋಸ್ಟ್ ಗಳ ಭರ್ತಿಗೆ ಕಳೆದ ತಿಂಗಳು ನೋಟಿಫಿಕೇಶನ್ ಬಿಡುಗಡೆ ಮಾಡಿತ್ತು. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೆರಳೆಣಿಗೆ ದಿನಗಳಷ್ಟೇ ಬಾಕಿ ಇದ್ದು, ಆಸಕ್ತರು ಏಪ್ರಿಲ್ 17 ರ ರಾತ್ರಿ 11.45 ಗಂಟೆವರೆಗೆ ಆನ್ ಲೈನ್ ಅಪ್ಲಿಕೇಶನ್ ಸಲ್ಲಿಸಬಹುದು. ಈ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತದೆ.

Join Our Whatsapp Group

ಹುದ್ದೆಗಳ ವಿವರ

ಸಹಾಯಕ ವ್ಯವಸ್ಥಾಪಕರು (ಇಲೆಕ್ಟ್ರಾನಿಕ್ಸ್ ಮತ್ತು ಕಂಮ್ಯುನಿಕೇಷನ್) : 01

ಸಹಾಯಕ ವ್ಯವಸ್ಥಾಪಕರು (ಮೆಕ್ಯಾನಿಕಲ್ ಇಂಜಿನಿಯರ್) : 01

ಸಹಾಯಕ ವ್ಯವಸ್ಥಾಪಕರು (ಎಫ್ ಅಂಡ್ ಎಫ್ ) : 03

ಸಹಾಯಕ ವ್ಯವಸ್ಥಾಪಕರು (ಪ.ವೈ ಮತ್ತು ಕೃ.ಗ) : 14

ಮಾರುಕಟ್ಟೆ ಅಧಿಕಾರಿ: 03

ತಾಂತ್ರಿಕ ಅಧಿಕಾರಿ (ಡಿ.ಟಿ) : 11

ತಾಂತ್ರಿಕ ಅಧಿಕಾರಿ (ವಿವಿಧ ವಿಭಾಗ) : 3

ವಿಸ್ತರಣಾ ಅಧಿಕಾರಿ (ದರ್ಜೆ- 3: 22

ವೈದ್ಯಾಧಿಕಾರಿ : 01

ಆಡಳಿತಾಧಿಕಾರಿ: 01

ಖರೀದಿ (ಉಗ್ರಾಣಾಧಿಕಾರಿ) : 03

MES (ಸಿಸ್ಟಮ್ಸ್ ಅಧಿಕಾರಿ) : 03

ಲೆಕ್ಕಾಧಿಕಾರಿ : 02

ಕೆಮಿಸ್ಟ್ ದರ್ಜೆ-2: 04

ಕಿರಿಯ ಸಿಸ್ಟಂ ಆಪರೇಟರ್ : 10

ಕೋ-ಆರ್ಡಿನೇಟರ್ (ಪ್ರೊಟೆಕ್ಷನ್) : 02

ಟೆಲಿಫೋನ್ ಆಪರೇಟರ್ : 02

ಕಿರಿಯ ತಾಂತ್ರಿಕ (ವಿವಿಧ ಟ್ರೇಡ್): 59

MES (ದರ್ಜೆ 01) : 02

ಆಡಳಿತ ಸಹಾಯಕ ದರ್ಜೆ 02: 13

ಲೆಕ್ಕ ಸಹಾಯಕ ದರ್ಜೆ-2 : 12

ಮಾರುಕಟ್ಟೆ ಸಹಾಯಕ ದರ್ಜೆ-2: 18

ಖರೀದಿ ಸಹಾಯಕ (ದರ್ಜೆ-2) : 06

ಚಾಲಕರು : 08

ಲ್ಯಾಬ್ ಸಹಾಯಕ ದರ್ಜೆ-2(ವಿವಿಧ ವಿಭಾಗ): 02

ಒಟ್ಟು ಹುದ್ದೆಗಳು : 219

ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಹುದ್ದೆಗಳಿಗೆ ಅನುಗುಣವಾಗಿ ಎಸ್ ಎಸ್ ಎಲ್ ಸಿ / ಪಿಯುಸಿ / ಪದವಿ / ಸ್ನಾತಕೋತ್ತರ ಪದವಿ / ಬಿಇ / ಡಿಪ್ಲೊಮ ಪಾಸಾಗಿರಬೇಕು. ಹುದ್ದೆವಾರು ವಿದ್ಯಾರ್ಹತೆ ಹಾಗೂ ವೇತನ ಶ್ರೇಣಿ ಚೆಕ್ ಮಾಡಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ ಓದಿರಿ.

ಅಪ್ಲಿಕೇಶನ್ ಅನ್ನು ಆನ್ ಲೈನ್ ಮೂಲಕ ಮಾತ್ರ ಸಲ್ಲಿಸಬೇಕು. ಒಂದು ಹುದ್ದೆಗೆ ಒಂದೇ ಅರ್ಜಿ ಸಲ್ಲಿಸಬೇಕು. ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದಲ್ಲಿ, ಒಂದೇ ನೊಂದಣಿ ಸಂಖ್ಯೆಯಡಿಯಲ್ಲಿಯೇ ಅರ್ಜಿ ಸಲ್ಲಿಸಬಹುದು.

ಅರ್ಜಿ ಶುಲ್ಕ ವಿವರ

ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ರೂ.500.

ಇತರೆ ವರ್ಗದ ಅಭ್ಯರ್ಥಿಗಳಿಗೆ ಶುಲ್ಕ ರೂ.1000.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 17-04-2023 ರ ರಾತ್ರಿ 11.45 ಗಂಟೆವರೆಗೆ.

ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ: 17-04-2023 ರ ರಾತ್ರಿ 11.59 ಗಂಟೆವರೆಗೆ.

ವಯಸ್ಸಿನ ಅರ್ಹತೆಗಳು

ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ ವಯಸ್ಸಿನ ಅರ್ಹತೆ ವರ್ಗಾವಾರು ಕೆಳಗಿನಂತಿದೆ.

ಪರಿಶಿಷ್ಟ ಜಾತಿ / ಪರಿಶಿಷ್ಟ / ಪ್ರವರ್ಗ-1 ಅಭ್ಯರ್ಥಿಗಳಿಗೆ : 40 ವರ್ಷ.

ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ : 38 ವರ್ಷ.

ಸಾಮಾನ್ಯ ಕೆಟಗರಿ ಅಭ್ಯರ್ಥಿಗಳಿಗೆ : 35 ವರ್ಷ.

ನೇಮಕಾತಿ ವಿಧಾನ : ಸ್ಪರ್ಧಾತ್ಮಕ ಪರೀಕ್ಷೆ / ಸ್ಕಿಲ್ ಟೆಸ್ಟ್ ಮೂಲಕ.