ಮನೆ ಉದ್ಯೋಗ SSCಯಿಂದ 39,481 ಕಾನ್ಸ್​ಟೇಬಲ್​ ಹುದ್ದೆಗಳ ನೇಮಕಾತಿ

SSCಯಿಂದ 39,481 ಕಾನ್ಸ್​ಟೇಬಲ್​ ಹುದ್ದೆಗಳ ನೇಮಕಾತಿ

0

ಬೆಂಗಳೂರು: ಸಿಬ್ಬಂದಿ ನೇಮಕಾತಿ ಆಯೋಗ (ಎಸ್​ಎಸ್​ಸಿ) 39,481 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಸೇನಾ ಇಲಾಖೆಯ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಕಾನ್ಸ್​​ ಟೇಬಲ್​, ರೈಫಲ್​ ಮ್ಯಾನ್​ ಮತ್ತು ಸಿಪಾಯಿ ಹುದ್ದೆಗಳ ಭರ್ತಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

Join Our Whatsapp Group

ಹುದ್ದೆಗಳ ವಿವರ:

ಬಿಎಸ್​ಎಫ್​ – 15,654

ಸಿಐಎಸ್​ಎಫ್​ – 7145

ಸಿಆರ್​ಪಿಎಫ್​ – 11,541

ಎಸ್​ಎಸ್​​ಬಿ – 819

ಐಟಿಬಿಪಿ – 3,017

ಎಆರ್​​ – 1,248

ಎಸ್​​ಎಸ್​ಎಫ್​ – 35

ಎನ್​ಸಿಬಿ – 22

ವಿದ್ಯಾರ್ಹತೆ: 10ನೇ ತರಗತಿ ಉತ್ತೀರ್ಣರಾಗಿರಬೇಕು.

ವೇತನ: ಕಾನ್ಸ್​ಟೇಬಲ್​ ಹುದ್ದೆಗೆ 21,700- 69,100 ರೂ, ರೈಫಲ್‌​ಮ್ಯಾನ್​, ಸಿಪಾಯಿ ಹುದ್ದೆಗೆ 18,000- 56,900 ರೂಪಾಯಿ ನಿಗದಿಸಲಾಗಿದೆ.

ವಯೋಮಿತಿ: ಕನಿಷ್ಠ 18, ಜನವರಿ 2025ಕ್ಕೆ ಅನುಗುಣವಾಗಿ 23 ವರ್ಷ ಮೀರಿರಬಾರದು. ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಹಾಗೂ ನಿವೃತ್ತ ಸೇವಾದಾರ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇದೆ.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದು. ಪ.ಜಾತಿ, ಪ.ಪಂ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದ್ದು, ಇತರೆ ಅಭ್ಯರ್ಥಿಗಳಿಗೆ 100 ರೂ ಅರ್ಜಿ ಶುಲ್ಕ ವಿಧಿಸಲಾಗಿದೆ.

ಆಯ್ಕೆ ಹೇಗೆ?: ಕಂಪ್ಯೂಟರ್​ ಆಧರಿತ ಪರೀಕ್ಷೆ, ದೈಹಿಕ ಗುಣಮಟ್ಟ, ದೈಹಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ದಾಖಲಾತಿ ಪರಿಶೀಲನೆ.

ಈ ಹುದ್ದೆಗೆ ಸೆಪ್ಟೆಂಬರ್​ 5ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಅಕ್ಟೋಬರ್​​ 14 ಕಡೇಯ ದಿನ. ಈ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು ssc.gov.in ಇಲ್ಲಿಗೆ ಭೇಟಿ ನೀಡಿ.