ಮನೆ ಉದ್ಯೋಗ ಇಸ್ರೊ’ದಲ್ಲಿ 526 ವಿವಿಧ ಹುದ್ದೆಗಳ ನೇಮಕ

ಇಸ್ರೊ’ದಲ್ಲಿ 526 ವಿವಿಧ ಹುದ್ದೆಗಳ ನೇಮಕ

0

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಅಹ್ಮೆದಾಬಾದ್, ಬೆಂಗಳೂರು, ಹಾಸನ, ಹೈದರಾಬಾದ್, ಶ್ರೀಹರಿಕೋಟ, ತಿರುವನಂತಪುರಂ ಘಟಕಗಳಲ್ಲಿ ನೇಮಕ ಮಾಡಲು, ಒಟ್ಟು 526 ವಿವಿಧ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿತ್ತು. ಆನ್’ಲೈನ್ ಅರ್ಜಿಗೆ ಜನವರಿ 09 ರವರೆಗೆ ಅವಕಾಶ ನೀಡಿತ್ತು. ಇದೀಗ ಅವಧಿ ವಿಸ್ತರಣೆ ಮಾಡಿ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ ಮಾಡಿದೆ.

ಅಸಿಸ್ಟಂಟ್, ಜೂನಿಯರ್ ಪರ್ಸೊನೆಲ್ ಅಸಿಸ್ಟಂಟ್, ಅಪ್ಪರ್ ಡಿವಿಷನ್ ಕ್ಲರ್ಕ್, ಸ್ಟೆನೋಗ್ರಾಫರ್ ಹುದ್ದೆಗಳಿಗೆ ಜನವರಿ 16 ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಹಾಗೂ ಅರ್ಜಿ ಶುಲ್ಕವನ್ನು ಜನವರಿ 18 ರವರೆಗೆ ಪಾವತಿಸಲು ಅವಕಾಶ ನೀಡಿದೆ.

ಒಟ್ಟು 526 ಹುದ್ದೆಗಳ ಪೈಕಿ ಬೆಂಗಳೂರಿನಲ್ಲಿ 215 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗಿನ ಮಾಹಿತಿಗಳನ್ನು ತಿಳಿದು ಆನ್’ಲೈನ್ ಮೂಲಕ ಅರ್ಜಿ ಸಲ್ಲಿಸಿ.

ಇಸ್ರೊ ನೇಮಕಾತಿ ಮಾಡಲಿರುವ ಪೋಸ್ಟ್’ಗಳ ವಿವರ

ಅಸಿಸ್ಟಂಟ್ : 339

ಜೂನಿಯರ್ ಪರ್ಸೊನೆಲ್ ಅಸಿಸ್ಟಂಟ್ : 153

ಅಪ್ಪರ್ ಡಿವಿಷನ್ ಕ್ಲರ್ಕ್ : 16

ಸ್ಟೆನೋಗ್ರಾಫರ್ : 14

ಅಸಿಸ್ಟಂಟ್’ಗಳು : 3

ಜೂನಿಯರ್ ಪರ್ಸೊನೆಲ್ ಅಸಿಸ್ಟಂಟ್ : 01

ಬೆಂಗಳೂರು ಇಸ್ರೊ ಘಟಕದ ಪೋಸ್ಟ್’ಗಳ ವಿವರ

ಅಸಿಸ್ಟಂಟ್ : 125

ಜೂನಿಯರ್ ಪರ್ಸೊನೆಲ್ ಅಸಿಸ್ಟಂಟ್ : 61

ಅಪ್ಪರ್ ಡಿವಿಷನ್ ಕ್ಲರ್ಕ್ : 16

ಸ್ಟೆನೋಗ್ರಾಫರ್ : 14

ಯಾವ ಹುದ್ದೆಗೆ ಏನು ಶೈಕ್ಷಣಿಕ ಅರ್ಹತೆ ಇರಬೇಕು?

ಅಸಿಸ್ಟಂಟ್ : ಪದವಿ ಪಾಸ್. ಜತೆಗೆ ಕಂಪ್ಯೂಟರ್ ಬಳಕೆಯ ಅರಿವು.

ಅಪ್ಪರ್ ಡಿವಿಷನ್ ಕ್ಲರ್ಕ್ : ಪದವಿ ಪಾಸ್. ಜತೆಗೆ ಕಂಪ್ಯೂಟರ್ ಬಳಕೆಯ ಅರಿವು.

ಅಸಿಸ್ಟಂಟ್’ಗಳು ( ಇಸ್ರೊ ಅಡಿಯ ಆಟೋನಾಮಸ್ ಸಂಸ್ಥೆಗಳು): ಪದವಿ ಪಾಸ್. ಜತೆಗೆ ಕಂಪ್ಯೂಟರ್ ಬಳಕೆಯ ಅರಿವು.

ಜೂನಿಯರ್ ಪರ್ಸೊನೆಲ್ ಅಸಿಸ್ಟಂಟ್ / ಸ್ಟೆನೋಗ್ರಾಫರ್ : ಪದವಿ / ಡಿಪ್ಲೊಮ ಪಾಸ್ ಮಾಡಿರಬೇಕು. 1 ವರ್ಷ ಸ್ಟೆನೋ ಟೈಪಿಸ್ಟ್ / ಸ್ಟೆನೋಗ್ರಾಫರ್ ಕಾರ್ಯಾನುಭವ. ಕಂಪ್ಯೂಟರ್ ಬಳಕೆ ಅನುಭವ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ದಿನಾಂಕ 09-01-2023 ಕ್ಕೆ ಗರಿಷ್ಠ 28 ವರ್ಷ ಮೀರಿರಬಾರದು. ಹಿಂದುಳಿದ ವರ್ಗದ ಅಭ್ಯರ್ಥಿಗಳಾಗಿದ್ದಲ್ಲಿ 31 ವರ್ಷ, ಎಸ್ಸಿ / ಎಸ್ಟಿ ಅಭ್ಯರ್ಥಿಗಳಾಗಿದ್ದಲ್ಲಿ 33 ವರ್ಷ ಗರಿಷ್ಠ ವಯಸ್ಸು ಮೀರಿರಬಾರದು.

ಅಭ್ಯರ್ಥಿಗಳು ವಿವಿಧ ವಲಯದ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಆದರೆ ಒಂದೇ ಹುದ್ದೆಗೆ ಬೇರೆ ಬೇರೆ ವಲಯಗಳಲ್ಲಿ ಅರ್ಜಿ ಸಲ್ಲಿಸುವಂತಿಲ್ಲ. ಒಂದೇ ವಲಯದ ಎಷ್ಟು ಹುದ್ದೆಗಳಿಗೆ ಬೇಕಾದರೂ ಅರ್ಜಿ ಸಲ್ಲಿಸಬಹುದು.

ಪರಿಷ್ಕೃತ ದಿನಾಂಕಗಳು

ಅಪ್ಲಿಕೇಶನ್ ಸಲ್ಲಿಸಲು ಆರಂಭಿಕ ದಿನಾಂಕ : 20-12-2022

ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ : 16-01-2023

ಅಪ್ಲಿಕೇಶನ್ ಶುಲ್ಕ ಪಾವತಿಗೆ ಕೊನೆ ದಿನಾಂಕ : 18-01-2023

ಅಪ್ಲಿಕೇಶನ್ ಶುಲ್ಕ ರೂ.100.

ಆಯ್ಕೆ ವಿಧಾನ : ಲಿಖಿತ ಪರೀಕ್ಷೆ ನಡೆಸಲಾಗುತ್ತದೆ.

ಅಪ್ಲಿಕೇಶನ್ ಸಲ್ಲಿಸುವುದು ವಿಧಾನ

– ಇಸ್ರೊ ಕರಿಯರ್ ವೆಬ್ಸೈಟ್ https://apps.ursc.gov.in/CentralOCB-2022/advt.jsp ಗೆ ಭೇಟಿ ನೀಡಿ.

– ಇಲ್ಲಿ ಇತ್ತೀಚೆಗೆ ಬಿಡುಗಡೆ ಮಾಡಿದ ನೇಮಕಾತಿ ಅಧಿಸೂಚನೆಗಳನ್ನು ಚೆಕ್ ಮಾಡಬಹುದು.

– ಈ ಸದರಿ ವೆಬ್ ಪುಟದಲ್ಲಿ ನಿಮ್ಮ ಆಸಕ್ತ ಹುದ್ದೆಗಳ ಹೆಸರಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

– ಆನ್’ಲೈನ್ ಅಪ್ಲಿಕೇಶನ್ ಫಾರ್ಮ್ ಓಪನ್ ಆಗುತ್ತದೆ.

– ಅಗತ್ಯ ವಿವರಗಳನ್ನು ನೀಡಿ ಅರ್ಜಿ ಸಲ್ಲಿಸಿ.

– ನಂತರ ಶುಲ್ಕ ಪಾವತಿಗೆ ಇದೇ ಪೇಜ್ನಲ್ಲಿ ಲಭ್ಯ ಇರುವ ‘Make Payment’ ಲಿಂಕ್ ಕ್ಲಿಕ್ ಮಾಡಿ.

– ಓಪನ್ ಆದ ಪೇಜ್’ನಲ್ಲಿ ಹುದ್ದೆ ಆಯ್ಕೆ ಮಾಡಿ, ಆನ್’ಲೈನ್ ಪೇಮೆಂಟ್ ಮಾಡಬಹುದು. ಅಥವಾ ಚಲನ್ ಡೌನ್ಲೋಡ್ ಮಾಡಿಕೊಳ್ಳಬಹುದು.

ಇಸ್ರೊ ಹುದ್ದೆಗಳಿಗೆ ಲಿಖಿತ ಪರೀಕ್ಷೆ ದಿನಾಂಕಗಳನ್ನು ಮುಂದಿನ ದಿನಗಳಲ್ಲಿ ವೆಬ್’ಸೈಟ್ https://www.isro.gov.in/ ನಲ್ಲಿ ಪ್ರಕಟಿಸಲಾಗುತ್ತದೆ.