ಮನೆ ದೇವಸ್ಥಾನ ಕಳಸ ಕಡತದಲ್ಲಿ ಹೊರನಾಡು ದೇವಾಲಯಕ್ಕೆ ನೀಡಿದ ದಾನದ ಉಲ್ಲೇಖಗಳು: ದಾಖಲೆ 3

ಕಳಸ ಕಡತದಲ್ಲಿ ಹೊರನಾಡು ದೇವಾಲಯಕ್ಕೆ ನೀಡಿದ ದಾನದ ಉಲ್ಲೇಖಗಳು: ದಾಖಲೆ 3

0

    ದುರ್ಮುಖ ಸಂವತ್ಸರದ ವಹಿಶಾಖ ಬ14 ಲ್ಲು ಶ್ರೀಮಕ್ಕೆಳದಿ ಶಿವಪ್ಪನಾಯಕರೂ | ವೆಂಗಂಭಟ್ಟಗೆ ಬರಸಿ ಕಳಿಸಿದ ಕಾರ್ಯ | ಕಳಸ ಅಗ್ರಹಾರದ ಯಜುರ್ವೇದದ ಲಕ್ಷ್ಮಂಣಭಟ್ಟನು ಬರದು ತಿಳಿಸಿದ ಮೆರೆಗೆ | ಕಳಸದ ಹೋಬಳಿ ಅಗ್ರಾಹಾರದ ವಕ್ಕಲುಗಳು ಊರು ಬಿಟ್ಟ ಬೇರೆ ಸೀಮೆಯಲ್ಲಿದ್ದಾರಂತೆ | ಅವರನೆಲ್ಲಾ ಕರೆತಂದು ಕೊಡುವಲ್ಲಿಗೆ ಹುಜುರಿಂದ ಮನುಷ್ಯನ ಕಳುಹಿಸಿದೆವೆ || ಬಂದ ಮನುಷ್ಯನ ಸಂಗಡ ಶೀಘ್ರದಲ್ಲಿ ಒಂದು ವಕ್ಕಲು ಉಳಿಯದಂತೆ ಕಳುಹಿಸಿಕೊಡುವದು | ಅಲಸ್ಯ ಕೊಡದು ಎಂದು ನಿರೂಪ |

Join Our Whatsapp Group

 ವಿವರಣೆ: 13 ಮೇ, 1657ಕ್ಕೆ ಹೊಂದುವ ಈ ದಾಖಲೆಯು ಕೆಳದಿ ಶಿವಪ್ಪನಾಯಕನ ಕಾಲದ್ದಾಗಿದೆ.ವೆಂಗಂಭಟ್ಟ ವೆಂಕಟ ಜೋಯಿಸ  ಇರಬಹುದೇ  ರಿಗೆ ಬರಸಿ ಕಳುಹಿಸಿರುವ ಕೆಲಸವನ್ನು ತಿಳಿಸಿದ್ದು ಕಳಸ ಅಗ್ರಹಾರದಲ್ಲಿದ್ದದ ಯಜುರ್ವೇದದ  ಲಕ್ಷ್ಮಣಭಟ್ಟನು ಬರೆದು ಕೇಳಿಕೊಂಡ ಮೇರೆಗೆ ಕಳಸ ಅಗ್ರಹಾರದಿಂದ ವಕ್ಕಲುಗಳು ಊರು ಬಿಟ್ಟು ಬೇರೆ ಸೀಮೆಗೆ ಹೋಗಿತ್ತಿದ್ದು ಅವರನ್ನು ಅದೇ ಸೀಮೆಯಲ್ಲಿ ಪುನಃ ಕರೆತರುವಂತೆ ಕ್ರಮ ಕೈಗೊಳ್ಳುವಂತೆ ಅದೂ ಶೀಘ್ರವಾಗಿ ಆಗುವಂತೆ ಇದರಲ್ಲಿ ಆಲಸ್ಯ ಮಾಡದಂತೆ ತಿಳಿಸುವ ನಿರೂಪವಾಗಿದೆ.

 ದಾಖಲೆ 4 :

 ಶ್ರೀಮತ್ವರಮಹಂಸ ಪರಿವ್ರಾಜಕಾಚಾರ್ಯ್ಯವರ್ಯ್ಯರಾದ ಶೃಂಗೇರಿ ಶ್ರೀನರಸಿಂಹ ಭಾರತಿ ಸ್ವಾಮಿಗಳಿಗೆ ಕೆಳದಿ ಚೆಂನಮಾಜಿಯವರು ಮಾಡುವ ಬಿಂನಹ ಕಳುಹಿದ ಆಶೀರ್ವಾದ ಪತ್ರಿಕೆಯಿಂದೆಲ್ಲಾ ಕೆಳಿ ಮನಸ್ಸಿಗೆ ತಂದೆ ಶೃಂಗೇರಿ ಕೊಲ್ಲೂರು ಕಳಸ ಹೊರನಾಡು ಶಂಕರನಾರಾಯಣ ಮಂತಾಗಿ ಘಟ್ಟದ ಮೆಲಣ ಕೆಳಗಣ ಮಠ ದೇವಳ ಧರ್ಮಕ್ಕೆ ತಂದಂಥಾ ಜೆನಿಸಿಗೆ ಸುಂಕ ಬರಬೇಕೆಂದು ಕೆಳುತಿದಾರೆ ಸುಂಕವ ಕೇಳದ ರಿತಿ ಕಟ್ಟು ಮಾಡಿಸಬೇಕೆಂಬ ಹಾಗೆ ಬರಸಿದ್ರಿ ಮಠದ ಧರ್ಮಕ್ಕೆ  ಯೆಂದಿನ ರಿತಿ ತಂದು ಕೊಂಬಂಥಾ ಜಿನಿಸಿಗೆ ಸುಂಕ ಬರಬೇಕೆಂದು ಕೆಳದ ಹಾಗೆ ಸುಂಕದ ಪಾರುಪತ್ಯಗಾರರಿಗೆ ಬರಸಿಧೆವಾಗಿ ಬಿಂನಹ

 ವಿವರಣೆ: ಕೆಳದಿ ರಾಣಿ ಚೆನ್ನಮ್ಮಾಜಿ ಕಾಲಕ್ಕೆ ಸುಮಾರು 1696ರ ಅವಧಿಗೆ ಸೇರಿದ ದಾಖಲೆ ಇದಾಗಿದೆ.ಘಟ್ಟದ ಮೇಲಣ ಮತ್ತು ಘಟ್ಟದ ಕೆಳಗಣ ಸುಂಕದ ಕಟ್ಟೆಗಳಲ್ಲಿ ಮಠ,ದೇವಾಲಯಕ್ಕೆ ಬರುವ ದಿನಿಸು ಇತ್ಯಾದಿಗಳಿಗೆ ಸುಂಕವ ಕಳೆದ ರಿತಿ ಕಟ್ಟು ಮಾಡಿಸಬೇಕೆಂಬ ಹಾಗೆ ಗುರುಗಳು ಕೇಳಿಕೊಂಡ ಸಂಬಂಧ ಚೆನ್ನಮ್ಮಾಜಿಯು ಸುಂಕ ಕೇಳದ ಹಾಗೆ ಪರಪತ್ಯಗಾರರಿಗೆ ಬರಸಿ ಮಠಕ್ಕೆ ತಿಳಿಸಿದ ವಿವರ ಈ ನಿರೂಪದಲ್ಲಿದೆ. ಇದರಲ್ಲಿ ಹೊರನಾಡಿಗೂ ದಿನಿಸು ಇತ್ಯಾದಿಗಳು ಬರುತ್ತಿದ್ದ ಕುರಿತು  ಮಾಹಿತಿ ದೊರೆಯುತ್ತದೆ.

    ಹೊರನಾಡು, ಶೃಂಗೇರಿ,ಕಳಸ,ಕೊಲ್ಲೂರು ಮುಂತಾದ ದೇವಾಲಯಗಳ ಮೇಲೆ ಬೆಳಕು ಚೆಲ್ಲುವಲ್ಲಿ ಈ ದಾಖಲೆಗಳು ಪ್ರಮುಖ ಸಹಕಾರಿಯಾಗಿವೆ. ಚಿಕ್ಕಮಂಗಳೂರು ಜಿಲ್ಲೆಯ ಮೂಡಗೆರೆ ತಾಲ್ಲೂಕಿನ ಶಾಸನ ಸಂಗ್ರಹದಲ್ಲಿ ಹೊರನಾಡಿನಲ್ಲಿ ಶಾಂತಿರಾಜ ಹೆಗ್ಗಡೆಯವರ ವಶದಲ್ಲಿದ್ದ ತಾಮ್ರ ಶಾಸನದ ಪಾಠ ಪ್ರಕಟವಾಗಿತ್ತು ಇದು 19 ನವೆಂಬರ್ 1675 ಸರಿ ಹೊಂದುತ್ತದೆ.