ದಾಖಲೆ ಒಂದು
ಭಾದ್ರಪದ ಬಹುಳ 5 ರಂದು ಶ್ರೀಮತ್ಕೆಳದಿ ಚೆನ್ನಮ್ಮಾಜಿಯವರು ಜಾಜಿಯವರು ಮಾವ ನಿರ್ಣಾಣಯ್ಯನವರಿಗೆ ಬಸರಿ ಕಳ್ಸಿದ ಕಾರ್ಯ ನಮ್ಮ ಹಿರೇರು ಪೂರ್ವಾರಭ್ಯ ನಡೆಸಿ ಬರುತ್ತಿರುವ ಕೊಲ್ಲೂರು ಮೂಕಾಂಬಿಕೆ ಕಳ್ಸೇಶ್ವರ ದೇವರು ಹೊರನಾಡು ಅಗಸ್ತ್ಯ ಪೂಜಿತ ಅನ್ನಪೂರ್ಣ ಅಮ್ಮನವರಿಗೆ ವರ್ಷಂಪ್ರತಿ ಆಶ್ವಯುಜ ಯುದ್ಧ 3ರಂದು ಪಂಚಾಮೃತ ಕುಂಕುಮ ಸೇವೆಗೆ ಉಗ್ರಣದಿಂದದಿನಿಸು ಸೀರೆ |2 |ಕುಪ್ರಸ |2| ಪಂಚೆ ಸಲ್ಯ 1| ಬೆಲ್ಲ ಸ 4 |= ಜೇನುತುಪ್ಪ ಪ ||| ಕಾಯಿ 8 | ಹಣ್ಣು 50 ಯಲೆ 20 ಲು ಅಡಿಕೆ ಹೊಳು 80 ಯಣ್ಣೆ ಸೇ 10 |= ಅಕ್ಕಿ ಕ 25 ಸಾ 3|| ಯಾಲಕ್ಕಿ ಗ 3 ಹತ್ತಿ ಪ 5ದೂಪ ಪ ಅಂಗವಸ್ತ್ರ 5 ಅಭ್ಯಂಗದ ಎಣ್ಣೆ ತಿಂ| 10 | ಕ 54 ಅಭಿಷೇಕದ ಕಾಯಿ ತಿ | 30 ವಿಂಗಡದ ಕಟ್ಟಲೆ ಹಣ ಗ 7 || o ಅಂತೂ ಈ ಪ್ರಕಾರ ಜೀನಿಸಿನ ವೆಚ್ಚ ಸಾಶನ ಸ್ಥಾನವಾಗಿ ಕಟ್ಟಳೆಗೆ 85 ಅಕ್ಷಾರದಲ್ಲು ಗ 85 ಸರ್ವ ಮಾನ್ಯವಾಗಿ ನಡೆದು ಬರುತ್ತಿದ್ದು ಬೊಖಸದ ಸಿದ್ಧಬಸವಯ್ಯನ ಹಸ್ತೆ ಕಳಿಹಿಸಿದೆ ಸೇವೆ ಸಲ್ಲಿಸಿ ಪ್ರಸಾದ ಕಳಿಸಿಕೊಡುವ ಹಾಗೆ ನಿರೂಪ,||ಪ್ರತಿ ||
ವಿವರಣೆ ಪ್ರಶಸ್ತಿ 1672 – 1697ರ ಅವಧಿಯಲ್ಲಿ ಆಡಳಿತ ನಡೆಸಿದ ಕೆಳದಿ ರಾಣಿ ಚೆನ್ನಮ್ಮಾಜಿಯು ನಿರ್ವಾಣಯ್ಯನವರಿಗೆ ಬರೆಸಿ ಕಳಿಸಿದ ಕಾರ್ಯವನ್ನು ಈ ನೀರೂಪ ತಿಳಿಸುತ್ತದೆ.ಕೊಲ್ಲೂರು, ಕಾಳ್ಸೇಶ್ವರ, ಅಗಸ್ತ್ಯರಿಂದ ಪೂಜಿಸಲ್ಪಟ್ಟ ಹೊರನಾಡು ಮುಂತಾದ ದೇವಾಲಯಗಳಲ್ಲಿ ಪ್ರತಿವರ್ಷ ಅಶ್ವಯುಜ ಮಾಸದಲ್ಲಿ ನಡೆಸುವ ವಿಶೇಷ ಪೂಜೆಗೆ ಪಂಚಾಮೃತ, ಕುಂಕುಮ ಸೇವೆಗೆ ಗದ್ಯಾಣ 85 ನಡೆದು ಬರುತ್ತಿದ್ದಂತೆ ಉಗ್ರಾಣದಿಂದ ಅವುಗಳನ್ನು ಬೊಕ್ಕಸದ ಸಿದ್ಧಬಸಯ್ಯನ ಹಸ್ತೆ ಶ್ರೀ ಕ್ಷೇತ್ರಗಳಿಗೆ ಕಳುಹಿಸಿ ಪೂಜಾದಿಗಳನ್ನು ಸಲ್ಲಿಸುವ ಕ್ರಮ ಕೈಗೊಂಡು ಪ್ರಸಾದ ಪಡೆದು ಕಳಿಸುವಂತೆ ಉಲ್ಲೇಖದ ನಿರೂಪ.














