ಮನೆ ಮಾನಸಿಕ ಆರೋಗ್ಯ ಪ್ರತಿಫಲಿತ ವಿಕಲತೆ

ಪ್ರತಿಫಲಿತ ವಿಕಲತೆ

0

    ಪ್ರೀತಿ ಪಾತ್ರರನ್ನು ಕಳೆದುಕೊಂಡಾಗಲೋ, ದೊಡ್ಡ ನಷ್ಟವಾದಾಗಲೋ ಅನಿರೀಕ್ಷಿತವಾಗಿ ವಿಫಲರಾದಾಗ ಅಥವಾ ನಿರಾಶರಾದಾಗಲೋ, ಗೌರವ ಅಥವಾ ಸ್ಥಾನಮಾನವನ್ನು ಕಳೆದುಕೊಂಡಾಗಲೋ ಕೆಲವರು ಬುದ್ಧಿಭ್ರಮಣಗೆ ಒಳಗಾಗುವುದನ್ನು ನೀವು ಕೇಳಿರುತ್ತೀರಿ ಅಥವಾ ಕಂಡಿರುತ್ತೀರಿ  ಸಾಮಾನ್ಯವಾಗಿ ಈ ವ್ಯಕ್ತಿಗಳು ನಡೆದ ಘಟನೆ ಮತ್ತು ತಮಗೊದಗಿದ ಕಷ್ಟದ ಬಗ್ಗೆಯೇ  ಮಾತನಾಡುತ್ತಾರೆ.ಅವರ ಊಟ ನಿದ್ರೆ ನೈರ್ಮನ್ಯತೆ,ದಿನ ನಿತ್ಯದ ಚಟುವಟಿಕೆಗಳೆಲ್ಲ ಅಸ್ತವ್ಯಸ್ತಗೊಳ್ಳುತ್ತವೆ.

Join Our Whatsapp Group

      ಸರಸ್ವತಮ್ಮನ ಮಗು ಅಪಘಾತದಲ್ಲಿ ಸತ್ತಿತು. ಅಲ್ಲಿಂದಿಚಿಗೆ ಆಕೆಯ ಸ್ಥಿತಿ ಚೆನ್ನಾಗಿಲ್ಲ ನನ್ನ ಮಗು ಸತ್ತಿಲ್ಲ,ಜೀವಂತವಾಗಿದೆ ಎಂದೇ ಹೇಳುತ್ತಾಳೆ ಪ್ರತಿದಿನ ಶಾಲೆಗೆ ಹೋಗಿ, ಮಗುವಿಗಾಗಿ ಹುಡುಕುತ್ತಾಳೆ. ಯಾರು ಸಿಕ್ಕಿದರೂ ಅವರಿಗೆ, ಮಗು ನೋಡಲು ಎಷ್ಟು ಮುದ್ದಾಗಿತ್ತು. ಎಷ್ಟು ಚೆನ್ನಾಗಿ ಓದುತ್ತಿತ್ತು ಎಂದು ವಿವರಿಸುತ್ತಾಳೆ. “ಯಾರೋ ದುರಾತ್ಮರು ಮಗುವನ್ನು ಕದ್ದುಬಿಟ್ಟಿದ್ದಾರೆ” ಎಂದು ಅಳುತ್ತಾಳೆ. ನನ್ನ ಮಗುವನ್ನು ಹುಡುಕಿಕೊಡಿ” ಎಂದು ಎಲ್ಲರನ್ನೂ ಅಂಗಲಾಚಿ ಮಗು ಬರುತ್ತದೆ ಎಂದು ನಿರೀಕ್ಷಿಸುತ್ತಾ  ರಾತ್ರಿ ಇಡೀ ಜಾಗರಣೆ ಮಾಡುತ್ತಾಳೆ ಮಗುವನ್ನು ಹುಡುಕಿ ಹುಡುಕಿ  ತರಲು ಯಾವ ಪ್ರಯತ್ನವನ್ನೂ ಮಾಡದಿರುವ ಗಂಡನನ್ನು ದೂಷಿಸುತ್ತಾಳೆ. ಎರಡು ಸಾರಿ ಪೊಲೀಸ್ ಠಾಣೆಗೆ ಹೋಗಿ, ಮಗು ಕಳೆದಿದೆ ಎಂದು ದೂರು ಕೊಟ್ಟಿದ್ದಾಳೆ. ಅವಳ ಈ ದಾರುಣ ಸ್ಥಿತಿಯನ್ನು  ಕಂಡು, ಮಗು ಸತ್ತಿದೆ,ಬದುಕಿಲ್ಲ ಎಂದು ಅವಳಿಗೆ ತಿಳಿಯ ಹೇಳುವ ಧೈರ್ಯ ಯಾರಿಗೂ ಇಲ್ಲ. ಅವಳನ್ನು ಕಂಡು ಎಲ್ಲರೂ ಮರುಕಪಡುತ್ತಾರೆ.

       ಸಾಮಾನ್ಯವಾಗಿ ಪ್ರತಿಫಲಿತ ವಿಕಲತೆ ಸ್ವಲ್ಪಕಾಲ ಇರುತ್ತದೆ. ವ್ಯಕ್ತಿ ಹೇಗೋ ಪರಿಸ್ಥಿತಿಗೆ ಹೊಂದಿಕೊಳ್ಳುವುದರಿಂದ ಅಥವಾ ಪರಿಸ್ಥಿತಿಯೇ ಉತ್ತಮಗೊಳ್ಳುವುದರಿಂದ. ಆತ ಸುಧಾರಿಸುತ್ತಾನೆ. ಆದರೆ ತಕ್ಕ ಚಿಕಿತ್ಸೆ ನೀಡುವುದರಿಂದ ಈ ಸಾಧಾರಣ ಬೇಗ ಆಗುವಂತೆ ಮಾಡಬಹುದು. ಸಮಾಧಾನಕಾರಕ ಔಷಧಿಗಳು, ಮನೋ ಚಿಕಿತ್ಸೆ ಮತ್ತು ಸಂಬಂಧಪಟ್ಟವರ ಸಹಾನುಭೂತಿಯ ನೆರವು ಪರಿಣಾಮಕಾರಿ.