ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ರೆಪೋ ದರದಲ್ಲಿ ಈ ಬಾರಿಯೂ ಯಾವುದೇ ಬದಲಾವಣೆ ಮಾಡಿಲ್ಲ. ಮೊದಲಿದ್ದ ಶೇಕಡಾ 6.5 ರಷ್ಟನ್ನು ಕಾಯ್ದುಕೊಳ್ಳಲಾಗಿದೆ.
ಈ ಬಗ್ಗೆ ಗುರುವಾರ ಮಾಹಿತಿ ನೀಡಿರುವ ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್, ಹಣದುಬ್ಬರ ಗಣನೀಯವಾಗಿ ಇಳಿಕೆ ಕಾಣುತ್ತಿದೆ. 2024 ರ ವರ್ಷವೂ ಮತ್ತಷ್ಟು ಇಳಿಮುಖವಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ರೆಪೋ ದರ ಎಂಬುದು ವಾಣಿಜ್ಯ ಬ್ಯಾಂಕುಗಳಿಗೆ ಆರ್ಬಿಐ ನೀಡುವ ಸಾಲಕ್ಕೆ ವಿಧಿಸಲಾಗುವ ಬಡ್ಡಿದರವಾಗಿದೆ. ಈ ದರದಲ್ಲಿ ವ್ಯತ್ಯಯವಾದರೆ ಬ್ಯಾಂಕುಗಳೂ ಕೂಡ ತಮ್ಮ ಗ್ರಾಹಕರ ಸಾಲ ಅಥವಾ ಠೇವಣಿಗೆ ಬಡ್ಡಿದರ ಪರಿಷ್ಕರಿಸಬಹುದು. ಹೀಗಾಗಿ, ಆರ್ಬಿಐನ ರೆಪೋ ದರ ದೇಶದ ಹಣಕಾಸು ಕ್ಷೇತ್ರದ ಮೇಲೆ ಹಾಗೂ ಆ ಮೂಲಕ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ.