ಮೈಸೂರು: ಪತ್ರಕರ್ತ ಲೋಹಿತ್ ಹನುಮಂತಪ್ಪ ನಿರ್ದೇಶನದ ಬ್ರದರ್ಸ್ ಎಂಟರ್ಟೈನ್ಮೆಂಟ್ ವತಿಯಿಂದ ನಿರ್ಮಿಸಿರುವ ಸಮಾನತೆಯ ಸಂದೇಶ ಸಾರುವ “ರಾಮ್ ರಹೀಮ” ಎಂಬ ಕಿರುಚಿತ್ರದ ಬಿಡುಗಡೆ ಹಾಗೂ ಧಾರ್ಮಿಕ ಸಮಾನತೆ ಕುರಿತ ವಿಚಾರ ಸಂಕೀರ್ಣ ಹಮ್ಮಿಕೊಳ್ಳಲಾಗಿತ್ತು.
ಮೈಸೂರು ವಿವಿ ಇಎಂಆರ್.ಸಿ ವಿಭಾಗದ ಸಭಾಂಗಣದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ, ಮೈಸೂರು ವಿವಿ ಸಂಶೋಧರಕರ ಸಂಘ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟದ ಸಹಯೋಗದಲ್ಲಿ ನೆಡೆದ ಕಾರ್ಯಕ್ರಮವನ್ನು ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರು ಮತ್ತು ಚಿಂತಕರಾದ ಕೆ.ದೀಪಕ್ ಬುದ್ದ ಬಸವ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಾಯಿತು.
ಬಳಿಕ ಅಮೋಘ ಮೈಸೂರು ವಾಹಿನಿಯ ವರದಿಗಾರ ಲೋಹಿತ್ ಹನುಮಂತಪ್ಪ ಅವರ ನಿರ್ದೆಶನದ ರಾಮ – ರಹೀಮ ( ಈಶ್ವರ ಅಲ್ಲಾ ನೀನೆ ಎಲ್ಲಾ.. ) ಕಿರುಚಿತ್ರ ಬಿಡುಗಡೆಗೊಳಿಸಿ ಪ್ರದರ್ಶನ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಕೆ. ದೀಪಕ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕ್ರೈಸ್ಟ್ ಸ್ಕೂಲ್ ತಾಂಡವಪುರ ಪ್ರಾಂಶುಪಾಲರು ಫಾ.ಸೆಬಾಸ್ಟಿಯನ್ .ಪಿ.ಜೆ, ವಿಶ್ವಮೈತ್ರಿ ಬುದ್ದ ವಿಹಾರ ಬೌದ್ಧ ಧರ್ಮಗುರುಗಳಾದ ಡಾ.ಕಲ್ಯಾಣಸಿರಿ ಬಂತೇಜಿ, ಮುಸ್ಲಿಂ ಧರ್ಮಗುರುಗಳಾದ ಮೌಲಾನಾ ಸೂಫಿ ನೂರಿ ಬಾಬಾ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್ ಟಿ ರವಿಕುಮಾರ್, ಸಾಹಿತಿ ಬನ್ನೂರು ಕೆ ರಾಜು,
ಮೈಸೂರು ವಿ.ವಿ ಸಂಶೋಧಕರ ಸಂಘ ಅಧ್ಯಕ್ಷ ನಟರಾಜ್ ಶಿವಣ್ಣ, ಮೈಸೂರು ವಿ.ವಿ.ಸಂಶೋಧಕರ ಸಂಘದ ಗೌರವ ಅಧ್ಯಕ್ಷರು ಮಹೇಶ್ ಸೋಸಲೆ, ಸಾಮಾಜಿಕ ಕಾರ್ಯಕರ್ತರು ಮತ್ತು ಮಾಜಿ ಮುನ್ಸಿಪಲ್ ಕೌನ್ಸಿಲರ್ ನೂರ್ ಅಹಮದ್ ಮರ್ಚೆಂಟ್ ಸೇರಿದಂತೆ ಹಲವರು ಉಪಸ್ಥಿತರಿದ್ದರು .