ಮನೆ ಸುದ್ದಿ ಜಾಲ ಕೆಆರ್‌ ಎಸ್‌, ಕಬಿನಿ ಜಲಾಶಯದಿಂದ ನೀರು ಬಿಡುಗಡೆ

ಕೆಆರ್‌ ಎಸ್‌, ಕಬಿನಿ ಜಲಾಶಯದಿಂದ ನೀರು ಬಿಡುಗಡೆ

0

ಮೈಸೂರು (Mysuru): ಕೊಡಗು ಜಿಲ್ಲೆ ಮತ್ತು ಕೇರಳದ ವಯನಾಡು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಕಬಿನಿ ಮತ್ತು ಕೆಆರ್‌ಎಸ್ ಜಲಾಶಯಗಳು ತುಂಬಿ ಹರಿಯುತ್ತಿವೆ.

ಜಲಾಶಯಗಳು ತುಂಬಿ ಹರಿಯುತ್ತಿರುವುದರಿಂದ ಜಲಾಶಯದಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲಾಗಿದೆ. ಹೇಮಾವತಿ ಅಚ್ಚುಕಟ್ಟಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಕೆಆರ್‌ಎಸ್‌ನಲ್ಲಿ ಗರಿಷ್ಠ 124.8 ಅಡಿಯಷ್ಟಿದ್ದ ನೀರಿನ ಮಟ್ಟ 122.5 ಅಡಿ ತಲುಪಿದೆ.

ಕೆಆರ್ ಎಸ್ ನಿಂದ ಶನಿವಾರ 13,511 ಕ್ಯೂಸೆಕ್ ನೀರು ಬಿಡಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ 88.96 ಅಡಿ ಇತ್ತು. ಏತನ್ಮಧ್ಯೆ ಕೇರಳದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯದಿಂದ 1,000 ಕ್ಯೂಸೆಕ್ ನೀರನ್ನು ನೀರಾವರಿ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ.

15,727 ಕ್ಯೂಸೆಕ್ ನೀರಿನ ಒಳಹರಿವಿನೊಂದಿಗೆ ಗರಿಷ್ಠ 2,284 ಅಡಿ ಸಾಮರ್ಥ್ಯದ ನೀರಿನ ಮಟ್ಟ 2,281.33 ಅಡಿಗೆ ಏರಿಕೆಯಾಗಿದೆ. ಕೊಡಗಿನ ಹಾರಂಗಿ ಜಲಾಶಯದಲ್ಲಿ 14,710 ಕ್ಯೂಸೆಕ್ ನೀರಿದ್ದು 14,100 ಕ್ಯುಸೆಕ್ಸ್ ಬಿಡುಗಡೆ ಮಾಡಲಾಗಿದೆ.