ಮನೆ ರಾಜ್ಯ ನೆಮ್ಮದಿಯ ಜೀವನಕ್ಕೆ ಧಾರ್ಮಿಕತೆ ಅವಶ್ಯ: ಎಸ್.ಟಿ.ಸೋಮಶೇಖರ್

ನೆಮ್ಮದಿಯ ಜೀವನಕ್ಕೆ ಧಾರ್ಮಿಕತೆ ಅವಶ್ಯ: ಎಸ್.ಟಿ.ಸೋಮಶೇಖರ್

0

ಮೈಸೂರು(Mysuru):  ಹಬ್ಬ – ಹರಿದಿನಗಳು ನಮ್ಮ ಸಂಸ್ಕೃತಿಯ ಮೂಲ ಆಧಾರಗಳಾಗಿವೆ  ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅಭಿಪ್ರಾಯಪಟ್ಟರು.

ಶ್ರೀ ಕಲ್ಯಾಣ ಲಕ್ಷ್ಮಿವೆಂಕಟರಮಣಸ್ವಾಮಿ ದೇವಸ್ಥಾನ ವತಿಯಿಂದ ಶ್ರೀ ಕಲ್ಯಾಣ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಸ್ಥಾನದ ಆವರಣದಲ್ಲಿ  ಗೌರಿ ಹಬ್ಬದ ಪ್ರಯುಕ್ತ 700ಕ್ಕೂ ಹೆಚ್ಚು ಮಹಿಳೆಯರಿಗೆ ಸೀರೆ ಹಾಗೂ  ಬಾಗಿನ ಹಾಗೂ ಸೀರೆ ಮತ್ತು ಪ್ರಸಾದ  ವಿತರಿಸಲಾಯಿತು.

ಈ ಸಂದರ್ಭ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ . ಸೋಮಶೇಖರ್,  ವಿದೇಶಿಯರ ದಾಳಿಗಳಿಂದ ಪ್ರಪಂಚದ ಅದೆಷ್ಟೋ ಸಂಸ್ಕೃತಿಗಳು ನಾಶವಾಗಿವೆ. ಆದರೆ ಭಾರತೀಯ ಸಂಸ್ಕೃತಿ ತಾಯಂದಿರ ಕಾಣಿಕೆಯಿಂದ ಇಂದಿಗೂ ಭದ್ರವಾಗಿದೆ ಎಂದರು.

ನಂತರ ಮಾತನಾಡಿದ ವ್ಯವಸ್ಥೆ ಸಂಸ್ಥಾಪಕ ಎಚ್.ಜಿ.ಗಿರಿಧರ್, ನಮ್ಮ ದೇವಸ್ಥಾನದಲ್ಲಿ ನಿರಂತರವಾಗಿ ಹಲವಾರು ವರ್ಷಗಳಿಂದ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆದುಕೊಂಡು ಬರುತ್ತಿದೆ ನಮ್ಮ ದೇವಸ್ಥಾನದಲ್ಲಿ ಯಾವುದೇ ಜಾತಿ ಮತ ಇಲ್ಲದೆ ಎಲ್ಲ ಹಿಂದೂಗಳು ತಿಂಗಳಿಗೊಮ್ಮೆ ಸೇರುವ ಮೂಲಕ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದೇವೆ  ಎಂದಿದ್ದಾರೆ.

ನೆಮ್ಮದಿಯ ಜೀವನಕ್ಕೆ ಧಾರ್ಮಿಕತೆ ಅವಶ್ಯ. ಮಾನವನ ಸುಖ, ಶಾಂತಿ, ನೆಮ್ಮದಿಯ ಜೀವನಕ್ಕೆ ದೇವಾಲಯಗಳು, ಧಾರ್ಮಿಕ ಆಚರಣೆಗಳು ಸಹಕಾರಿಯಾಗಿವೆ. ನೆಮ್ಮದಿ ಎನ್ನುವುದು ಯಾವ ಅಂಗಡಿಯಲ್ಲೂ ಸಿಗುವ ವಸ್ತುವಲ್ಲ. ನೆಮ್ಮದಿ ದೊರಕಲು ಇಂತಹ ಧಾರ್ಮಿಕ ಆಚರಣೆಗಳಿಂದಷ್ಟೇ ಸಾಧ್ಯ ಎಂದರು.

ಧಾರ್ಮಿಕ ಆಚರಣೆ ಮತ್ತು ದೇವಾಲಯಗಳು ಗ್ರಾಮದ ಜನರನ್ನು ಒಟ್ಟುಗೂಡಿಸಿ ನೆಮ್ಮದಿಯ ಜೀವನಕ್ಕೆ ದಾರಿ ತೋರುತ್ತಿವೆ. ಗ್ರಾಮಗಳಲ್ಲಿ ಧಾರ್ಮಿಕ ಆಚರಣೆ ಹಬ್ಬ ಹರಿದಿನಗಳನ್ನು ಆಚರಿಸುವುದರಿಂದ ಗ್ರಾಮಸ್ಥರಲ್ಲಿ ವಿಶ್ವಾಸ, ನಂಬಿಕೆ, ಸ್ನೇಹ, ಬಾಂಧವ್ಯ ವೃದ್ಧಿಸುತ್ತದೆ ಎಂದರು.

ಮನುಷ್ಯನಲ್ಲಿ ಸಂಪತ್ತು ಹೆಚ್ಚಾದಂತೆಲ್ಲ ಸ್ವಾರ್ಥ ಹೆಚ್ಚಾಗುತ್ತಿದೆ. ಅತಿಯಾದ ವೈಚಾರಿಕತೆಯಿಂದ ಜನರಲ್ಲಿ ಭಾವನೆಗಳು ಕಲುಷಿತಗೊಂಡಿವೆ. ಜನರು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ದೇವರಲ್ಲಿ ಭಕ್ತಿ ಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು

ಈ ಸಂದರ್ಭ ಬಿಜೆಪಿಯ ವಿಭಾಗ ಪ್ರಭಾರಿ ಮೈ ವಿ ರವಿಶಂಕರ್, ಬಿಜೆಪಿ ಮುಖಂಡ ಬಿ ಪಿ ಮಂಜುನಾಥ್, ಅನಿಲ್ ಥಾಮಸ್ , ನಗರ ಪಾಲಿಕಾ ಸದಸ್ಯರಾದ ಉಷಾ ಲೋಲಪ್ಪ, ಅಶ್ವಿನಿ ಶರತ್, ಆನಂದ್, ಮಧು ಪ್ರಸಾದ್, ನಾರಾಯಣ ಲೋಲಪ್ಪ, ಶರತ್  ಕುಮಾರ್, ಶಾಂತ , ಕೆ ಜೆ ರಮೇಶ್, ಸ್ಮಾರ್ಟ್ ಮಂಜು, ಲೋಹಿತ್, ವಿನೋದ್, ಶ್ರೀನಿವಾಸ ರಾಜ್ ಅರಸ್ ಹಾಜರಿದ್ದರು.