ಮನೆ ರಾಜ್ಯ ಶಿರಗುಪ್ಪದಲ್ಲಿ ಧರ್ಮಸಭೆ; ಸಿದ್ದಲಿಂಗ ಸ್ವಾಮೀಜಿಗೆ ಬಳ್ಳಾರಿ ಪ್ರವೇಶಕ್ಕೆ ತಡೆ..!

ಶಿರಗುಪ್ಪದಲ್ಲಿ ಧರ್ಮಸಭೆ; ಸಿದ್ದಲಿಂಗ ಸ್ವಾಮೀಜಿಗೆ ಬಳ್ಳಾರಿ ಪ್ರವೇಶಕ್ಕೆ ತಡೆ..!

0

ಕಲಬುರಗಿ : ಬಳ್ಳಾರಿಯ ಶಿರಗುಪ್ಪದಲ್ಲಿ ಆಯೋಜನೆಗೊಂಡಿದ್ದ ಹಿಂದೂ ಮಹಾಗಣಪತಿ ಧರ್ಮ ಸಭೆಯಲ್ಲಿ ಭಾಗಿಯಾಗಲು ಹೊರಟಿದ್ದ ಆಂದೋಲದ ಕರುಣೇಶ್ವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಗೆ ಬಳ್ಳಾರಿ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

ಇಂದು (ಬುಧವಾರ) ಬೆಳಗ್ಗೆ ಶಿರಗುಪ್ಪದಲ್ಲಿ ಹಿಂದೂ ಮಹಾಗಣಪತಿಯ ಪೂಜೆಗೆ ಹೊರಟಿದ್ದ, ಸ್ವಾಮೀಜಿಗೆ ಬಳ್ಳಾರಿ ಪ್ರವೇಶಕ್ಕೆ ನಿಷೇಧ ಹೇರಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರ ಆದೇಶ ಪ್ರಕಾರ ಸೆಪ್ಟೆಂಬರ್ 3ರಿಂದ 10 ವರೆಗೆ ಅಂದರೆ 8 ದಿನಗಳವರೆಗೆ ಸಿದ್ದಲಿಂಗ ಸ್ವಾಮೀಜಿಗೆ ಬಳ್ಳಾರಿ ಜಿಲ್ಲೆಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಕಾಂಗ್ರೆಸ್ ಸರ್ಕಾರ ಮುಂದುವರೆದ ಹಿಂದೂ ಧಮನ ನೀತಿಯ ಭಾಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹಿಂದುಗಳ ಧಾರ್ಮಿಕ ಸ್ವಾತಂತ್ರ‍್ಯವನ್ನು ಹತ್ತಿಕ್ಕುವ ಸರ್ಕಾರದ ಷಡ್ಯಂತ್ರ. ಹಿಂದೂ ಸಮುದಾಯದ ಧರ್ಮಸಭೆಗೆ ನಿಷೇಧ ಹೇರುವುದರಿಂದ ಜನರ ಮನೋಭಾವನೆಗಳನ್ನು ದಮನಗೊಳಿಸುವ ಯತ್ನ ನಡೆಯುತ್ತಿದೆ ಎಂದು ಸ್ವಾಮೀಜಿ ಆಕ್ರೋಶ ಹೊರಹಾಕಿದ್ದಾರೆ. ಇತ್ತೀಚಿಗಷ್ಟೇ ಶ್ರೀ ಸಿದ್ದಲಿಂಗ ಸ್ವಾಮೀಜಿ ಶಿವಸೇನೆಯ ಕರ್ನಾಟಕ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದರು.