ಮನೆ ದೇವಸ್ಥಾನ ಶ್ರೀ ಕ್ಷೇತ್ರದ ಧಾರ್ಮಿಕ ಆಚರಣೆಗಳು

ಶ್ರೀ ಕ್ಷೇತ್ರದ ಧಾರ್ಮಿಕ ಆಚರಣೆಗಳು

0

    ವಾರ್ಷಿಕ ರಥೋತ್ಸವವು ಪಂಚರಾತ್ರಾ ಆಗಮನ ಪದ್ದತಿಯಲ್ಲಿ ನಡೆಯುತ್ತದೆ. ಪಾಲ್ಗುಣ ಶುದ್ಧ ಪಾಂಡ್ಯದಿಂದ ಪಂಚಮಿಯ ತನಕ ಶ್ರೀ ಮಾತೆಯ ರಥೋತ್ಸವ. ಶ್ರೀ ಕ್ಷೇತ್ರದ ಬಿಟ್ಟಿ ಸೇವಾನಿರತ ಕುಟುಂಬದವರಿಂದ ರಥ ಕಟ್ಟುವ ಕೆಲಸ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ.

ಎಲ್ಲಾ ಕಾರ್ಯಗಳು ನಿರ್ವಿಘ್ನವಾಗಿ ನೆರವೇರಲು ಮೊದಲನೆಯ ದಿನ ಶ್ರೀ ಮಹಾಗಣಪತಿ ಹೋಮದಿಂದ ಆರಂಭವಾಗಿ ಎರಡನೆಯ ದಿನ ಬಿದಿಗೆಯಂದು ಧಾರ್ಮಿಕ ವಿಧಿ ವಿಧಾನಗಳು ಯಾಗಶಾಲಾ ಪ್ರವೇಶ, ಕಲಶ ಸ್ಥಾಪನೆ. ದ್ವಜಾರೋಹಣ ಕಾರ್ಯಕ್ರಮ ಮಧ್ಯಾಹ್ನದ ಶುಭಮೂರ್ತದಲ್ಲಿ ನಡೆಯುತ್ತದೆ. ಸಂಜೆ ದೇವಸ್ಥಾನದ ಚಕ್ರಗಲ್ಲಿನಲ್ಲಿ ವಾಸ್ತು ರಕ್ಷೋಘ್ನ ಹೋಮ ಮತ್ತು ಕಂಕಣಧಾರಣೆ,ಮಹಾ ಮಂಗಳಾರತಿ, ಬಲಿಪೂಜೆ ನಡೆಯುತ್ತದೆ. ತದಿಗೆಯಂದು ರಾಥಾಧಿವಾಸ ಹೋಮ, ರಥ ಶುದ್ದಿ ಅಭಿಜಿನ್ ಮೂಹೂರ್ತದಲ್ಲಿ ಬ್ರಹ್ಮರಥೋತ್ಸವ ಹಾಗೂ ರಾತ್ರಿ 10 ಗಂಟೆಗೆ ಮಹಾರಥೋತ್ಸವ. ಆನಂತರ ಬಾಮಿ ಅಂಗಡಿಯಲ್ಲಿ ಕಟ್ಟೆ ಪೂಜೆ ನಡೆದು ಶ್ರೀಮಾತೆಗೆ ಶಯನೋತ್ಸವ ನಡೆಯುತ್ತದೆ.

ಚತುರ್ಥಿಯಂದು  ಸುಪ್ರಭಾತ ಹೇಳಿ ಶ್ರೀಮಾತೆಯನ್ನು ಯೋಗ ನಿದ್ರೆಯಿಂದ ಎಬ್ಬಿಸುವ ಕಾರ್ಯ ನಡೆದು ಪ್ರತಃ ಬಲಿ ನಂತರ ಯಾತ್ರಾಧಿವಾಸ ಹೋಮ ನಡೆಯುತ್ತದೆ.ಶ್ರೀ ಮಾತೆಯ ಉತ್ಸವ ಮೂರ್ತಿಯನ್ನು ಯೋಗ ಶಾಲೆಯಲ್ಲಿ ಕೂರಿಸಿ ಹೋಮದ ಪೂರ್ಣಹುತಿ  ನಂತರ ಶ್ರೀಮಾತೆಯ ಪೇಟ ಉತ್ಸವ ನಡೆದು ಓಕುಳಿ ಧರ್ಮಕರ್ತರು ಹಾಗೂ  ಪರಿವಾರದವರು ದೇವಿಯ ಎದುರಿಗೆ ಆಡಿ ನಂತರ ಉತ್ಸವದಲ್ಲಿ ದೇವಿಯನ್ನು ಶ್ರೀ ಕ್ಷೇತ್ರದ ಆಡಳಿತಕ್ಕೆ ಒಳಪಟ್ಟ ಕನ್ಯಾರು ಗುಂಡಿ ಎಂಬ ನೈಸರ್ಗಿಕ ಸ್ಥಳದಲ್ಲಿ ಸೇವಾದಾರರು ನಿರ್ಮಿಸಿದ ಚಪರದಲ್ಲಿ ಶ್ರೀದೇವಿಯನ್ನು ಕೂರಿಸಿ ಯಾತ್ರಾದಿವಾಸ ಹೋಮದ ನಂತರ ಜಲಪಾತದ ಅಡಿಯಲ್ಲಿ ದೇವಿಯನ್ನು ಅವಭೃತ ಮಾಡಿಸಿ ತನ್ಮೂಲಕ ಆ ಸಂದರ್ಭದಲ್ಲಿ ಅಲ್ಲಿ ನೆರೆದಿರುವ ಎಲ್ಲಾ ಭಕ್ತರಿಗೂ ಅಪವಿತ್ರ ಜಲದಲ್ಲಿ ತೀರ್ಥ ಸ್ಥಾನ ಮಾಡಿಸುವ ವಿಶೇಷ ಪದ್ಧತಿಯು ನಡೆಯುತ್ತದೆ.

ಈ ಸಮಯದಲ್ಲಿ ಸಂತಾನ ಭಾಗ್ಯದ ಹರಕೆ ಹೊತ್ತಿರುವವರು ಈ ದಿನ ಅಲ್ಲಿಗೆ ಬಂದು ತೀರ್ಥಸ್ಥಾನವನ್ನು ಮಾಡಿಕೊಂಡು ದೇವಿಯ ಕೈಯಲ್ಲಿರುವ ಕಂಕಣವನ್ನು ಬಿಚ್ಚಿದ ನಂತರ ಕಟ್ಟಿಕೊಂಡರೆ ಸಂತಾನಾಪೇಕ್ಷಿತರಿಗೆ ಸಂತಾನ ಭಾಗ್ಯ ಪ್ರಾಪ್ತಿವಾಗುತ್ತದೆ.ಎಂದು ತಿಳಿದುಬಂದಿದೆ ರಾತ್ರಿಗೆ ಮಜಿನ ಕಟ್ಟೆಯಲ್ಲಿ ವಸಂತ ಪೂಜೆ, ನಂತರ ಧ್ವಜಾರೋಹಣ ಪತ್ರಿಯೆ ನಡೆಯುತ್ತದೆ. ರಥೋತ್ಸವ ಉತ್ಸವವು ಸಂಪ್ರೋಕ್ಷಣಾ ಹೋಮದೊಂದಿಗೆ ಮುಗಿಯುತ್ತದೆ.