ಮನೆ ರಾಜ್ಯ ಪ್ರಿಯಾಂಕ್ ಖರ್ಗೆಯನ್ನು ಸಂಪುಟದಿಂದ ಕೈಬಿಡಿ: ಛಲವಾದಿ ನಾರಾಯಣಸ್ವಾಮಿ

ಪ್ರಿಯಾಂಕ್ ಖರ್ಗೆಯನ್ನು ಸಂಪುಟದಿಂದ ಕೈಬಿಡಿ: ಛಲವಾದಿ ನಾರಾಯಣಸ್ವಾಮಿ

0

ಬೆಂಗಳೂರು:  ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣ ಸಂಬಂಧ ಸಚಿವ ಪ್ರಿಯಾಂಕ್ ಖರ್ಗೆಯನ್ನ ಸಂಪುಟದಿಂದ ಕೈಬಿಡಬೇಕು ಎಂದು ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಆಗ್ರಹಿಸಿದ್ದಾರೆ.

Join Our Whatsapp Group

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು. ಸಚಿವ ಪ್ರಿಯಾಂಕ್ ಖರ್ಗೆ ಬಂಧಿಸಬೇಕು ಸಚಿವ  ಪ್ರಿಯಾಂಕ್ ಖರ್ಗೆ ಅಟ್ಟಹಾಸ ಹೆಚ್ಚಳ. ಕಲಬುರಗಿ ಜಿಲ್ಲೆ ರಿಪಬ್ಲಿಕ್ ಆಫ್ ಕಲ್ಬುರ್ಗಿ ಆಗಿದೆ. ಅಲ್ಲಿ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದೇ ಆಡಳಿತ. ಕರ್ನಾಟಕದ ಆಡಳಿತವೇ ವೇಳೆ, ಕಲ್ಬುರ್ಗಿ ಆಡಳಿತವೇ ಬೇರೆ. ಪ್ರಿಯಾಂಕ್ ಖರ್ಗೆಯನ್ನು ಸಚಿವ ಸ್ಥಾ‌ನದಿಂದ ಕೈಬಿಡಬೇಕು ಎಂದು ಒತ್ತಾಯಿಸಿದರು.

ಪ್ರಿಯಾಂಕ್ ಖರ್ಗೆ ತಮಗೆ ಬೇಕಾದವರನ್ನು ಸಹಚರರನ್ನಾಗಿ ನೇಮಿಸಿಕೊಂಡು ಎಲ್ಲಾ ದಂಧೆಯಲ್ಲಿ ತೊಡಗಿದ್ದಾರೆ. ಈ ಕಾರಣಕ್ಕಾಗಿ ಸಚಿನ್ ಆತ್ಮಹತ್ಯೆ ಆಗಿದೆ. ಸಚಿನ್ ಗೆ ಧೈರ್ಯ ಸಾಕಾಗಿಲ್ಲ, ಪತ್ರ ಬರೆದಿಟ್ಟುಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೀಗಾಗಿ ಇದು ತ‌ನಿಖೆಯಾಗಲೇಬೇಕು ಎಂದರು.