ಮನೆ ಅಪರಾಧ ಕಲಬುರ್ಗಿಯಲ್ಲಿ ರೇಣುಕಾಸ್ವಾಮಿ ಮಾದರಿಯ ಕೊಲೆ: ಪ್ರೇಮ ವಿಚಾರದಲ್ಲಿ ರಾಘವೇಂದ್ರನನ್ನು ಬರ್ಬರವಾಗಿ ಹತ್ಯೆ

ಕಲಬುರ್ಗಿಯಲ್ಲಿ ರೇಣುಕಾಸ್ವಾಮಿ ಮಾದರಿಯ ಕೊಲೆ: ಪ್ರೇಮ ವಿಚಾರದಲ್ಲಿ ರಾಘವೇಂದ್ರನನ್ನು ಬರ್ಬರವಾಗಿ ಹತ್ಯೆ

0

ಕಲಬುರ್ಗಿ: ಜಿಲ್ಲೆಯಲ್ಲಿ ಚಿತ್ರದುರ್ಗ ಮೂಲಕ ರೇಣುಕಾಸ್ವಾಮಿಯನ್ನು ಡಿ ಬಾಸ್ ಅಂಡ್ ಗ್ಯಾಂಗ್ ಹತ್ಯೆ ಮಾಡಿದ ರೀತಿಯಲ್ಲೇ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವಂತ ಘಟನೆ ನಡೆದಿದೆ.

ಕಲಬುರ್ಗಿಯಲ್ಲಿ ರೇಣುಕಾಸ್ವಾಮಿ ರೀತಿಯಲ್ಲೇ 39 ವರ್ಷದ ರಾಘವೇಂದ್ರ ನಾಯಕ್ ಎಂಬಾತನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಮಾರ್ಚ್ 12ರಂದು ನಡೆದಿದ್ದಂತ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.

ಅಶ್ವಿನಿ ಎಂಬಾಕೆಗೆ ರಾಘವೇಂದ್ರ ಎಂಬಾತ ಕಿರುಕುಳ ನೀಡುತ್ತಿದ್ದನು. ರಾಘವೇಂದ್ರ ಕಿರುಕುಳ ನೀಡುತ್ತಿರುವ ಬಗ್ಗೆ ಪ್ರಿಯಕರ ಗುರುರಾಜ್ ಗೆ ಅಶ್ವಿನಿ ತಿಳಿಸಿದ್ದರು. ಹೀಗಾಗಿ ರಾಘವೇಂದ್ರನನ್ನು ಗುರುರಾಜ್ ಮತ್ತು ಗ್ಯಾಂಗ್ ಕಿಡ್ನಾಪ್ ಮಾಡಿದೆ.

ರಾಘವೇಂದ್ರನನ್ನು ಕಿಡ್ನಪ್ ಮಾಡಿಕೊಂಡು ಸ್ಮಶಾನಕ್ಕೆ ಕರೆದೊಯ್ದು ಭೀಕರವಾಗಿ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದಾಗಿ ರಾಘವೇಂದ್ರ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಇದೀಗ ಕಲಬುರ್ಗಿಯಲ್ಲಿ ರೇಣುಕಾಸ್ವಾಮಿ ಮಾದರಿಯಲ್ಲೇ ಬರ್ಬರವಾಗಿ ವ್ಯಕ್ತಿಯನ್ನು ಹತ್ಯೆ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ.