ಮನೆ ಸುದ್ದಿ ಜಾಲ ರೆಪೊ ದರ 40 ಬಿಪಿಎಸ್, ಶೇ.4.40ಕ್ಕೆ ಹೆಚ್ಚಳ: ಆರ್‌ಬಿಐ

ರೆಪೊ ದರ 40 ಬಿಪಿಎಸ್, ಶೇ.4.40ಕ್ಕೆ ಹೆಚ್ಚಳ: ಆರ್‌ಬಿಐ

0

ನವದೆಹಲಿ(New Delhi): ರೆಪೊ ದರದಲ್ಲಿ 40 ಮೂಲಾಂಶ ಹೆಚ್ಚಳ ಮಾಡಲಾಗಿದ್ದು, ಶೇ 4.40ಕ್ಕೆ ನಿಗದಿಪಡಿಸಲಾಗಿದ್ದು, ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್  ಗವರ್ನರ್ ಶಕ್ತಿಕಾಂತ ದಾಸ್ ಮಾಹಿತಿ ನೀಡಿದ್ದಾರೆ.

ದೆಹಲಿಯಲ್ಲಿ ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಾಲಿಸಿ ರೆಪೊ ದರಗಳನ್ನು 40 ಮೂಲಾಂಶಗಳಷ್ಟು ಹೆಚ್ಚಿಸಲು ಎಂಪಿಸಿ ಸರ್ವಾನುಮತದಿಂದ ಮತ ಹಾಕಿದೆ. ಹೆಚ್ಚುತ್ತಿರುವ ಹಣದುಬ್ಬರ ನಿಯಂತ್ರಿಸುವ ಉದ್ದೇಶದಿಂದ ರೆಪೊ ದರದಲ್ಲಿ 40 ಮೂಲಾಂಶ ಹೆಚ್ಚಳ ಮಾಡಲಾಗಿದ್ದು, ಶೇ 4.40ಕ್ಕೆ ನಿಗದಿಪಡಿಸಲಾಗಿದೆ. ಜಾಗತಿಕ ಆರ್ಥಿಕ ಅಸ್ಥಿರತೆ ನಡುವೆಯೂ ಭಾರತೀಯ ಆರ್ಥಿಕತೆ ಸ್ಥಿರವಾಗಿದೆ ಎಂದು ಹೇಳಿದರು.

ಅಂತೆಯೇ ನಗದು ಮೀಸಲು ಅನುಪಾತವನ್ನು (ಕ್ಯಾಶ್ ರಿಸರ್ವ್ ರೇಷಿಯೊ) ಬೇಡಿಕೆಯ 50 ಮೂಲಾಂಶ ಹೆಚ್ಚಿಸಲಾಗಿದ್ದು, ಶೇ 4.5ಕ್ಕೆ ನಿಗದಿಪಡಿಸಲಾಗಿದೆ. ಇದು 2022ರ ಮೇ 21ರಿಂದ ಜಾರಿಗೆ ಬರಲಿದೆ ಎಂದೂ ಅವರು ಮಾಹಿತಿ ನೀಡಿದರು.

ಅಲ್ಲದೆ 12 ಆಹಾರ ಉಪಗುಂಪುಗಳಲ್ಲಿ 9 ಸಮೂಹ ಸಂಸ್ಥೆಗಳು ಮಾರ್ಚ್ ತಿಂಗಳಲ್ಲಿ ಹಣದುಬ್ಬರದಲ್ಲಿ ಹೆಚ್ಚಳವನ್ನು ದಾಖಲಿಸಿದೆ. ಏಪ್ರಿಲ್‌ನ ಬೆಲೆ ಏರಿಕ ಸೂಚಕಗಳು ಆಹಾರದ ಬೆಲೆ ಒತ್ತಡದ ನಿರಂತರತೆಯನ್ನು ಸೂಚಿಸುತ್ತಿವೆ. 21ನೇ ಮೇ 2022 ರಿಂದ ಹದಿನೈದು ದಿನಗಳಿಂದ ಜಾರಿಯಾಗುವ ನಿವ್ವಳ ಬೇಡಿಕೆ ಮತ್ತು ಸಮಯದ ಹೊಣೆಗಾರಿಕೆಗಳಿಗಾಗಿ ನಗದು ಮೀಸಲು ಅನುಪಾತವನ್ನು  50 ಬೇಸಿಸ್ ಪಾಯಿಂಟ್‌ಗಳಿಂದ 4.5% ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. CRR ನಲ್ಲಿನ ಈ ಹೆಚ್ಚಳದ ಮೂಲಕ ನಗದು ಹಿಂತೆಗೆದುಕೊಳ್ಳುವಿಕೆಯು ರೂ. 87,000 ಕೋಟಿ ರೂ ಆಗಿದೆ ಎಂದು ಶಕ್ತಿಕಾಂತ್ ದಾಸ್ ಮಾಹಿತಿ ನೀಡಿದರು.

ಹಿಂದಿನ ಲೇಖನಪಿಎಸ್ ಐ ನೇಮಕಾತಿ ಅಕ್ರಮದಲ್ಲಿ ಮಾಜಿ ಸಿಎಂ ಪುತ್ರ ಭಾಗಿ ಆರೋಪ: ಸಿಐಡಿಗೆ ವಕೀಲರಿಂದ ದೂರು
ಮುಂದಿನ ಲೇಖನರಾಜಕಾರಣ ಮಾಡಲಷ್ಟೇ ದಲಿತ ಸಿಎಂ ಚರ್ಚೆ: ಸಚಿವ ನಾರಾಯಣಸ್ವಾಮಿ