ಮನೆ ರಾಷ್ಟ್ರೀಯ ಯಥಾಸ್ಥಿತಿ ಕಾಯ್ದುಕೊಂಡ ರೆಪೊ ದರ

ಯಥಾಸ್ಥಿತಿ ಕಾಯ್ದುಕೊಂಡ ರೆಪೊ ದರ

0

ನವದೆಹಲಿ: ರೆಪೊ ದರದಲ್ಲಿನ ಸತತ ಏರಿಕೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಗುರುವಾರ ವಿರಾಮ ನೀಡಿದ್ದು, ಹೀಗಾಗಿ, ಶೇಕಡ 6.5ರಲ್ಲೇ ರೆಪೊ ದರ ಯಥಾಸ್ಥಿತಿ ಕಾಯ್ದುಕೊಂಡಿದೆ.

Join Our Whatsapp Group

ಮೇ 2022 ರಿಂದ ಈಚೆಗೆ ಆರ್‌ಬಿಐ ರೆಪೊ ದರದಲ್ಲಿ 250 ಮೂಲಾಂಶಗಳನ್ನು ಹೆಚ್ಚಳ ಮಾಡಿದೆ.

ಗುರುವಾರ ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಿದ ಆರ್‌ ಬಿಐ ಗವರ್ನರ್ ಶಕ್ತಿಕಾಂತ ದಾಸ್, ಹಣಕಾಸು ನೀತಿ ಸಮಿತಿಯು (ಎಂಪಿಸಿ) ಭವಿಷ್ಯದಲ್ಲಿ ಯಾವುದೇ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ದಾಸ್‌ ತಿಳಿಸಿದರು.