ಮನೆ ರಾಜ್ಯ ಜಲಾಶಯದಿಂದ ನಿರೀಕ್ಷೆಗಿಂತ ಹೆಚ್ಚು ನೀರು ಬಿಡುಗಡೆ: ಪ್ರವಾಸಿಗರಿಗೆ ಮೇಕೆದಾಟು ಪ್ರವೇಶ ನಿಷೇಧ

ಜಲಾಶಯದಿಂದ ನಿರೀಕ್ಷೆಗಿಂತ ಹೆಚ್ಚು ನೀರು ಬಿಡುಗಡೆ: ಪ್ರವಾಸಿಗರಿಗೆ ಮೇಕೆದಾಟು ಪ್ರವೇಶ ನಿಷೇಧ

0

ರಾಮನಗರ: ಕಾವೇರಿ ಕೊಳ್ಳದ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುತ್ತಿದ್ದು, ಜಿಲ್ಲೆಯ ಗಡಿಭಾಗದಲ್ಲಿರುವ ಕನಕಪುರ ತಾಲೂಕಿನ ಸಂಗಮದಲ್ಲಿ ಮೈದುಂಬಿ ಹರಿಯುತ್ತಿರುವ ಕಾವೇರಿ ನದಿಯಿಂದ ಪಕ್ಕದ ರಾಜ್ಯ ತಮಿಳುನಾಡಿಗೆ ಲಕ್ಷಾಂತರ ಕ್ಯೂಸೆಕ್​ ನೀರು ಹರಿದು ಹೋಗುತ್ತಿದೆ.

Join Our Whatsapp Group

ಕೆಆರ್​ಎಸ್​ ಮತ್ತು ಕಬಿನಿ ಜಲಾಶಯದಿಂದ ಸತತ ಒಂದು ವಾರಗಳಿಂದಲೂ ನಿರಂತರವಾಗಿ ಅಪಾರ ಪ್ರಮಾಣದ​​ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಸಂಗಮ ಸ್ಥಳ ಮೇಕೆದಾಟು ಬಳಿ ನದಿ ಭೋರ್ಗರೆದು ಹರಿಯುತ್ತಿದೆ.

ಅಪಾಯದ ಮಟ್ಟ ಮೀರಿ ನದಿಯಲ್ಲಿ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹೈ ಅಲರ್ಟ್ ಘೋಷಿಸಿದೆ. ಮುಳುಗಡೆ ಭೀತಿ ಇರುವ ಗ್ರಾಮಗಳ ಮೇಲೆ ನಿಗಾ ಇರಿಸಲಾಗಿದೆ. ಸದ್ಯಕ್ಕೆ ಕನಕಪುರ ತಾಲೂಕಿನಲ್ಲಿ ನೆರೆ ಭೀತಿ ಎದುರಾಗಿಲ್ಲ. 2 ಲಕ್ಷ ಕ್ಯೂಸೆಕ್​ಗೂ ಹೆಚ್ಚು ನೀರು ನದಿಗೆ ಬಂದರೆ ಪ್ರವಾಹ ಭೀತಿ ಎದುರಾಗುವ ಸಾಧ್ಯತೆ ಇದೆ.

ಇನ್ನು, ಸಂಗಮ, ಮೇಕೆದಾಟು ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ಜಿಲ್ಲಾಡಳಿತ ನಿಷೇಧ ವಿಧಿಸಿದೆ. ಈ ಕುರಿತು ಈಗಾಗಲೇ ಸಂಗಮದ ಬಳಿ ಬ್ಯಾನರ್ ಹಾಕಿ ಸೂಚನೆ ನೀಡಲಾಗಿದೆ.

ಪ್ರತಿ ಶನಿವಾರ ಹಾಗೂ ಭಾನುವಾರ ಬಂತೆಂದರೆ ಸಾವಿರಾರು ಸಂಖ್ಯೆಯಲ್ಲಿ ಮೇಕೆದಾಟು ಹಾಗೂ ಸಂಗಮಕ್ಕೆ ಪ್ರವಾಸಿಗರು ಲಗ್ಗೆ ಇಡುತ್ತಿದ್ದರು. ಅದರಲ್ಲೂ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆಯಿಂದ ಪ್ರವಾಸಿಗರು ಬರುತ್ತಿದ್ದರು.