ಮನೆ ಸ್ಥಳೀಯ ವಾಹನ ಸಂಚಾರ ಹಾಗೂ ವಾಹನ ನಿಲುಗಡೆ ಮೇಲೆ ನಿರ್ಬಂಧ

ವಾಹನ ಸಂಚಾರ ಹಾಗೂ ವಾಹನ ನಿಲುಗಡೆ ಮೇಲೆ ನಿರ್ಬಂಧ

0

ಮೈಸೂರು:ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಪ್ರಯುಕ್ತ ಅಕ್ಟೋಬರ್ 15 ರಿಂದ 24 ರವರೆಗೆ ಪ್ರತಿದಿನ ಸಂಜೆ 4 ರಿಂದ ರಾತ್ರಿ 11 ಗಂಟೆಯವರೆಗೆ ನಗರದಲ್ಲಿ ವಾಹನ ಸಂಚಾರ ಅಧಿಕಗೊಳ್ಳುವುದರಿಂದ ವಾಹನಗಳ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಹಾಗೂ ಸಾರ್ವಜನಿಕರ ಹಿತ ದೃಷ್ಟಿಯಿಂದ ಕೆಲವೊಂದು ರಸ್ತೆಯಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಮತ್ತು ವಾಹನ ವ್ಯವಸ್ಥೆಯಲ್ಲಿ ಕೆಲವೊಂದು ನಿರ್ಬಂಧಗಳನ್ನು ವಿಧಿಸಲಾಗಿದೆ. ನಿರ್ಬಂಧಗಳನ್ನು ಗಣ್ಯರು ಮತ್ತು ಅತಿಥಿ ಗಣ್ಯರ ವಾಹನಗಳ ಸಂಚಾರವನ್ನು ಹೊರತುಪಡಿಸಿದಂತೆ ಇತರ ಎಲ್ಲಾ ಮಾದರಿಯ ವಾಹನ ಸಂಚಾರದ ಮೇಲೆ ನಿರ್ಬಂಧ ವಿಧಿಸಲಾಗಿದೆ.

ಅರಮನೆ ಸುತ್ತಮುತ್ತಲಿನ ರಸ್ತೆಗಳಲ್ಲಿ: (ಆಂಟಿ ಕ್ಲಾಕ್ ವೈಸ್) ಶ್ರೀ ಶಿವರಾತ್ರಿ ರಾಜೇಂದ್ರ ವೃತ್ತ (ಗನ್ ಹೌಸ್) – ಕುಸ್ತಿ ಅಖಾಡ ಜಂಕ್ಷನ್ – ಬಿ.ಎನ್.ರಸ್ತೆ – ಜಯಚಾಮರಾಜ ಒಡೆಯರ್ ವೃತ್ತ (ಹಾರ್ಡಿಂಜ್ ವೃತ್ತ)- ಆಲ್ಬರ್ಟ್ ವಿಕ್ಟರ್ ರಸ್ತೆ – ಚಾಮರಾಜ ಒಡೆಯರ್ ವೃತ್ತ (ಓಲ್ಡ್ ಸ್ಟಾಚ್ಯು ವೃತ್ತ) -ಕೆ.ಆರ್.ವೃತ್ತ ನ್ಯೂ ಸಯ್ಯಾಜಿರಾವ್ ರಸ್ತೆ ಕಾರ್ಪೋರೇಷನ್ ವೃತ್ತ- ಬಸವೇಶ್ವರ ವೃತ್ತ- ಶ್ರೀ ಶಿವರಾತ್ರಿ ರಾಜೇಂದ್ರ ವೃತ್ತ (ಗನ್ ಹೌಸ್), (ಪುರಂದರ ರಸ್ತೆಯನ್ನು ಒಳಗೊಂಡoತೆ) ಈ ರಸ್ತೆಗಳಲ್ಲಿ ಅರಮನೆಯನ್ನು ಮಧ್ಯ ಬಿಂದುವನ್ನಾಗಿ ಪರಿಗಣಿಸಿ ಗಡಿಯಾರದ ಮುಳ್ಳು ಸುತ್ತುವ ದಿಕ್ಕಿಗೆ ವಿರುದ್ಧ ದಿಕ್ಕಿನಲ್ಲಿ  Anti-Clockwise    ವಾಹನಗಳು ಸಂಚರಿಸಲು ಅವಕಾಶ ನೀಡಿರುತ್ತದೆ. ಕ್ಲಾಕ್ ವೈಸ್ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
(ಬಸವೇಶ್ವರ ವೃತ್ತದಿಂದ ಪೂರ್ವಕ್ಕೆ ಶ್ರೀ ಶಿವರಾತ್ರಿ ರಾಜೇಂದ್ರ ವೃತ್ತದ ವರೆಗಿನ ರಸ್ತೆ ಹೊರತುಪಡಿಸಿ)

 ಕೆ.ಆರ್.ವೃತ-ಆಯುರ್ವೇದಿಕ್ ವೃತ- ನೆಹರು ವೃತ್ತ ಚಾಮರಾಜ ಒಡೆಯರ್ ವೃತ್ತ (ಓಲ್ ಸ್ಟ್ಯಾಚ್ಯು ವೃತ್ತ)- ಕೆ.ಆರ್.ವೃತ( Clockwise    : ಕೆ,.ಆರ್. ವೃತ್ತ – ನ್ಯೂ ಸಯ್ಯಾಜಿರಾವ್ ರಸ್ತೆ- ಬಾಬಾ ಜಂಕ್ಷನ್ -ಆಯುರ್ವೇದಿಕ್ ವೃತ್ತ – ಇಶ್ವಿನ್ ರಸ್ತೆ ನೆಹರು ವೃತ್ತ ಅಶೋಕ ರಸ್ತೆ – ಮಹಾವೀರ ವೃತ್ತ (ದೊಡ್ಡ ಗಡಿಯಾರ)ಚಾಮರಾಜ ಒಡೆಯರ್ ವೃತ್ತ (ಓಲ್ಡ್ ಸ್ಟಾಚ್ಯು ವೃತ್ತ)- ಕೆ.ಆರ್.ವೃತ್ತ ಈ ರಸ್ತೆಗಳ ಮಧ್ಯ ಇರುವ ಪ್ರದೇಶವನ್ನು ಮಧ್ಯ ಬಿಂದುವನ್ನಾಗಿ ಪರಿಗಣಿಸಿ ಗಡಿಯಾರದ ಮುಳ್ಳು ಸುತ್ತುವ ದಿಕ್ಕಿಗೆ ( Clockwise    ) ವಾಹನಗಳು ಸಂಚರಿಸಲು ಅವಕಾಶ ನೀಡಿರುತ್ತದೆ. ಗಡಿಯಾರದ ಮುಳ್ಳು ಸುತ್ತುವ ವಿರುದ್ಧ ದಿಕ್ಕಿನಲ್ಲಿ  Anti-Clockwise   ವಾಹನಗಳು ಸಂಚರಿಸದAತೆ ನಿರ್ಬಂಧಿಸಲಾಗಿದೆ.

 ಅಶೋಕ ರಸ್ತೆ-ದಾವೂದ್‌ಖಾನ್ ರಸ್ತೆ ಜಂಕ್ಷನ್ ನಿಂದ ನೆಹರು ವೃತ್ತದವರೆಗೆ: ಅಶೋಕ ರಸ್ತೆಯಲ್ಲಿ ದಾವೂದ್‌ಖಾನ್ ರಸ್ತೆ ಜಂಕ್ಷನ್ (ಗಾಂಧಿ ಮೆಡಿಕಲ್ಸ್) ಇಂದ ನೆಹರು ಸರ್ಕಲ್‌ವರೆಗೆ ದಕ್ಷಿಣಕ್ಕೆ ವಾಹನಗಳ ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದೆ. – ಅಶೋಕ ರಸ್ತೆಯಲ್ಲಿ ನೆಹರು ಸರ್ಕಲ್‌ನಿಂದ ದಾವೂದ್‌ಖಾನ್ ರಸ್ತೆ ಜಂಕ್ಷನ್‌ವರೆಗೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಬನುಮಯ್ಯ ರಸ್ತೆಯಲ್ಲಿ ಚಾಮರಾಜ ಜೋಡಿ ರಸ್ತೆ ಜಂಕ್ಷನ್‌ನಿoದ ಬನುಮಯ್ಯ ಚೌಕದವರೆಗೆ: ಚಾಮರಾಜ ಜೋಡಿ ರಸ್ತೆಯಿಂದ ಬನುಮಯ್ಯ ಚೌಕದವರೆಗೆ ಉತ್ತರಕ್ಕೆ ವಾಹನಗಳ ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಬನುಮಯ್ಯ ಚೌಕದಿಂದ ಚಾಮರಾಜ ಜೋಡಿ ರಸ್ತೆ ವರೆಗೆ ಉತ್ತರದಿಂದ ದಕ್ಷಿಣಕ್ಕೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ತ್ಯಾಗರಾಜ ರಸ್ತೆಯಲ್ಲಿ ಎನ್.ಮಾಧವರಾವ್ ವೃತ್ತ (ಅಗ್ರಹಾರ ವೃತ್ತ) ದಿಂದ ಚಾಮರಾಜ ಜೋಡಿ ರಸ್ತೆ ಜಂಕ್ಷನ್‌ವರೆಗೆ: ಎನ್.ಮಾಧವರಾವ್‌ವೃತ್ತ (ಅಗ್ರಹಾರ ವೃತ್ತ) ದಿಂದ ಉತ್ತರಕ್ಕೆ ತ್ಯಾಗರಾಜ ರಸ್ತೆಯಲ್ಲಿ ಚಾಮರಾಜ ಜೋಡಿ ರಸ್ತೆಯವರೆಗೆ ವಾಹನಗಳ ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ಚಾಮರಾಜ ಜೋಡಿ ರಸ್ತೆಯಿಂದ ತ್ಯಾಗರಾಜ ರಸ್ತೆಯಲ್ಲಿ ಎನ್.ಮಾಧವರಾವ್ ವೃತ್ತ (ಅಗ್ರಹಾರ ವೃತ್ತ) ದವರೆಗೆ ದಕ್ಷಿಣಕ್ಕೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಲೋಕರAಜನ್ ರಸ್ತೆಯಲ್ಲಿ ಎಸ್.ಅಂಗಣ್ಣ ವೃತ್ತದಿಂದ (ಚಿರಾಗ್ ಜಂಕ್ಷನ್) ಪೂರ್ವಕ್ಕೆ ಸರ್ಕಸ್ ಮೈದಾನದ ಜಂಕ್ಷನ್‌ವರೆಗೆ: ಸರ್ಕಸ್ ಮೈದಾನದ ಜಂಕ್ಷನ್‌ನಿoದ ಪೂರ್ವದಿಂದ ಪಶ್ಚಿಮಕ್ಕೆ ಜಯಚಾಮರಾಜ ಒಡೆಯರ್ ವೃತ್ತದ (ಹಾರ್ಡಿಂಜ್ ವೃತ್ತ) ವರೆಗೆ ವಾಹನಗಳ ಏಕಮುಖ ಸಂಚಾರಕ್ಕೆ ಅವಕಾಶ ನೀಡಿರುತ್ತದೆ. ಎಸ್.ಅಂಗಣ್ಣ ವೃತ್ತದಿಂದ (ಚಿರಾಗ್ ಜಂಕ್ಷನ್) ಪೂರ್ವಕ್ಕೆ ಸರ್ಕಸ್ ಮೈದಾನದವರೆಗೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಚoದ್ರಗುಪ್ತ ರಸ್ತೆಯಲ್ಲಿ ಬಿ.ಎನ್.ರಸ್ತೆ ಜಂಕ್ಷನ್‌ನಿoದ ಅಶೋಕ ರಸ್ತೆ ಜಂಕ್ಷನ್‌ವರೆಗೆ: ಚಂದ್ರಗುಪ್ತ ರಸ್ತೆಯಲ್ಲಿ ಬಿ.ಎನ್.ರಸ್ತೆ ಜಂಕ್ಷನ್‌ನಿAದ ಅಶೋಕ ರಸ್ತೆ ಜಂಕ್ಷನ್‌ವರೆಗೆ ಏಕಮುಖ ಸಂಚಾರ ವ್ಯವಸ್ಥೆ ಜಾರಿಯಲ್ಲಿದ್ದು, ದಿನಾಂಕ 15.10.2023 ರಿಂದ 24.10.2023 ರವರೆಗೆ ಏಕಮುಖ ಸಂಚಾರ ವ್ಯವಸ್ಥೆಯನ್ನು ತಾತ್ಕಲಿಕವಾಗಿ ರದ್ದುಗೊಆಸಿ ಅಶೋಕ ರಸ್ತೆಯಿಂದ ಬಿ.ಎನ್.ರಸ್ತೆ ಜಂಕ್ಷನ್‌ವರೆಗೆ ಪಶ್ಚಿಮದಿಂದ ಪೂರ್ವ ದಿಕ್ಕಿಗೆ ಏಕಮುಖ ಸಂಚಾರ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.

ಮೃಗಾಲಯ ರಸ್ತೆಯಲ್ಲಿ ಎಸ್.ಲಿಂಗಣ್ಣ ವೃತ್ತದಿಂದ (ಚಿರಾಗ್ ಜಂಕ್ಷನ್) ಎಫ್.ಕೆ.ಇರಾನಿ ವೃತ್ತದವರೆಗೆ (ಮಿರ್ಜಾ ವೃತ್ತ): ಎಸ್.ಅಂಗಣ್ಣ ವೃತ್ತದಿಂದ (ಚಿರಾಗ್ ಜಂಕ್ಷನ್) ಎಫ್.ಕೆ.ಇರಾನಿ ವೃತ್ತದವರೆಗೆ (ಮಿರ್ಜಾ ವೃತ್ತ) ದಕ್ಷಿಣದಿಂದ ಉತ್ತರಕ್ಕೆ ವಾಹನಗಳ ಏಕಮುಖ ಸಂಚಾರಕ್ಕೆ ಅವಕಾಶ ನೀಡಿರುತ್ತದೆ. ಎಫ್.ಕೆ.ಇರಾನಿ ವೃತ್ತದಿಂದ (ಮಿರ್ಜಾ ವೃತ್ತ)ಎಸ್.ಅಂಗಣ್ಣ ವೃತ್ತದವರೆಗೆ (ಚಿರಾಗ್ ಜಂಕ್ಷನ್) ಉತ್ತರದಿಂದ ದಕ್ಷಿಣಕ್ಕೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ವಾಹನ ನಿಲುಗಡೆ ನಿಷೇಧಿತ ಪ್ರದೇಶಗಳು:
ಮೈಸೂರು ಅರಮನೆಯ ಸುತ್ತಲಿನ ರಸ್ತೆಗಳಾದ ಬಿ.ಎನ್.ರಸ್ತೆ, ಎ.ವಿ.ರಸ್ತೆ, ಸಯ್ಯಾಜಿರಾವ್ ರಸ್ತೆ, ಪುರಂದರ ರಸ್ತೆಗಳಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ, ರಮಾವಿಲಾಸ ರಸ್ತೆಯಲ್ಲಿ ಮೂಡಾ ಜಂಕ್ಷನ್ ನಿಂದ ಬನುಮಯ್ಯ ಕಾಲೇಜು ಜಂಕ್ಷನ್‌ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ (ಕೆ.ಎಸ್.ಆರ್.ಟಿ.ಸಿ ಸಾರಿಗೆ ಬಸ್‌ಗಳನ್ನು ಹೊರತುಪಡಿಸಿ)ಎಲ್ಲಾ ಮಾದರಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.
ಸಯ್ಯಾಜಿರಾವ್ ರಸ್ತೆಯಲ್ಲಿ ಬಸವೇಶ್ವರ ವೃತ್ತದಿಂದ ಅಗ್ರಹಾರ ವೃತ್ತದವರೆಗೆ ರಸ್ತೆಯ ಎರಡೂ ಬದಿಗಳಲ್ಲಿ, ಎಂ.ಜಿ ರಸ್ತೆಯಲ್ಲಿ ಅಗ್ರಹಾರ ವೃತ್ತದಿಂದ ಸಿದ್ದಪ್ಪ ಚೌಕದವರೆಗೆ ರಸ್ತೆಯ ಎಡ ಬದಿಯಲಿ,್ಲ ಎಂ.ಜಿ ರಸ್ತೆಯಲ್ಲಿ ಅಗ್ರಹಾರ ವೃತ್ತದಿಂದ ಹಳೆ ಜೆ.ಎಸ್.ಎಸ್ ಆಸ್ಪತ್ರೆ ಜಂಕ್ಷನ್‌ವರೆಗೆ ರಸ್ತೆಯ ಎಡ ಬದಿಗಳಲ್ಲಿ, ಜೆ.ಎಲ್.ಬಿ ರಸ್ತೆಯಲ್ಲಿ ಶ್ರೀನಿವಾಸ ವೃತ್ತದಿಂದ ಎಲೆ ತೋಟ ಜಂಕ್ಷನ್ ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ, ರಾಮಸ್ವಾಮಿ ವೃತ್ತದಿಂದ ಸರಸ್ವತಿಪುರಂ ಅಗ್ನಿಶಾಮಕ ಠಾಣೆ ಜಂಕ್ಷನ್‌ವರೆಗಿನ ರಸ್ತೆಯ ಎರಡೂ ಬದಿಗಳಲ್ಲಿ, ಅಶೋಕ ರಸ್ತೆಯಲ್ಲಿ ಮಿಲಾದ್ ಪಾರ್ಕ್ ಜಂಕ್ಷನ್‌ನಿoದ ಹರ್ಷ ರಸ್ತೆ ಜಂಕ್ಷನ್‌ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಹಾಗೂ ಗಾಂಧಿ ಚೌಕದ ಸುತ್ತಲಿನಲ್ಲಿ ರಸ್ತೆ ಬದಿಯಲ್ಲಿ (ಕೆ.ಎಸ್.ಆರ್.ಟಿ.ಸಿ ಬಸ್‌ಗಳನ್ನು ಹೊರತುಪಡಿಸಿ) ಎಲ್ಲಾ ಮಾದರಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.

ಓಲ್ಡ್ ಬ್ಯಾಂಕ್ ರಸ್ತೆಯಲ್ಲಿ ಗಾಂಧಿ ಚೌಕದಿಂದ ಸಯ್ಯಾಜಿರಾವ್ ರಸ್ತೆ ಜಂಕ್ಷನ್‌ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ, ಚಂದ್ರಗುಪ್ತ ರಸ್ತೆಯಲ್ಲಿ ಅಶೋಕ ರಸ್ತೆ ಜಂಕ್ಷನ್ ನಿಂದ ಬಿ.ಎನ್ ರಸ್ತೆ ಜಂಕ್ಷನ್‌ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ, ನೆಹರು ವೃತ್ತದಿಂದ ನೇಮಿನಾಥ ಸ್ಟೀಲ್ ಜಂಕ್ಷನ್‌ವರೆಗೆ (ಮಿನಿ ವಿಧಾನಸೌಧ ರಸ್ತೆ ) ರಸ್ತೆಯ ಎರಡೂ ಬದಿಗಳಲ್ಲಿ, ಬಿ.ಎನ್ ರಸ್ತೆಯಲ್ಲಿ ಹೈದರಾಲಿ ಖಾನ್ ವೃತ್ತ (ಫೈವ್‌ಲೈಟ್ ಸರ್ಕಲ್) ದಿಂದ ಸೆಂಟ್ರಲ್ ಮಾಲ್ (ಛತ್ರಿ ಮರ) ಜಂಕ್ಷನ್‌ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ, ಜೆ.ಕೆ.ಗ್ರೌಂಡ್ ಜಂಕ್ಷನ್‌ನಿoದ ಟಿ.ಎನ್.ನರಸಿಂಹಮೂರ್ತಿ ವೃತ್ತದವರೆಗೆ (ಎಲ್.ಐ.ಸಿ ವೃತ್ತ) ರಸ್ತೆಯ ಎರಡೂ ಬದಿಗಳಲ್ಲಿ ಎಲ್ಲಾ ಮಾದರಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.

ಡಾ|| ರಾಜಕುಮಾರ್ ವೃತ್ತ (ಫೌಂಟನ್ ವೃತ್ತ) ದಿಂದ ಹಳೆ ಮೈಸೂರು-ಬೆಂಗಳೂರು ರಸ್ತೆಯಲ್ಲಿ ನಾಡಪ್ರಭು ಕೆಂಪೇಗೌಡ ವೃತ್ತದವರೆಗೆ ರಸ್ತೆಯ ಎರಡೂ ಬದಿಗಳಲಿ,್ಲ ಟಿ.ಎನ್.ನರಸಿಂಹಮೂರ್ತಿ ವೃತ್ತದಿಂದ (ಎಲ್.ಐ.ಸಿ ವೃತ್ತ) ಹೊಸ ಮೈಸೂರು ಬೆಂಗಳೂರು ರಸ್ತೆಯಲ್ಲಿ ಓಲ್ಡ್ ಟೋಲ್‌ಗೇಟ್ ಜಂಕ್ಷನ್‌ವರೆಗೆ ಎರಡೂ ಬದಿಗಳಲ್ಲಿ, ಸರ್ಕಾರಿ ಭವನದ ರಸ್ತೆಯಲ್ಲಿ, ಸರ್ಕಾರಿ ಭವನದ ದಕ್ಷಿಣ ದ್ವಾರದ ಜಂಕ್ಷನ್‌ನಿoದ ದಕ್ಷಿಣಕ್ಕೆ ಜಯಚಾಮರಾಜೇಂದ್ರ ಒಡೆಯರ್ ವೃತ್ತದವರೆಗೆ (ಹಾರ್ಡಿಂಜ್ ವೃತ್ತ) ರಸ್ತೆಯ ಎರಡೂ ಬದಿಗಳಲ್ಲಿ, ಲೋಕರಂಜನ್ ರಸ್ತೆಯಲ್ಲಿ ಸರ್ಕಸ್ ಗ್ರೌಂಡ್ ಜಂಕ್ಷನ್‌ನಿoದ ಜಯಚಾಮರಾಜೇಂದ್ರ ಒಡೆಯರ್ ವೃತ್ತದವರೆಗೆ (ಹಾರ್ಡಿಂಜ್ ವೃತ್ತ) ರಸ್ತೆಯ ಎರಡೂ ಬದಿಗಳಲ್ಲಿ, ಹರಿಕೃಷ್ಣ ವೃತ್ತದಿಂದ (ಡಿ.ಪಿ.ಓ) ಹಳೆ ಬಿ.ಜೆ.ಪಿ.ಕಛೇರಿ ಜಂಕ್ಷನ್ ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಹಾಗೂ ವಸ್ತು ಪ್ರದರ್ಶನ ಮೈದಾನದ ಮೇನ್ ಗೇಟ್ ಜಂಕ್ಷನ್‌ನಿAದ ಮೃಗಾಲಯ ರಸ್ತೆ ಜಂಕ್ಷನ್‌ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಎಲ್ಲಾ ಮಾದರಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.

 ಇಟ್ಟಿಗೆಗೂಡಿನ 5ನೇ ಕ್ರಾಸ್ ರಸ್ತೆಯಲ್ಲಿ ಮೃಗಾಲಯದ ರಸ್ತೆ ಜಂಕ್ಷನ್‌ನಿoದ ವಸ್ತು ಪ್ರದರ್ಶನ ಮೈದಾನದ ಪೂರ್ವ ದ್ವಾರದವರೆಗೆ ರಸ್ತೆಯ ಎರಡೂ ಬದಿಗಳಲ್ಲಿ, ಮಾನಸರ ರಸ್ತೆಯಲ್ಲಿ ಎಂ.ಜಿ.ರಸ್ತೆ ಜಂಕ್ಷನ್‌ನಿAದ (ಮಾಲ್ ಆಫ್ ಮೈಸೂರು) ಲೋಕರಂಜನ್ ರಸ್ತೆ ಜಂಕ್ಷನ್ ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ, ಮಲೈಮಹದೇಶ್ವರ ರಸ್ತೆಯಲ್ಲಿ ಬಿ.ಎನ್.ರಸ್ತೆ ಜಂಕ್ಷನ್‌ನಿoದ (ಛತ್ರಿ ಮರ) ಪೂರ್ವಕ್ಕೆ ಚನ್ನಯ್ಯ ವೃತ್ತದವರೆಗೆ ರಸ್ತೆಯ ಎರಡೂ ಬದಿಗಳಲಿ,್ಲ ಕಾಳಿಕಾಂಭ ದೇವಸ್ಥಾನ ಜಂಕ್ಷನ್‌ನಿoದ ಸಮೋಸಾ ಕಾರ್ನರ್‌ವರೆಗೆ ಹಾಗೂ ಮಹದೇವಪುರ ರಸ್ತೆಯಲ್ಲಿ ಸಮೋಸಾ ಕಾರ್ನರ್ ಜಂಕ್ಷನ್‌ನಿoದ ಉದಯಗಿರಿ ಜಂಕ್ಷನ್‌ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಎಲ್ಲಾ ಮಾದರಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.

  • ಟ್ಯಾಗ್ಗಳು
  • Mysore
ಹಿಂದಿನ ಲೇಖನಅನುಮತಿ ದೊರೆತಿರುವುದು ಮಹಿಷಾ ದಸರಾಕ್ಕಲ್ಲ, ಮಹಿಷ ಉತ್ಸವಕ್ಕೆ
ಮುಂದಿನ ಲೇಖನಖಾಸಗಿ ಬಸ್‌ಗಳ ಸಂಚಾರದ ಮೇಲಿನ ನಿರ್ಬಂಧ