Saval TV on YouTube
ಗುಂಡ್ಲುಪೇಟೆ(Gundlupete): ಹೊಸ ವರ್ಷ ಸಂಭ್ರಮಕ್ಕೆ ಇನ್ನೆರಡು ಮೂರು ದಿನಗಳಷ್ಟೇ ಬಾಕಿ ಇದ್ದು, ಈ ನಡುವೆ ಬಂಡೀಪುರದಲ್ಲಿ ಹೊಸ ವರ್ಷಾಚರಣೆಗೆ ನಿರ್ಬಂಧ ಹೇರಲಾಗಿದೆ.
ಡಿಸೆಂಬರ್ 31 ಹಾಗೂ ಜನವರಿ 1 ರಂದು ಅರಣ್ಯ ಇಲಾಖೆಯ ಡಾರ್ಮೆಟರಿಗಳು, ಕಾಟೇಜ್ ಗೆಸ್ಟ್ ಹೌಸ್’ಗಳಲ್ಲಿ ವಾಸ್ತವ್ಯಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಆನ್ ಲೈನ್ ಬುಕಿಂಗ್ ಕೂಡಾ ಬ್ಲಾಕ್ ಮಾಡಲಾಗಿದೆ.
ಆದರೆ ಎಂದಿನಂತೆ ಬೆಳಗ್ಗೆ ಹಾಗೂ ಸಂಜೆ ಸಫಾರಿ ಇರಲಿದೆ. ಆದರೆ ವಾಸ್ತವ್ಯ ಹೂಡುವಂತಿಲ್ಲ ಎಂದು ಬಂಡೀಪುರ ಸಿಎಫ್ ಡಾ.ರಮೇಶ್ ಕುಮಾರ್ ಹೇಳಿದ್ದಾರೆ.