ಮನೆ ಕಾನೂನು ನಿರೀಕ್ಷಣಾ ಜಾಮೀನು ಅರ್ಜಿ ವಾಪಾಸ್ ಪಡೆದ ರೇವಣ್ಣ

ನಿರೀಕ್ಷಣಾ ಜಾಮೀನು ಅರ್ಜಿ ವಾಪಾಸ್ ಪಡೆದ ರೇವಣ್ಣ

0

ಬೆಂಗಳೂರು: ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಮಾಜಿ ಸಚಿವ, ಶಾಸಕ ಎಚ್ ಡಿ ರೇವಣ್ಣ ಅವರು ಶುಕ್ರವಾರ ತಮ್ಮ ಅರ್ಜಿ ವಾಪಾಸ್ ಪಡೆದಿದ್ದಾರೆ.

Join Our Whatsapp Group

ಎಚ್ ಡಿ ರೇವಣ್ಣ ಅವರು ಗುರುವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಶುಕ್ರವಾರ ವಿಚಾರಣೆ ನಡೆಯಿತು.

ರೇವಣ್ಣ ಪರ ವಾದ ಮಂಡಿಸಿದ ವಕೀಲರು, ಬಲವಂತದ ಕ್ರಮ ಕೈಗೊಳ್ಳದಂತೆ ಮನವಿ ಮಾಡಿದರು.

ಎಸ್ಐಟಿ ಪರವಾಗಿ ವಾದ ಮಂಡಿಸಿದ ಎಸ್ಪಿಪಿ ಜಗದೀಶ್, ರೇವಣ್ಣ ಪ್ರಕರಣದಲ್ಲಿ ಸೆಕ್ಷನ್‌ 376 ಸೇರ್ಪಡೆ ಮಾಡಿಲ್ಲ. 376 ಅಲ್ಲದೆ ಬೇರೆ ಯಾವುದು ಜಾಮೀನು ಸಿಗದ ಸೆಕ್ಷನ್ ಹಾಕಲ್ಲ ಎಂದು ತಿಳಿಸಿದರು.

ಈ ಹಿನ್ನೆಲೆಯಲ್ಲಿ ರೇವಣ್ಣ ಪರ ವಕೀಲರು ನಿರೀಕ್ಷಣಾ ಜಾಮೀನು ಅರ್ಜಿ ವಾಪಸ್ ಪಡೆದರು.