ಕ್ಷೇತ್ರ -ಮೀನರಾಶಿಯಲ್ಲಿ 16 ಡಿಗ್ರಿ.40 ಕಲೆಯಿಂಧ 30 ಡಿಗ್ರಿಯವರೆಗೆ ರಾಶಿ ಸ್ವಾಮಿ -ಗುರು, ನಕ್ಷತ್ರ ಸ್ವಾಮಿ, -ಬುಧ,ಗಣ -ದೇವ,ನಾಡಿ -ಅಂತ್ಯ, ಯೋನಿ -ಗಜ,ನಮಾಕ್ಷರ ದೆ, ದಾ, ಚಾ, ಚೀ, ಶರೀರಭಾಗ ಕಾಲುಗಳ ಹಿಮ್ಮಡ, ನರಗಳು,ಪಾದದ ಅಡಿ ಭಾಗ.
ರೋಗಗಳು :ಉದಾರವಿಕಾರ, ಪಾದವಿಕಾರ, ಕರುಳಿನ ಆಲ್ಸರ್, ಕಿವುಡಾಗುವುದು,ಗಂಟು ಕಾಲು ಬಾಯವದು,ದಣಿವು, ಮಾದಕ ಪದಾರ್ಥಗಳಿಂದ ಬರುವ ರೋಗಗಳು.
ಸಂರಚನೆ: ಮನಸ್ಸಿನಲ್ಲಿ ಎರಡು ಬಗೆಯಿರುವದು. ಸಂಶಯಿ, ಧಾರಿಕ ದರ್ಶನಿಕ, ವಿಚಾರವಂತ ಹಾಸ್ಯಪ್ರಿಯ, ಬುದ್ದಿವಂತ, ಆಧ್ಯಯನಶೀಲ, ಪ್ರಾಮಾಣಿಕ, ಉದಾರ ಗೌರವಾನ್ವಿತ, ಸ್ವಾಮಿ ಭಕ್ತ,ರಾಷ್ಟ್ರ ಭಕ್ತ, ಮತ್ತು ಮಾತುಗಾರ, ನಿಧಾನವಾಗಿ ಕೆಲಸ ಮಾಡುವವನು, ಆಗಬಹುದಾಗಿದೆ.
ಉದ್ಯೋಗ ವಿಶೇಷಗಳು :ಪ್ರಕಾಶ ಸಂಪಾದಕ,ಧಾರ್ಮಿಕ ಕಾರೄಕರ್ತ,ಕಾನೂನು ಪದವೀಧರ, ಇಂಜಿನಿಯರ, ಶೇರವ್ಯಾಪಾರಿ, ಪತ್ರ ಪ್ರಚಕಾರ,ಸ್ವಾಗತಕಾರ, ಖಚಾಂಚಿ, ರಾಜನೀತಿಜ್ಞ, ಪ್ರೊಫೆಷರ, ನ್ಯಾಯಾಧೀಶ,ವಕೀಲ, ವೈದ್ಯ, ರಾಜ್ಯಪ್ರತಿನಿಧಿ,ಅಂತರಾಷ್ಟ್ರೀಯ ವ್ಯಾಪಾರಿ,ಸಂದೇಶವಾಹಕ, ಕವಿ,ಲೇಖಕ,ವಿಶ್ವವಿದ್ಯಾನಿಲಯ ನೌಕರ ಮೌಲ್ವಿ ಪಾದ್ರಿ, ಪೂಜಾರಿ ಪುರೋಹಿತರಾಗಬಹುದು.
ವ್ಯಂಗ್ಯಲೇಖಕ, ದರ್ಜಿ, ಕೈಬೆಳರಳುತಜ್ಞ, ಹಸ್ತರೇಖಾ ವಿಶೇಷಜ್ಞ ಅಬಕಾರಿ ನೌಕರರ, ಭಾಷಣಕಾರ, ಕೂಟನಿತ್ತಿಜ್ಞನಾಗಬಹುದಾಗಿದೆ.ಈ ನಕ್ಷತ್ರದಲ್ಲಿ ಜನಿಸಿದವರು ವಿದ್ಯಾ ಪ್ರೇಮಿಗಳು, ಗುಣವಂತರು,ಗೌರವಾನ್ವಿತರು, ಆಗುವರು. ಸಂಶಯಿಗಳು ಧ್ಯಾತ್ಮಿಕ ವಿಕಾಸ ಹೊಂದಿರುವವರೂ ಆಗುವರು. ಲೇಖನ ಮತ್ತು ಸಾಮಾಜಿಕ ಸೇವೆಯಲ್ಲಿ ಯಶಸ್ಸು ಗಳಿಸುವರು. ಸೂರ್ಯನು ಈ ನಕ್ಷತ್ರದ ಚೈತ್ರ ಮಾಸದ ಕೊನೆಯಲ್ಲಿ 13 ದಿವಸಗಳವರೆಗೆ ಇರುವನು.ಚಂದ್ರನು ಒಂದು ದಿನ ವಿರುವನು.















