ಜನನ, ಮರಣಗಳ ನೋಂದಣಿಯ ವಿಳಂಬ ಶುಲ್ಕವನ್ನು ಕ್ರಮವಾಗಿ 9(1), 9(2) ಮತ್ತು 9(3) ಕ್ಕೆ 100ರೂ., 200 ರೂ., ಮತ್ತು 500 ರೂ. ಗಳಿಗೆ ಪರಿಷ್ಕರಿಸಲಾಗಿದೆ ಎಂದು ಜನನ, ಮರಣಗಳ ಮುಖ್ಯ ನೋಂದಣಾಧಿಕಾರಿ ಡಾ.ವಿ.ಮುನಿರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜನನ, ಮರಣಗಳ ನೋಂದಣಿ (ತಿದ್ದುಪಡಿ) ಅಧಿನಿಯಮ 2023ಕ್ಕೆ ಅನುಗುಣವಾಗಿ ಕರ್ನಾಟಕ ಜನನ, ಮರಣಗಳ ನಿಯಮಗಳು 2023 ರನ್ನು ಉಲ್ಲೇಖ (2) ಅಧಿಸೂಚನೆಯಲ್ಲಿ ಹೊರಡಿಸಲಾಗಿದೆ.
ಒಂದು ವರ್ಷದ ನಂತರ ನೋಂದಾಯಿಸುವ ಜನನ, ಮರಣ ಘಟನೆಗಳಿಗೆ ಮೊದಲನೇ ವರ್ಗದ ದಂಡಾಧಿಕಾರಿ ಅಥವಾ ಮಹಾಪ್ರಾಂತ ದಂಡಾಧಿಕಾರಿಯ ಆದೇಶದ ಬದಲಿಗೆ ಇನ್ನು ಮುಂದೆ ಕಂದಾಯ ಇಲಾಖೆಯ ಉಪ ವಿಭಾಗಾಧಿಕಾರಿ ಆದೇಶವನ್ನು ಪಡೆಯಲು ಸೂಚಿಸಲಾಗಿದೆ.