ಮನೆ ಕಾನೂನು ಪಿಎಂ ಕೇರ್ಸ್ ನಿಧಿ ಪ್ರಶ್ನಿಸಿ ಮರುಪರಿಶೀಲನಾ ಅರ್ಜಿ: ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದ ಅಲಾಹಾಬಾದ್ ಹೈಕೋರ್ಟ್

ಪಿಎಂ ಕೇರ್ಸ್ ನಿಧಿ ಪ್ರಶ್ನಿಸಿ ಮರುಪರಿಶೀಲನಾ ಅರ್ಜಿ: ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದ ಅಲಾಹಾಬಾದ್ ಹೈಕೋರ್ಟ್

0

ಪಿಎಂ ಕೇರ್ಸ್ ನಿಧಿಯ (ಪ್ರಧಾನ ಮಂತ್ರಿಯ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಪರಿಹಾರ) ಕಾನೂನು ಮಾನ್ಯತೆ ಪ್ರಶ್ನಿಸಿ ಸಲ್ಲಿಸಲಾಗಿರುವ ಮರುಪರಿಶೀಲನಾ ಅರ್ಜಿಗೆ ಸಂಬಂಧಿಸಿದಂತೆ ಅಲಾಹಾಬಾದ್ ಹೈಕೋರ್ಟ್ ಮೇ 19ರಂದು ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎನ್’ಡಿಎಂಎ) ಪ್ರತಿಕ್ರಿಯೆ ಕೇಳಿದೆ.

Join Our Whatsapp Group

ಕೇಂದ್ರ ಸರ್ಕಾರ ಮತ್ತು ಎನ್’ಡಿಎಂಎಗೆ ನೋಟಿಸ್ ನೀಡಿದ ಮುಖ್ಯ ನ್ಯಾಯಮೂರ್ತಿ ಪ್ರೀತಿಂಕರ್ ದಿವಾಕರ್ ಮತ್ತು ನ್ಯಾಯಮೂರ್ತಿ ಸೌಮಿತ್ರ ದಯಾಳ್ ಸಿಂಗ್ ಅವರಿದ್ದ ಪೀಠ ಪ್ರಕರಣದ ವಿಚಾರಣೆಯನ್ನು ಜುಲೈ ಕೊನೆಯ ವಾರಕ್ಕೆ ನಿಗದಿಪಡಿಸಿತು.

ಅರ್ಜಿದಾರರು ವಿಳಂಬವಾಗಿ ಅರ್ಜಿ ಸಲ್ಲಿಸಿರುವುದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಲು ಕೂಡ ಕೇಂದ್ರ ಸರ್ಕಾರ ಮತ್ತು  ಎನ್’ಡಿಎಂಎಗೆ ನ್ಯಾಯಾಲಯ ಸ್ವಾತಂತ್ರ್ಯ ನೀಡಿದೆ.

ಅಲಾಹಾಬಾದ್ ಹೈಕೋರ್ಟ್ 2020ರಲ್ಲಿ ಅರ್ಜಿಯನ್ನು ವಜಾಗೊಳಿಸಿತ್ತು. ನಂತರ ಅವರು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿ ಪರಿಗಣಿಸಲು ಮಾರ್ಚ್ 2022 ರಲ್ಲ ನಿರಾಕರಿಸಿದ್ದ ಸುಪ್ರೀಂ ಕೋರ್ಟ್ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಲು ಅರ್ಜಿದಾರರಿಗೆ ಸೂಚಿಸಿತ್ತು. ಹೀಗಾಗಿ ಸುಪ್ರೀಂ ಕೋರ್ಟ್’ಗೆ ಸಲ್ಲಿಸಿದ್ದ ಮೇಲ್ಮನವಿ ಹಿಂಪಡೆದಿದ್ದ ಅರ್ಜಿದಾರರು ಈಗಿನ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು.

ಯಾವುದೇ ಶಾಸನ ಅಂಗೀಕರಿಸದೆ ಪಿಎಂ ಕೇರ್ಸ್ ನಿಧಿ ಅಂಗೀಕರಿಸಲಾಗಿದ್ದು ಮಾಹಿತಿ ಹಕ್ಕು ಕಾಯಿದೆ (ಆರ್’ಟಿಐ) ವ್ಯಾಪ್ತಿಗೂ ಅದು ಒಳಪಡದಂತೆ ನೀಡಿಕೊಳ್ಳಲಾಗಿದೆ ಎಂಬುದು ಅರ್ಜಿದಾರರ ವಾದವಾಗಿದೆ. ವಿಪತ್ತು ನಿರ್ವಹಣಾ ಕಾಯಿದೆಯನ್ನೂ ಪಿಎಂ ಕೇರ್ಸ್ ನಿಧಿ ದುರ್ಬಲಗೊಳಿಸುತ್ತದೆ ಎಂದು ವಾದಿಸಲಾಗಿದೆ.

ಬಹುತೇಕ ನಿಯಮಿತವಾಗಿ ಸರ್ಕಾರದ ವಿವಿಧ ಸಚಿವಾಲಯಗಳು, ಏಜೆನ್ಸಿಗಳು ಮತ್ತು ಇಲಾಖೆಗಳ ಕೊಡುಗೆಗಳು ತೆರಿಗೆ ಇಲ್ಲದೆ ನಿಧಿಗೆ ಹರಿದು ಬರುತ್ತವೆ. ಇದರಿಂದ ವಿಪತ್ತು ನಿರ್ವಹಣಾ ಕಾಯಿದೆ ದುರ್ಬಲಗೊಳ್ಳುತ್ತದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಕೋವಿಡ್ ಬಿಕ್ಕಟ್ಟು ಎದುರಿಸಲು ಆರ್’ಟಿಐ ಕಾಯಿದೆಯಡಿ ಶಾಸನಬದ್ಧ ನಿಧಿಯಾಗಿರುವ ಎನ್’ಡಿಆರ್’ಎಫ್’ಗೆ ಉತ್ತೇಜನ ನೀಡುವ ಬದಲು ಪ್ರಧಾನಿಗಳೇ ದೇಣಿಗೆ ಪಡೆದು ಶಾಸನಬದ್ಧವಲ್ಲದ ‘ಪಿಎಂ-ಕೇರ್ಸ್ ಫಂಡ್’ಗೆ ಉತೇಜನ ನೀಡುತ್ತಿರುವುದು ಅಚ್ಚರಿದಾಯಕವಾಗಿದ್ದು ಇದನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ಅರ್ಜಿದಾರರು ಹೇಳಿದ್ದಾರೆ.