ಮಂಡ್ಯ: ಹಣಕಾಸು ವಿಚಾರಕ್ಕೆ ಮೇಸ್ತ್ರಿಯನ್ನು ಕತ್ತು ಕುಯ್ದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಭಾರತೀನಗರದಲ್ಲಿ ನಡೆದಿದೆ.
ಮದ್ದೂರು ತಾಲೂಕಿನ ಯಲಾದಹಳ್ಳಿಯ ಮಂಟೇಸ್ವಾಮಿ ಕೊಲೆಯಾದ ಮೇಸ್ತ್ರಿ.
ಸಹ ಕೆಲಸಗಾರ ಕಬ್ಬನಹಳ್ಳಿಯ ರವಿ ಎಂಬುವವರು ಕೃತ್ಯ ಎಸಗಿದ ಆರೋಪಿ.
ಬಾರ್ ಬೆಂಡಿಂಗ್ ಕೆಲಸ ಮಾಡ್ತಿದ್ದ ಇಬ್ಬರ ನಡುವೆ ಈ ಹಿಂದೆ ಹಣಕಾಸಿನ ವಿಚಾರಕ್ಕೆ ಗಲಾಟೆ ನಡೆದಿತ್ತು. ಮನೆಯಲ್ಲಿದ್ದ ಮಂಟೇಸ್ವಾಮಿಯನ್ನು ರವಿ ನೆನ್ನೆ ರಾತ್ರಿ ಮಾತುಕತೆಗೆಂದು ಕರೆದೊಯ್ದಿದ್ದ. ಮೇಸ್ತ್ರಿ ಮಂಟೇಸ್ವಾಮಿಯ ಹತ್ಯೆಯ ಬಳಿಕ ಆರೋಪಿ ರವಿ ಸ್ಥಳದಿಂದ ನಾಪತ್ತೆಯಾಗಿದ್ದಾರೆ.
ಇಂದು ಮಂಡ್ಯ ರಸ್ತೆಯ ಸಾಮಿಲ್ ಬಳಿ ಮಂಟೇಸ್ವಾಮಿಯ ಶವ ಪತ್ತೆಯಾಗಿದ್ದು, ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಕೆ.ಎಂ.ದೊಡ್ಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.