ಮನೆ ಯೋಗಾಸನ ಋಚೀಕಾಸನ

ಋಚೀಕಾಸನ

0

‘ಋಚೀಕ ’ ಎಂಬುದು ಒಬ್ಬ ಋಷಿಯ ಹೆಸರು.ಈತನು ವಿಷ್ಣುವಿನ ಆರನೇ ಅವತಾರವಾದ ಪರಶುರಾಮನ ತಾತನೆಂದು ಹೇಳಲಾಗಿದೆ.

Join Our Whatsapp Group

 ಅಭ್ಯಾಸ ಕ್ರಮ

1. ಮೊದಲು “ದುರ್ವಾಸಾಸನವನ್ನು ಮಾಡಿ ಮುಗಿಸಿದಮೇಲೆ, ಮುಂಡವನ್ನು ಮುಂಭಾಗಸಿ,ಬಲಗಾಲಿನ ಎಡ ಬಲ ಪಕ್ಕಗಳಲ್ಲಿ ಅಂಗೈಗಳನ್ನು ನೆಲದ ಮೇಲೆ ಊರಿಡಬೇಕು.

2. ಆ ಬಳಿಕ, ತಲೆಯನ್ನು ಬಲಮಂಡಿಯ ಮೇಲಿರಿಸಿ, ಕತ್ತಿನ ಮೇಲಿಟ್ಟ ಎಡಗಾಲು ಜಾರದಂತೆ ಎಚ್ಚರದಿಂದಿದ್ದು,ಮೆಲ್ಲ ಮೆಲ್ಲಗೆ ಕತ್ತನ್ನು ಹಿಗ್ಗಿಸುತ್ತ ಉತ್ತಾನಾಸದಲ್ಲಿರುವಂತೆ ಗದ್ದವನ್ನು ಬಲಮಂಡಿಗೆ ಮುಟ್ಟಿಸಬೇಕು.

3. ಈ ಭಂಗಿಯಲ್ಲಿ,ಸಾಮಾನ್ಯ ಉಸಿರಾಟ ನಡೆಸುತ್ತ ಸುಮಾರು ಹದಿನೈದು ಸೆಕೆಂಡುಗಳ ಕಾಲ ನೆಲೆಸಬೇಕು.

4. ಆ ಬಳಿಕ, ಬಲಮಂಡಿಯನ್ನು ಬಗ್ಗಿಸಿ ನೆಲದಮೇಲೆ ಕುಳಿತು, ಕತ್ತಿನ ಹಿಂಬದಿಯ ಮೇಲೆ ಒರಗಿಸಿಟ್ಟಿದ್ದ ಎಡಗಾಲನ್ನು ತೆಗೆದು ವಿಶ್ರಮಿಸಿಕೊಳ್ಳಬೇಕು.

5. ಇದಾದಮೇಲೆ, ಬಲಗಾಲನ್ನು ಹಿಂಬದಿಗೆ ಸೇರಿಸಿ,ಈ ಆಸನ ಚಕ್ರವನ್ನು ಪುನರಾ ವರ್ತಿಸಬೇಕು.ಅಭ್ಯಾಸ ಕ್ರಮದಿಂದ ವಿವರಣೆಯಲ್ಲಿ ‘ಬಲ’ ಮತ್ತು ‘ಎಡ’  ಪಾದಗಳೆಡೆ ಎರಡೆಯಲ್ಲಿ ಕ್ರಮವಾಗಿ ‘ಎಡ’ ಮತ್ತು ‘ಬಲ’ ಪಾದಗಳನ್ನು ಜೋಡಿಸಿ, ಈ ಭಂಗಿಗಳ ಅಭ್ಯಾಸವನ್ನು ವಿವರಣೆಗೆ ತಕ್ಕಂತೆ ನಡೆಸಬೇಕು.

 ಏಕ ಪಾದ ಶ್ರೀ ರ್ಷಾಸನಚಕ್ರದಲ್ಲಿಯ ಆಸನ ಭಂಗಿಗಳಿಂದಾಗುವ ಪರಿಣಾಮಗಳು:

     ಈ ಆಸನಚಕ್ರದಲ್ಲಿಯ ಭಂಗಿಗಳಿಂದಾಗುವ ಚಲನವ ನಗಳು ದೇಹದೊಳಗಿನ ಎಲ್ಲಾ ವಿಧವಾದ ಮಾಂಸಖಂಡಗಳಿಗೂ ನರಮಂಡಲಕ್ಕೂ ರಕ್ತ ಪರಿಚಲನೆ ಗೊಳಪಟ್ಟ ಎಲ್ಲಾ ಅಂಗಗಳಿಗೂ ಹುರುಪು, ಲವಲವಿಕೆ, ಕಾರ್ಯತತ್ವರತೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಒದಗಿಸಿ ಕೊಡುತ್ತವೆ. ಅಲ್ಲದೆ,ಬೆನ್ನೆಲುಬಿಗೆ ಅಧಿಕ ಪ್ರಮಾಣದ ರಕ್ತವು ಒದಗಿರುವುದರಿಂದ ಅದರಲ್ಲಿ ಸೂಕ್ಷ್ಮರೂಪದಿಂದಡಗಿರುವ ಸ್ವಾದಿಷ್ಠಾ ಮೊದಲಾದ ಷಟ್ಚಕ್ರಗಳಲ್ಲಿಯ ಇವು,ದೇಹದ ಯಂತ್ರವು ಸುಗಮವಾಗಿ ನಡೆಯಲು ಅತ್ಯಾವಶ್ಯಕವಾದ ಆರು ಚಕ್ರಗಳು ನರಮಂಡಲದ ಶಕ್ತಿಯು ವೃದ್ಧಿಯಾಗಿ.ಶರೀರಕ್ಕೆ ಹೆಚ್ಚು ಬಲವನ್ನು ಅನು ಗೊಳಿಸುತ್ತದೆ.ಇದರ ಜೊತೆಗೆ ಈ ಭಂಗಿಗಳು ಎದೆಯನ್ನು ವಿಶಾಲಗೊಳಿಸಿ,ಉಸಿರಾಟದ ಪೂರ್ಣ ಪ್ರಯೋಜನವನ್ನು ಆ ಮೂಲಕ ಗಳಿಸಿ,ದೇಹವನ್ನು ಭದ್ರಗೊಳಿಸುತ್ತವೆ. ನರಮಂಡಲದಲ್ಲಿಯ ಆ ಶಕ್ತಿ ಯಿದುಂಟಾಗುವ ದೇಹ ಕಂಪನವನ ನಿಲ್ಲಿಸಿ, ಅದರಿಂದುಂ ಟಾಗಬಹುದಾದ ರೋಗರು ಜಿನಾದಿಗಳನ್ನು ತಡೆಗಟ್ಟುತ್ತವೆ.ಈ ಭಂಗಿಗಳು ದೇಹದ ಎಲ್ಲಾ ಭಾಗಗಳಿಗೂ ಸಾಕಷ್ಟು ಶುದ್ದ ರಕ್ತವನ್ನು ಒದಗಿಸುವುದರಿಂದಲೂ, ಮಲಿನರಕ್ತವನ್ನು ಶುದ್ಧಗೊಳಿಸಲೊಸುಗ ಅದನ್ನು ಹೃದಯ, ಶ್ವಾಸಕೋಶಗಳಿಗೆ ತರುವಂತೆ ಮಾಡುವುದರಿಂದಲೂ, ವಿಷ ಜೀವಾಣುಗಳ  ಉತ್ಪತ್ತಿಗೆ ಅವಕಾಶವಿರದಂತೆ ಮಾಡುತ್ತವೆ.ಈ ಆಸನಗಳ ಅಭ್ಯಾಸದಿಂದ ರಕ್ತದಲ್ಲಿ ‘ಹಿಮೋಗ್ಲೋಬಿನ್ ‘ಎಂಬ ಕೆಂಪು ರಕ್ತ ಕಣಗಳಲ್ಲಿಯ ವರ್ಣ ದ್ರವ್ಯದ ಪ್ರಮಾಣವು ಹೆಚ್ಚುತ್ತದೆ.ಆ ಮೂಲಕ ದೇಹ ಮತ್ತು ಮನಸ್ಸುಗಳ ಚಟುವಟಿಕೆ ಹೆಚ್ಚಿ ಕಾರ್ಯತತ್ಪರತೆಗೆ  ಬೇಕಾದ ಶಕ್ತಿಯನ್ನು ಅಧಿಕಗೊಳಿಸುತ್ತದೆ.