ರಾಷ್ಟ್ರೀಯ ಮಿಲಿಟರಿ ಸ್ಕೂಲ್ ಬೆಂಗಳೂರು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 5 ಅಸಿಸ್ಟೆಂಟ್ ಮಾಸ್ಟರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಜೂನ್ 10, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆಫ್’ಲೈನ್ ಮೂಲಕ ಅಪ್ಲೈ ಮಾಡಬೇಕು.
ಹುದ್ದೆಯ ಮಾಹಿತಿ:
ಅಸಿಸ್ಟೆಂಟ್ ಮಾಸ್ಟರ್ (ಮ್ಯಾಥಮೆಟಿಕ್ಸ್)- 2
ಅಸಿಸ್ಟೆಂಟ್ ಮಾಸ್ಟರ್ (ಕೆಮಿಸ್ಟ್ರಿ)-1
ಅಸಿಸ್ಟೆಂಟ್ ಮಾಸ್ಟರ್ (ಕಂಪ್ಯೂಟರ್ ಸೈನ್ಸ್)- 1
ಅಸಿಸ್ಟೆಂಟ್ ಮಾಸ್ಟರ್ (ಹಿಂದಿ)- 1
ವಿದ್ಯಾರ್ಹತೆ:
ಅಸಿಸ್ಟೆಂಟ್ ಮಾಸ್ಟರ್ (ಮ್ಯಾಥಮೆಟಿಕ್ಸ್)- ಫಿಜಿಕ್ಸ್, ಕೆಮಿಸ್ಟ್ರಿ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಸ್ಟಾಟಿಸ್ಟಿಕ್ಸ್’ನಲ್ಲಿ ಪದವಿ
ಅಸಿಸ್ಟೆಂಟ್ ಮಾಸ್ಟರ್ (ಕೆಮಿಸ್ಟ್ರಿ)- ಕೆಮಿಸ್ಟ್ರಿಯಲ್ಲಿ ಪದವಿ
ಅಸಿಸ್ಟೆಂಟ್ ಮಾಸ್ಟರ್ (ಕಂಪ್ಯೂಟರ್ ಸೈನ್ಸ್)- ಕಂಪ್ಯೂಟರ್ ಸೈನ್ಸ್ನಲ್ಲಿ ಪದವಿ, ಸ್ನಾತಕೋತ್ತರ ಪದವಿ
ಅಸಿಸ್ಟೆಂಟ್ ಮಾಸ್ಟರ್ (ಹಿಂದಿ)- ಹಿಂದಿಯಲ್ಲಿ ಪದವಿ
ವಯೋಮಿತಿ:
ರಾಷ್ಟ್ರೀಯ ಮಿಲಿಟರಿ ಸ್ಕೂಲ್ ಬೆಂಗಳೂರು ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು 30 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳು- 3 ವರ್ಷ
SC/ST ಅಭ್ಯರ್ಥಿಗಳು- 5 ವರ್ಷ
PH ಅಭ್ಯರ್ಥಿಗಳು- 10 ವರ್ಷ
ಆಯ್ಕೆ ಪ್ರಕ್ರಿಯೆ:
ಟೀಚಿಂಗ್ ಪ್ರಾಕ್ಟೀಸ್
ದಾಖಲಾತಿ ಪರಿಶೀಲನೆ
ಸಂದರ್ಶನ
ಅರ್ಜಿ ಶುಲ್ಕ:
SC/ST ಅಭ್ಯರ್ಥಿಗಳು- 50 ರೂ.
ಸಾಮಾನ್ಯ/ ಒಬಿಸಿ/ESM ಅಭ್ಯರ್ಥಿಗಳು- 100 ರೂ.
ಪಾವತಿಸುವ ಬಗೆ: ಡಿಮ್ಯಾಂಡ್ ಡ್ರಾಫ್ಟ್
ವೇತನ:
ಮಾಸಿಕ ₹ 44,900-1,42,400
ಉದ್ಯೋಗದ ಸ್ಥಳ:
ಬೆಂಗಳೂರು
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ಪ್ರಾಂಶುಪಾಲರು
ರಾಷ್ಟ್ರೀಯ ಮಿಲಿಟರಿ ಶಾಲೆ
ರಿಚ್ಮಂಡ್ ಟೌನ್
ಹೊಸೂರು ರಸ್ತೆ
ಜಾನ್ಸನ್ ಮಾರುಕಟ್ಟೆ ಎದುರು
ಬೆಂಗಳೂರು (ಕೆಎ)-560025
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 29/04/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಜೂನ್ 10, 2023