ಮನೆ ರಾಜ್ಯ ಕಬ್ಬಿನ ಎಫ್ ಆರ್’ಪಿ ದರ ವಿರೋಧಿಸಿ ರೈತ ಸಂಘದಿಂದ ರಸ್ತೆ ಹೆದ್ದಾರಿ ತಡೆ ಚಳವಳಿ

ಕಬ್ಬಿನ ಎಫ್ ಆರ್’ಪಿ ದರ ವಿರೋಧಿಸಿ ರೈತ ಸಂಘದಿಂದ ರಸ್ತೆ ಹೆದ್ದಾರಿ ತಡೆ ಚಳವಳಿ

0

ಮೈಸೂರು(Mysuru): ಕಬ್ಬಿನ ಎಫ್ ಆರ್ ಪಿ ದರ ವಿರೋಧಿಸಿ  ಪುನರ್ ಪರಿಶೀಲನೆಗಾಗಿ,  ವಿದ್ಯುತ್ ಕಾಯ್ದೆ ಖಾಸಗೀಕರಣ ಮಾಡಿರುವುದನ್ನು  ವಿರೋಧಿಸಿ ನಗರದ ಕೊಲಂಬಿಯಾ ಆಸ್ಪತ್ರೆ  ವೃತ್ತದಲ್ಲಿ ರಸ್ತೆ ಹೆದ್ದಾರಿ  ತಡೆ ಚಳವಳಿ ನಡೆಸಲಾಯಿತು.

ಇಂದು ರಾಜ್ಯ ಕಬ್ಬು ಬೆಳೆಗಾರರ  ಸಂಘದ ವತಿಯಿಂದ ಚಳವಳಿ ಹಮ್ಮಿಕೊಂಡಿದ್ದು, ಅಧಿಕಾರಿಗಳ ವಿರುದ್ಧ ರೈತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಚಳವಳಿ ಉದ್ದೇಶಿಸಿ ಮಾತನಾಡಿದ ರಾಜ್ಯ ಅಧ್ಯಕ್ಷ  ಕುರುಬೂರು ಶಾಂತಕುಮಾರ್ ಕಬ್ಬಿಗೆ ಬಳಸುವ ರಸಗೊಬ್ಬರ, ಪೊಟ್ಯಾಶ್   ಚೀಲಕ್ಕೆ ಹೆಚ್ಚುವರಿಯಾಗಿ 900 ರೂ   ಡಿಎಪಿ ಬೆಲೆ 350 ಏರಿಕೆಯಾಗಿದೆ. ಕಟಾವು ಕೂಲಿ 400 ರೂಪಾಯಿ, ಬೀಜದ ಬೆಲೆ ಎಕರೆಗೆ 500 ಹೆಚ್ಚುವರಿಯಾಗಿ ಎಲ್ಲಾ  ಏರಿಕೆಯಾಗಿದೆ. ಆದರೆ ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರ  ಕೇವಲ 150 ರೂ ಏರಿಕೆ ಮಾಡಿ  ಟನ್ಗೆ 3050 ನಿಗದಿ ಮಾಡಿದೆ. ಇದು ಕಬ್ಬು ಬೆಳೆಗಾರರಿಗೆ ಮಾಡಿದ ಅನ್ಯಾಯ  ಮಾಡಿದೆ ಎಂದು ಆರೋಪಿಸಿದರು.

ಕಬ್ಬಿನಿಂದ ಬರುವ ಸಕ್ಕರೆ ಇಳುವರಿ  10 ರಿಂದ  10.25 ಕೆ ಏರಿಕೆ ಮಾಡಿ  ಕಬ್ಬು ಬೆಳೆ ರೈತರಿಗೆ  ದ್ರೋಹ ಬಗೆದಿದೆ, ಇದರಿಂದ ರೈತರಿಗೆ ಟನ್ ಗೆ 75 ರೂ ಕಡಿತವಾಗುತ್ತದೆ,  ಕೇಂದ್ರ ಸರ್ಕಾರ ಸಕ್ಕರೆ ಉದ್ದಿಮೆದಾರರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ  ಎಂದು ಆಪಾದಿಸಿದರು.

ಕೇಂದ್ರ ಸರ್ಕಾರದ ವಿದ್ಯುತ್ ಖಾಸಗೀಕರಣ ದಿಂದ ಕೃಷಿ ಪಂಪ್ ಸೆಟ್ ಗಳಿಗೆ ಈ ಲಭ್ಯವಿರುವ ಉಚಿತ ವಿದ್ಯುತ್ ಸೌಲಭ್ಯ ಸಿಗುವುದಿಲ್ಲ. ಆದ್ದರಿಂದ  ಖಾಸಗೀಕರಣ ಕೈಬಿಡಬೇಕು. ಅತಿವೃಷ್ಟಿ ಮಳೆಹಾನಿ,  ಬೆಳೆನಷ್ಟ ಪರಿಹಾರ ಕೂಡಲೇ ರೈತರಿಗೆ ಕೊಡಬೇಕು ಹಾಗೂಯೂರಿಯಾ ಡಿಎಪಿ ಗೊಬ್ಬರ ಅಭಾವ ತಪ್ಪಿಸಿ  ಸಮರ್ಪಕ ಪೂರೈಕೆಗೆ  ಒತ್ತಾಯಿಸಿದರು.

ಮೊಸರು, ಮಜ್ಜಿಗೆ, ಹಪ್ಪಳ, ಕೃಷಿ ಉಪಕರಣಗಳು, ಹನಿ ನೀರಾವರಿ ಉಪಕರಣಗಳು, ರಸಗೊಬ್ಬರ, ಕೀಟನಾಶಕ, ಗಳ ಮೇಲೆ ವಿಧಿಸಿರುವ ಜಿಎಸ್ಟಿ ರದ್ದುಗೊಳಿಸಿ  ರೈತರಿಗೆ ಮಾರಕವಾಗುವ ಸನ್ನಿವೇಶಗಳನ್ನು ಗಮನಿಸುತ್ತಿರುವ ರಾಜ್ಯದಿಂದ ಆಯ್ಕೆಯಾಗಿರುವ 28 ಲೋಕಸಭಾ ಹಂದಿಗಳು ಮೌನವಾಗಿರುವುದು ರೈತ ದ್ರೋಹಿ ಕಾರ್ಯವಾಗಿದೆ ಎಂದರು

ಸರ್ಕಾರ ನಿರ್ಲಕ್ಷತನ ಖಂಡಿಸಿ ಇಂದು ರಾಜ್ಯದ ದಾವಣಗೆರೆ, ಗುಲ್ಬರ್ಗ, ಬೆಳಗಾವಿ, ಗದಗ್, ಬಾಗಲಕೋಟೆ , ಧಾರವಾಡ,  ಮೈಸೂರು, ಚಾಮರಾಜನಗರ  ನಂಜನಗೂಡು, ಟಿ ನರಸೀಪುರ, ಬನ್ನೂರು, ಕುರುಬೂರು,  ಎಚ್ ಡಿ ಕೋಟೆ ಹಂಪಾಪುರಗಳಲ್ಲಿ   ರಸ್ತೆ ತಡೆ ಚಳುವಳಿ ನಡೆಸಲಾಗಿದೆ. ಇಷ್ಟಾದರೂ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ  ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ದೆಹಲಿ  ಮಾದರಿ ಹೋರಾಟ ನಡೆಸಬೇಕಾಗುತ್ತದೆ  ಎಂದು ಆಕ್ರೋಶ ವ್ಯಕ್ತಪಡಿಸಿದರು .

ಕೃಷಿ ಉತ್ಪನ್ನಗಳಿಗೆ ಕಾತರಿ  ಕನಿಷ್ಠ ಬೆಂಬಲ ಬೆಲೆ  ಕಾನೂನು ಶೀಘ್ರಜಾರಿಗೆ ತರಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ರಸ್ತೆ ತಡೆ ಪ್ರತಿಭಟನೆಯಲ್ಲಿ ತಾಲೂಕ ಅಧ್ಯಕ್ಷ ಲಕ್ಷ್ಮಿಪುರ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ  ಬರಡನಪುರ ನಾಗರಾಜ್, ವರ್ಕೋಡ್ ನಾಗೇಶ್, ಕಾಟೂರು ಮಹದೇವಸ್ವಾಮಿ, ಮಹದೇವ್, ಬಸವರಾಜು, ಮಹದೇವಸ್ವಾಮಿ, ಶ್ರೀರಾಮ್ ,ರಾಜು, ಭಾಗ್ಯಮ್ಮ, ಸಾಕಮ್ಮ ಶಿವಣ್ಣ  ಮಾಲಿಂಗನಾಯಕ್,  ಬಸವರಾಜಪ್ಪ, ಮಂಜು ಲಿಂಗಣ್ಣ  ನೂರಾರು ಜನರು ಭಾಗವಹಿಸಿದ್ದರು.    

ಹಿಂದಿನ ಲೇಖನಬೈಕ್, ಆಟೋಗೆ ಅಪ್ಪಳಿಸಿದ ಕಾರು: ಆರು ಮಂದಿ ದುರ್ಮರಣ
ಮುಂದಿನ ಲೇಖನಮೂರು ಪಕ್ಷಗಳಲ್ಲೂ ಭ್ರಷ್ಟಚಾರಿಗಳಿದ್ದಾರೆ: ನ್ಯಾ. ಸಂತೋಷ್ ಹೆಗ್ಡೆ