ಮನೆ ಸುದ್ದಿ ಜಾಲ ಮೈಸೂರಿನಲ್ಲಿ ಹೋಟೆಲ್ ಕೆಲಸಕ್ಕೆ `ರೋಬೋ ಸುಂದರಿ’

ಮೈಸೂರಿನಲ್ಲಿ ಹೋಟೆಲ್ ಕೆಲಸಕ್ಕೆ `ರೋಬೋ ಸುಂದರಿ’

0

ಮೈಸೂರು:  ಮೈಸೂರಿನ ಸಂಸ್ಕೃತಿ ಅನಾವರಣ ಮಾಡುವ ಉಡುಗೆ-ತೊಡುಗೆ ತೊಟ್ಟ ರೋಬೋಟ್ ಗ್ರಾಹಕರಿಗೆ ರುಚಿ ರುಚಿಯಾದ ತಿನಿಸುಗಳನ್ನು ಸರ್ವ್ ಮಾಡುತ್ತಿದೆ.

ಇದು ಬ್ಯಾಟರಿ ಚಾಲಿತ ರೋಬೋಟ್ ಆಗಿದ್ದು, 4 ಗಂಟೆಗಳ ಕಾಲ ಒಮ್ಮೆ ಚಾರ್ಜ್ ಮಾಡಿದರೆ 8 ಗಂಟೆ ತನಕ ಕಾರ್ಯನಿರ್ವಹಿಸುತ್ತದೆ. ಜೊತೆಗೆ ರೋಬೋ 10 ಕೆ.ಜಿ ಯಷ್ಟು ಭಾರವನ್ನು ಹೊತ್ತು, ನಿಗದಿಸಿದ ಸ್ಥಳಕ್ಕೆ ತಲುಪಿಸಲಿದೆ

ಮೈಸೂರಿನ ಸಿದ್ಧಾರ್ಥ ಹೋಟೆಲ್‌ನ ಮಾಲೀಕರು, ಗ್ರಾಹಕರನ್ನು ಸೆಳೆಯುವ ಸಲುವಾಗಿ ರೋಬೋ ತರಿಸಿದ್ದು, ಅದಕ್ಕೆ ಕರ್ನಾಟಕದ ಮಹಿಳೆಯರು ಧರಿಸುವಂತಹ ಸೀರೆ ಧರಿಸಿ ಸೇವೆ ಒದಗಿಸುತ್ತಿದ್ದಾರೆ.
ಜಯಚಾಮರಾಜೇಂದ್ರ ವೃತ್ತದ (ಹಾರ್ಡಿಂಜ್‌ ವೃತ್ತ) ಬಳಿ ಇರುವ ಸಿದ್ದಾರ್ಥ ಹೋಟೆಲ್‌ನಲ್ಲಿ ಈ ಹೊಸ ತಂತ್ರಜ್ಞಾನವನ್ನು ಮೊಟ್ಟ ಮೊದಲ ಬಾರಿಗೆ ಅಳವಡಿಸಿಕೊಳ್ಳಲಾಗಿದೆ. ಹೊಸದಿಲ್ಲಿ ಮೂಲದ ಕಾಂಪೋಂಟ್‌ ಸಿಸ್ಟಂ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆ ಅಭಿವೃದ್ಧಿಪಡಿಸಿರುವ ರೋಬೋವನ್ನು ಹೋಟೆಲ್‌ನಲ್ಲಿ ಸೇವೆಗೆ ಸಜ್ಜುಗೊಳಿಸಿರುವ ಆಡಳಿತ ಮಂಡಳಿ ಅದಕ್ಕೆ ಸುಂದರಿ ಎನ್ನುವ ಹೆಸರನ್ನಿಟ್ಟಿದೆ.
ಜೊತೆಗೆ ಕೆಂಪು ರೇಶ್ಮೆ ಸೀರೆ, ಬಿಂದಿಗೆ, ಮುತ್ತಿನ ಹಾರವನ್ನು ಕೊರಳಿಗೆ ಹಾಕಿ ಗ್ರಾಹಕರ ಗಮನ ಸೆಳೆಯುವ ರೀತಿಯಲ್ಲಿ ರೋಬೋ ಅಲಂಕಾರ ಮಾಡಲಾಗಿದೆ.. ಇನ್ನು ಟೇಬಲ್‍ನಲ್ಲಿ ಗ್ರಾಹಕರು ಕುಳಿತಾಕ್ಷಣ ನೀರಿನ ಲೋಟಗಳೊಂದಿಗೆ ರೋಬೋ ಆಗಮಿಸುತ್ತದೆ. ಮೆನು ಬಗ್ಗೆ ಕೇಳಿದರೆ ಅಂದು ರೆಸ್ಟೋರೆಂಟ್‍ನ ವಿಶೇಷ ತಿಂಡಿ ಸೇರಿದಂತೆ ಲಭ್ಯವಿರುವ ಎಲ್ಲಾ ತಿಂಡಿ ತಿನಿಸಿನ ಹೆಸರು ಹೇಳುತ್ತದೆ.
ರೋಬೋ ವಿಶೇಷತೆ..
ಇನ್ನು ಇದು ಬ್ಯಾಟರಿ ಚಾಲಿತ ರೋಬೋಟ್ ಆಗಿದ್ದು, 4 ಗಂಟೆಗಳ ಕಾಲ ಒಮ್ಮೆ ಚಾರ್ಜ್ ಮಾಡಿದರೆ 8 ಗಂಟೆ ತನಕ ಕಾರ್ಯನಿರ್ವಹಿಸುತ್ತದೆ. ಜೊತೆಗೆ ರೋಬೋ 10 ಕೆ.ಜಿ ಯಷ್ಟು ಭಾರವನ್ನು ಹೊತ್ತು, ನಿಗದಿಸಿದ ಸ್ಥಳಕ್ಕೆ ತಲುಪಿಸಲಿದೆ. ಮಾನವನ ಆದೇಶದ ಮೇರೆಗೆ ಕೆಲಸ ಮಾಡುತ್ತದೆ. ಜೊತೆಗೆ ರೋಬೋ ಸಂಚಾರಕ್ಕಾಗಿ ಕಿಚನ್​ನಿಂದ ಪ್ರತಿ ಟೇಬಲ್​ಗಳ ಬಳಿಗೆ ಆಯಸ್ಕಾಂತದ ಪಟ್ಟಿಯನ್ನು (ಮ್ಯಾಗ್ನೆಟಿಕ್ ಸ್ಟ್ರೈಪ್) ಅಳವಡಿಸಲಾಗಿದ್ದು, ಕಮಾಂಡ್ ನೀಡಿದ ಸ್ಥಳಕ್ಕೆ ತೆರಳಿ ಸೇವೆಯನ್ನು ಒದಗಿಸುತ್ತದೆ.
ನಿರ್ದಿಷ್ಟ ಟೇಬಲ್‍ಗೆ ತಿಂಡಿ ತಿನಿಸನ್ನು ಸರ್ವ್ ಮಾಡುವುದರ ಜೊತೆಗೆ ಈ ರೋಬೋ ಮತ್ತಷ್ಟು ವಿಶೇಷತೆಗಳನ್ನು ಒಳಗೊಂಡಿದೆ. ಹೋಟೆಲ್‍ನಲ್ಲಿರುವ ಕೊಠಡಿಗಳ ಸಂಖ್ಯೆ, ರೆಸ್ಟೋರೆಂಟ್‍ನಲ್ಲಿ ಲಭ್ಯವಿರುವ ತಿಂಡಿ ಊಟದ ಮೆನು ಸೇರಿದಂತೆ ಇನ್ನಿತರ ಸೌಲಭ್ಯಗಳು.
ಸುತ್ತಮುತ್ತಲಿನಲ್ಲಿರುವ ಪ್ರೇಕ್ಷಣೀಯ ಸ್ಥಳಗಳು, ಇಲ್ಲಿಂದ ಎಷ್ಟು ದೂರವಾಗುತ್ತದೆ. ಮೈಸೂರಿನ ಸಂಕ್ಷಿಪ್ತ ಇತಿಹಾಸ, ಪ್ರವಾಸಿ ತಾಣಗಳು, ಬಸ್, ರೈಲು ನಿಲ್ದಾಣಕ್ಕಿರುವ ಅಂತರ ಹೀಗೆ ಎಲ್ಲಾ ರೀತಿಯ ಮಾಹಿತಿಯನ್ನೂ ಈ ರೋಬೋದಲ್ಲಿ ದಾಖಲಿಸಬಹುದು. ಅಷ್ಟೇ ಅಲ್ಲದೆ ಹೋಟೆಲ್ ಬಗ್ಗೆ, ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಕೇಳಿದರೂ ಸಂಪೂರ್ಣ ವಿವರ ನೀಡುತ್ತದೆ.