ಮನೆ ಜ್ಯೋತಿಷ್ಯ ರೋಹಿಣಿ

ರೋಹಿಣಿ

0

ಕ್ಷೇತ್ರ-10 ಡಿಗ್ರಿ ಇಂದ, 23° 40 ಕಲೆ. ಕಲಾ – ವೃಷಭ, ರಾಶಿಸ್ವಾಮಿ- ಶುಕ್ರ, ನಕ್ಷತ್ರಸ್ವಾಮಿ – ಚಂದ್ರ, ನಾಡಿ – ಅಂತ್ಯ, ಯೋನಿ – ಶರೀರ ಭಾಗ, ಮುಖ – ನಾಲಿಗೆ, ಬಾಯಿ, ಕಾಲು, ಕಂಠ, ಕುತ್ತಿಗೆ, ಬೆನ್ನೆಲುಬು, ಟಾನ್ಸಿಲ್ ಮತ್ತು ಮೆದುಳಿನ ಕೆಳಭಾಗ.     

ಸಂರಚನೆ :- ಈ ನಕ್ಷತ್ರದಲ್ಲಿ ಹುಟ್ಟಿದವರು ಸೌಮ್ಯ, ಹಾಸ್ಯ ಸ್ವಭಾವದವರಾಗುವವರು, ಒಳ್ಳೆಯ ಶರೀರ, ಪ್ರಕೃತಿ, ಸೌಂದರ್ಯ, ಪ್ರೇಮ, ಸಂಗೀತ, ನೃತ್ಯ, ಕಲೆಗಳಲ್ಲಿ ಅಭಿರುಚಿಸಿದವರು. ನಾಟ್ಯ, ಪ್ರವಾಸ, ಕಥನ ಶಕ್ತಿ, ತಾಯಿಯ ಪ್ರೀತಿ, ಹೊಂದುವವರು. ಸರಳ ಶುದ್ಧ ಹೃದಯದವರಾಗಿದ್ದು, ಪರೋಪಕಾರ, ಸತ್ಯ, ಸಹಾನುಭೂತಿಯನ್ನು ಹೊಂದುವರು. ಮಧುರ ಭಾಷೆಗಳಾಗಿ ಸ್ಥಿರ ಬುದ್ಧಿಯನ್ನ  ಪಡೆದಿರುತ್ತಾರೆ.

ಉದ್ಯೋಗ ವಿಶೇಷತೆಗಳು :- ಸಾರ್ವಜನಿಕ ಸೇವೆಯನ್ನು ಮಾಡುವ, ಹೋಟೆಲ್, ವಿಶ್ರಾಂತಿ ಗೃಹ, ವಿದ್ಯಾರ್ಥಿ ನಿಲಯ, ಬಾರ್ ಗಳ ಮಾಲೀಕರಾಗಬಹುದು, ಭೂಮಿ, ಹಣ್ಣು, ಪೆಟ್ರೋಲ್, ಎಣ್ಣೆ, ಹಾಲು ಹಾಲಿನ ಉತ್ಪನ್ನಗಳು, ಆಯಿಲ್, ಕ್ರೀಮ್, ಪ್ಲಾಸ್ಟಿಕ್ ಸುಗಂಧದ ದ್ರವ್ಯಗಳು, ಸಾಬೂನು, ಶ್ರೀಗಂಧ, ಹಡಗು, ವ್ಯವಹಾರ, ನ್ಯಾಯಾಧೀಶನಾಗುವುದು, ರಾಜನೀತಿಜ್ಞತೆ, ಚರ್ಮ ಉದ್ಯಮದಾರ ವ್ಯಾಪಾರಿ, ಸಿದ್ಧ ಪಡಿಸಿದ ವಸ್ತ್ರ ಭಂಡಾರ, ಸಕ್ಕರೆ, ಕಬ್ಬು, ವ್ಯಾಪಾರ ಮಾಡಬಹುದಾಗಿದೆ. ಷೇರು ವ್ಯವಹಾರ, ಭೂಗೋಳ ಶಾಸ್ತ್ರದಲ್ಲಿ ಜ್ಞಾನ ಗಳಿಸುವುದು ಸಹ ಸಾಧ್ಯವಿದೆ.         

ರೋಹಿಣಿ ನಕ್ಷತ್ರದವರು ರಾಜ, ಶ್ರೀಮಂತ, ವ್ಯಾಪಾರಿ, ವಾಹನದ ಮಾಲೀಕ, ಪಶು ಸಂರಕ್ಷಕ, ಅಧಿಕಾರಿ ಕೃಷಿಕ ಯತಿ, ಪರ್ವತವಾಸಿ ಸಹ ಆಗಬಹುದಾಗಿದೆ. ಸ್ವಚ್ಛತಾ ಪ್ರಿಯ, ಕಲಾ ಪ್ರೇಮಿ, ಅಸತ್ಯವಾದಿ, ಸಾಮಾಜಿಕ ಸೇವೆಯಲ್ಲಿ ಸಫಲ, ಪ್ರಸನ್ನ, ಭೂತ ಪ್ರೇತಗಳಲ್ಲಿ ವಿಶ್ವಾಸವುಳ್ಳ, ಪ್ರಾದೇಶಿಕ ಸತ್ಯಭಾಷಿಯು ಆಗಬಹುದು.