ಮನೆ ಆರೋಗ್ಯ ಮಗುವಿನ ಬೆಳವಣಿಗೆಯಲ್ಲಿ ಪೌಷ್ಟಿಕಾಂಶಗಳ ಪಾತ್ರ

ಮಗುವಿನ ಬೆಳವಣಿಗೆಯಲ್ಲಿ ಪೌಷ್ಟಿಕಾಂಶಗಳ ಪಾತ್ರ

0

ಮಗುವಿನ ಆರೋಗ್ಯಕರ ಬೆಳವಣಿಗೆ ಪೌಷ್ಟಿಕಾಂಶಗಳು ಬಹಳ ಅಗತ್ಯ. ಪೌಷ್ಟಿಕಾಂಶಗಳ ಕೊರತೆಯಿಂದ ಮಗುವಿಗೆ ಹಲವಾರು ತರಹದ ಆರೋಗ್ಯದ ಸಮಸ್ಯೆಗಳು ಉದ್ಭವಿಸುತ್ತದೆ.

ಪೌಷ್ಟಿಕಾಂಶಗಳು ಮಗುವಿನ ಬೆಳವಣಿಗೆ ಸಹಕಾರಿಯಾಗುವುದೇ ಅಲ್ಲದೆ ಒಳ್ಳೆಯ ಶಕ್ತಿಯನ್ನು, ರೋಗಗಳಿಂದ  ರಕ್ಷಣೆಯನ್ನು ಒದಗಿಸುತ್ತದೆ.

ಪೌಷ್ಟಿಕ ಆಹಾರದಲ್ಲಿ ಪಿಷ್ಟ ಪದಾರ್ಥಗಳು, ಪ್ರೋಟಿನ್ ಗಳು, ಕೊಬ್ಬು, ವಿಟಮಿನ್, ಖನಿಜಗಳು, ಲವಣಗಳು, ಪುಷ್ಕಳವಾಗಿರುತ್ತದೆ. ಇವುಗಳನ್ನು ಸಮತೋಲನವಾಗಿ ಕೊಡಬೇಕು. ಪಿಷ್ಟ ಪದಾರ್ಥಗಳು ಮತ್ತು ಕೊಬ್ಬಿನಿಂದ ಶಕ್ತಿ ಲಭ್ಯವಾದರೆ ಪ್ರೋಟೀನ್ ಗಳಿಂದ ಸ್ನಾಯುಗಳು ಬಲಿಷ್ಠವಾಗುತ್ತದೆ. ವಿಟಮಿನ್ ಗಳು ಮತ್ತು ಖನಿಜ ಲವಣಗಳಿಂದ ಶರೀರದ ಕಾರ್ಯಗಳು ಸಮರ್ಥವಾಗಿ ಕಾರ್ಯನಿರ್ವಹಿಸುತ್ತದೆ.

ಒಂದು ಗ್ರಾಂ ಪಿಷ್ಟ ಪದ್ದಾರ್ಥದಲ್ಲಾಗಲಿ, ಪ್ರೋಟೀನ್ ಗಳಲ್ಲಾಗಲಿ, ನಾಲ್ಕು ಕ್ಯಾಲೋರಿಗಳು ಇರುತ್ತದೆ. ಒಂದು ಗ್ರಾಂ ಕೊಬ್ಬಿನಲ್ಲಿ 9 ಕ್ಯಾಲೋರಿಗಳಿರುತ್ತದೆ. ತಾಯಿ ಹಾಲು ಕುಡಿಯುವ ಮಕ್ಕಳಿಗೆ ಒಟ್ಟು ಶಕ್ತಿ ತಾಯಿ ಹಾಲಿನಲ್ಲಿರುವ ಕೊಬ್ಬಿನಿಂದಲೇ ಲಭ್ಯವಾಗುತ್ತದೆ. ತಾಯಿ ಹಾಲಿನಲ್ಲಿರುವ ಪ್ರೋಟೀನ್ ಗಳಲ್ಲಿ ಅಮೈನೋ ಆಸಿಡ್ ಗಳಿರುತ್ತದೆ. ಈ ಅಮೈನೋ ಆಸಿಡ್ ಶರೀರದ ವಿವಿಧ ಕಾರ್ಯಗಳನ್ನು ನಿರ್ವಹಿಸಲು ಸಹಕರಿಸುವುದೇ ಅಲ್ಲದೆ ಮಗುವಿನ ಬೆಳವಣಿಗೆ ಉಪಯುಕ್ತವಾಗಿದೆ.

ತಾಯಿಯ ಹಾಲು ಕುಡಿಯುತ್ತಿರುವ ಮಗುವಿಗೆ ಆರು ತಿಂಗಳವರೆಗೆ ಆಹಾರ ಕೊರತೆಯಿಂದ ಆಗುವ ಯಾವ ರೋಗಗಳು ಇರುವುದಿಲ್ಲ. ಅನಂತರವೇ ಮಗುಗೆ ಆಹಾರದ ಅಗತ್ಯ ಅಧಿಕವಾಗುತ್ತದೆ. ಅಗತ್ಯಕ್ಕೆ ಅನುಗುಣವಾಗಿ ಪೌಷ್ಟಿಕಾಂಶಗಳಿಂದ ಕೂಡಿದ ಸಮತೋಲನ ಆಹಾರವನ್ನು ಕೊಡದಿದ್ದರೆ ಆ ಮಗುವನ್ನು ಶಕ್ತಿಹೀನವಾಗುತ್ತದೆ. ಅಲ್ಲದೆ ಆಹಾರದ ಕೊರತೆಯಿಂದ ಉದ್ಭವಿಸುವ ರೋಗಗಳಿಗೆ ತುತ್ತಾಗುತ್ತದೆ.

ಪೌಷ್ಟಿಕಾಂಶದ ಕೊರತೆಯಿಂದ ಮಕ್ಕಳಲ್ಲಿ ಕಂಡುಬರುವ ಮುಖ್ಯ ರೋಗಗಳು

1. ಮೆರಾಸ್ಮಸ್ 2.ಕ್ವಾಷಿಯಾರ್ಕರ್

1.ಮೆರಸ್ಮಸ್ : ನಿಂದ ಮಗು ಕ್ಷೀಣಿಸುತ್ತದೆ ತೂಕ ಬಹಳ ಕಡಿಮೆ ಆಗುತ್ತದೆ. ಅಂದರೆ ಇರಬೇಕಾದ ತೂಕಕ್ಕಿಂತ ಶೇಕಡ 60ರಷ್ಟು ಕಡಿಮೆಯಾಗುತ್ತದೆ ಚರ್ಮ ಮಡಿಕೆಗಳಾಗಿರುತ್ತದೆ, ಕೆನ್ನೆಗಳು ಕುಳಿ ಬಿದ್ದಿರುತ್ತದೆ. ಚರ್ಮ ಒಣಗಿರುತ್ತದೆ.  ಚರ್ಮರೋಗಗಳು ಕೂಡ ಇರುತ್ತದೆ. ಕೂದಲು ತನ್ನ ಸಹಜ ಬಣ್ಣವನ್ನು ಕಳೆದುಕೊಂಡಿರುತ್ತದೆ. ಕೀಲುಗಳ ಹತ್ತಿರ ಚಿಪ್ಪುಗಳು ಎದ್ದು ಕಾಣುತ್ತಿರುತ್ತದೆ. ಅದಕ್ಕೆ ಕಾರಣ ಮಾಂಸ ಖಂಡಗಳು ಕ್ಷೀಣಿಸುತ್ತಿರುವುದೇ ಆಗಿರುತ್ತದೆ.

2.ಕ್ವಾಷಿಯಾರ್ಕರ್ : ಆಹಾರದ ಕೊರತೆಯಿಂದ ಮಗುವಿಗೆ ಬರುವ ಮತ್ತೊಂದು ಕಾಯಿಲೆಯಾಗಿದ್ದು ಮಗುವಿನ ಬೆಳವಣಿಗೆ ಇರುವುದಿಲ್ಲ. ಕಾಲುಗಳಿಗೆ ಮತ್ತು ಪಾದಗಳಿಗೆ ನೀರುತುಂಬಿ ಹುಬ್ಬಿದಂತೆ ಕಾಣುತ್ತದೆ. ಮಗುವಿನಲ್ಲಿ ಯಾವುದೇ ಚಟುವಟಿಕೆ ಇಲ್ಲದ ಮಂಕಾಗಿರುತ್ತದೆ. ಹಸಿವು ಇರುವುದಿಲ್ಲ ಕೂದಲು ತನ್ನ ಸಹಜತೆಯನ್ನು ಕಳೆದುಕೊಂಡು ಉದ್ದಕ್ಕೆ ಸೀಳಿರುತ್ತದೆ,  ಸದಾ ನೀರಿನOತೆ ಭೇದಿಯಾಗುತ್ತದೆ. ಲಿವರ್ ದೊಡ್ಡದಾಗಿರುತ್ತದೆ.

ಚಿಕಿತ್ಸೆ : ಮೆರಾಸ್ಮಸ್ ಮತ್ತು ಕ್ವಾಷಿಯಾರ್ಕರ್ ಪೀಡಿತ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ಒದಗಿಸುವುದು ಅತಿ ಅಗತ್ಯ. ಮುಖ್ಯವಾಗಿ ಹಾಲು ಅದಕ್ಕೆ ಸಂಬಂಧಿಸಿದ ಪೋಷಕಾಂಶಗಳನ್ನು ಕೊಡಬೇಕು. ಈ ಮಕ್ಕಳಿಗೆ ಆಹಾರವನ್ನು ನುಂಗಲು ಕೂಡ ಶಕ್ತಿ ಇರುವುದಿಲ್ಲ. ಇಂತಹ ಮಕ್ಕಳಿಗೆ ವಿಟಮಿನ್ ಎ, ವಿಟಮಿನ್ ಡಿ, ಪೋಲಿಕ್ ಆಸಿಡ್, ವಿಟಮಿನ್ ಬಿ ಕೊರತೆ ಇರುತ್ತದೆ. ಎಲ್ಲವೂ ಸೂಕ್ತ ಪ್ರಮಾಣದಲ್ಲಿ ಕೊಡಬೇಕು ಪೌಷ್ಟಿಕಾಂಶಗಳ ಕೊರತೆಯಿಂದ ರೋಗ ನಿರೋಧಕ ಶಕ್ತಿಯನ್ನು ಕಳೆದುಕೊಳ್ಳುವ ಮಗು ಹಲವಾರು ಸೋಂಕು ರೋಗಗಳಿಗೆ ಗುರಿಯಾಗುತ್ತದೆ. ಇವೆಲ್ಲವೂ ಗಮನಿಸಿ ಚಿಕಿತ್ಸೆ ಮಾಡಬೇಕು.

ವಿಟಮಿನ್ “ಎ” ಕೊರತೆಯಿಂದ ಆಗುವ ತೊಂದರೆಗಳು :-

ಪೌಷ್ಟಿಕಾಂಶಗಳ ಕೊರತೆ ಇರುವವರಿಗೆ ಸಾಮಾನ್ಯ ವಾಗಿ ವಿಟಮಿನ್ ಎ ಕೊರತೆ ಇರುತ್ತದೆ. ಇದರ ಕೊರತೆಯಿಂದ ಅಂಧತ್ವ ಉಂಟಾಗುವ ಸಂಭವವಿದೆ. ವಿಟಮಿನ್ ಎ ಕೊರತೆ ಇರುವವರಿಗೆ ಇರುಳುಗುರುಡು ಬರುತ್ತದೆ. ಬಿಳಿಯ ಕಣ್ಣು ಗುಡ್ಡೆಯ ಮೇಲೆ ಬಿಳಿ ಮಚ್ಚೆಗಳು, ಮಚ್ಚೆಗಳಾಗುತ್ತದೆ ಕಪ್ಪುಗುಡ್ಡೆ ಮೇಲೆ ಹುಣ್ಣಾಗುತ್ತದೆ. ಚರ್ಮ ಒಣಗುತ್ತದೆ ಶ್ವಾಸಕೋಶದ ರೋಗಗಳು ಉದ್ಭವಿಸುತ್ತದೆ. ಜನನೇಂದ್ರಿಯಗಳ ಬೆಳವಣಿಗೆ ಕುಂಠಿತವಾಗುತ್ತದೆ

ಮುಂಜಾಗ್ರತ ಕ್ರಮ :-

ಪ್ರತಿಯೊಂದು ಮಗುವಿಗೆ ಆರು ತಿಂಗಳು ತುಂಬಿದ ನಂತರ 1-2 ತಿಂಗಳುಗಳಲ್ಲಿ ಒಂದು ಲಕ್ಷ ಇಂಟರ್ನ್ಯಾಷನಲ್ ಯೂನಿಟ್ಸ್ ವಿಟಮಿನ್ ʼಎʼ ದ್ರವವನ್ನು ಬಾಯಿಯ ಮೂಲಕ ಒಂದೆರಡು ಕೊಡಬೇಕು. ಒಂದು ವರ್ಷ ತುಂಬಿದ ನಂತರ ಐದು ವರ್ಷದೊಳಗಿನ ಮಕ್ಕಳಿಗೆ ಪ್ರತಿ ಆರು ತಿಂಗಳಿಗೊಮ್ಮೆ, ಎರಡು ಲಕ್ಷ ಇಂಟರ್ನ್ಯಾಷನಲ್ ಯೂನಿಟ್ ವಿಟಮಿನ್ ಕೊಡಬೇಕು.

ಆಹಾರದಲ್ಲಿ ವಿಟಮಿನ್ ʼಎʼ ಸಾಕಷ್ಟು ಪ್ರಮಾಣದಲ್ಲಿ ಇರುವಂತಹ ಆಹಾರವನ್ನೇ ಕೊಡಬೇಕು.

ಹೆರಿಗೆಯಾದ ನಂತರ ತಾಯಿ ಕುಡಿಸುವ ಮೊದಲ ಮೊಲೆ ಹಾಲಿನಲ್ಲಿ ವಿಟಮಿನ್ ʼಎʼ ಧಾರಾಳವಾಗಿರುತ್ತದೆ. ಈ ದ್ರವ (ಕೊಲೆಸ್ಟ್ರಮ್) ಆರು ತಿಂಗಳ ಆಗುವಷ್ಟು ವಿಟಮಿನ್ ಒದಗಿಸುತ್ತದೆ.

ವಿಟಮಿನ್ ʼಎʼ ಕೊರತೆ  : ವಿಟಮಿನ್ ʼಎʼ ಕೊರತೆಯಿಂದ ಮಗು ನರಳುತ್ತಿರುವುದು ಕಂಡುಬಂದ ತಕ್ಷಣ 2 ಲಕ್ಷ ಇಂಟರ್ನ್ಯಾಷನಲ್ ಯೂನಿಟ್ ವಿಟಮಿನ್ ದ್ರವವನ್ನು ಒಂದೇ ಡೋಸ್ ನಲ್ಲಿ ಬಾಯಿಯಾ ಮೂಲಕ ಕೊಡಬೇಕು ತಿಂಗಳ ನಂತರ ಮತ್ತೊಂದು ಕೊಡಬೇಕು.

ವಿಟಮಿನ್ ʼಸಿʼ ಕೊರತೆಯಿಂದ ಆಗುವ ತೊಂದರೆಗಳು :

ವಿಟಮಿನ್ ʼಸಿʼ ಮಗುವಿನ ಬೆಳವಣಿಗೆಗೆ ಸಹಾಯಕಾರಿಯ ಹಾಗೆಯೇ ರೋಗ ಪಿಡಿತವಾದಾಗ, ಗಾಯಗಳಾದಾಗ ಶೀಘ್ರವಾಗಿ ಚೇತರಿಸಿಕೊಳ್ಳುವ ಇದರ ಅಗತ್ಯವಿದೆ. ಮೂಳೆಮುರಿದಾಗ ಅದು ಬೇಗ ಕೂಡಿಕೊಳ್ಳಲು ವಿಟಮಿನ್ ʼಸಿʼ ಸಹಕರಿಸುತ್ತದೆ. ಅಷ್ಟೇ ಅಲ್ಲದೆ ರಕ್ತ ತಯಾರಿಕೆಯಲ್ಲಿ ಕಬ್ಬಿನಾಂಶ ಲಭ್ಯವಾಗಲಿ ಇದು ಪ್ರಮುಖ ಪಾತ್ರವಹಿಸುತ್ತದೆ. ವಿಟಮಿನ್ ʼಸಿʼ ಕೊರತೆಯಿಂದ “ಸ್ಕರ್ವಿ” ರೋಗ ಬರುತ್ತದೆ.

ತಾಯಿಯ ಹಾಲು ಕುಡಿಯುವ ಮಕ್ಕಳಿಗೆ ಆ ಹಾಲಿನ ಮೂಲಕ ಅಗತ್ಯವಾದಷ್ಟು ವಿಟಮಿನ್ ʼಸಿʼ ಲಭ್ಯವಾಗುತ್ತದೆ. ಹಸುವಿನ ಹಾಲು ಕುಡಿಯುವ ಮಕ್ಕಳಲ್ಲಿ ಇದರ ಕೊರತೆ ಕಂಡುಬರುತ್ತದೆ ʼಸ್ಕರ್ವಿʼ ರೋಗವಿರುವವರ ಮೂಳೆಗಳು ದುರ್ಬಲವಾಗಿರುತ್ತದೆ.

ಹುಳಿ ಇರುವ ಹಣ್ಣುಗಳನ್ನು ಮಕ್ಕಳಿಗೆ ತಿನಿಸಿದರೆ ವಿಟಮಿನ್ ʼಸಿʼ ಕೊರತೆಯಾಗುವುದಿಲ್ಲ. ಹಾಗೆ ಇದರ ಕೊರತೆ ಇರುವವರಿಗೆ 100-200 ಮೀ.ಗ್ರಾಂ. ವಿಟಮಿನ್ ʼಸಿʼ ಗುಳಿಗೆಗಳನ್ನು ಕೊಡಬೇಕು.

ವಿಟಮಿನ್ “ಡಿ” ಕೊರತೆಯ ತೊಂದರೆಗಳು :

ವಿಟಮಿನ್ ʼಡಿ ʼಕೊರತೆಯಿಂದ ಬರುವ ರೋಗಗಳನ್ನು “ರೆಕೆಟ್ಸ್” ಎನ್ನುತ್ತಾರೆ. ಇದರ ಕೊರತೆಯಿಂದ ಕರುಳುಗಳಲ್ಲಿ ಕ್ಯಾಲ್ಸಿಯಂ, ಪಾಸ್ಫರಸ್, ಜೀರ್ಣವಾಗುವುದಿಲ್ಲ. ಅದರಿಂದಾಗಿ ಮಕ್ಕಳ ಮೂಳೆಗಳು ಬೆಳವಣಿಗೆ ಕುಂಠಿತವಾಗುತ್ತದೆ ಕ್ರಿಕೆಟ್ ರೋಗ ಚಿಕ್ಕ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ತಾಯಿಯ ಹಾಲನ್ನು ಪುಷ್ಕಳವಾಗಿ ಕುಡಿಯುವ ಮಕ್ಕಳಲ್ಲಿ ʼರಿಕೆಟ್ಸ್ʼ ರೋಗ ಬರುವುದಿಲ್ಲ.

ರಿಕೆಟ್ಸ್ ನ ಲಕ್ಷಣಗಳು : ರಿಕೆಟ್ಸ್ ರೋಗದಿಂದ ನೆರಳುವ ಮಕ್ಕಳ ಹಣೆ ಅಗಲವಾಗಿರುತ್ತದೆ. ತಲೆಯ ಮೇಲ್ಬಾಗ ಮೆತ್ತಗೆ ಪೊರೆಯಂತಿರುತ್ತದೆ ಹುಲ್ಲುಗಳು ತಡವಾಗಿ ಹುಟ್ಟುತ್ತದೆ. ಎದೆಯ ಮಧ್ಯದ ಪಕ್ಕ ಕೆಲವುಗಳು ಗಂಟು ಕಟ್ಟುತ್ತವೆ. ಎದೆ ಮೂಳೆ ಎತ್ತರಕ್ಕೆ ಉಬ್ಬಿರುತ್ತದೆ ಇಂತಹ ಎದೆ ಆಕಾರವನ್ನು ಪಾರಿವಾಳದ ಹೊಟ್ಟೆಗೆ ಹೋಲಿಸುತ್ತಾರೆ, ಬೆನ್ನು ಗುನಾಗುತ್ತದೆ, ಹೊಟ್ಟೆಯ ಮಾಂಸ ಖಂಡಗಳು ದುರ್ಬಲವಾಗಿ ಹೊಟ್ಟೆ ಉತಿರುತ್ತದೆ, ಮಣಿಕಟ್ಟು ದಪ್ಪಗಾಗುತ್ತದೆ, ಸದಾ ಯಾವುದಾದರೂ ಒಂದು ಕಾಯಿಲೆ ಇರುತ್ತದೆ, ಗಂಟಲು ನೋವು, ಕೆಮ್ಮು ,ಇರುತ್ತದೆ ಕೆಲವರಿಗೆ ಫಿಟ್ಸ್ ಬರುತ್ತದೆ.

ರಿಕೆಟ್ಸ್ ಲಕ್ಷಣಗಳು :

ಲಕ್ಷಣಗಳಿಗುಣವಾಗಿ ರಿಕೆಟ್ಸನ್ನು ಸುಲಭವಾಗಿ ಗುರುತಿಸಬಹುದು. ಎಕ್ಸ್ ರೇ ಮೂಲಕ ಮಣಿಕಟ್ಟಿನ ಬಳಿ ದಪ್ಪವಾಗಿರುವ ಮೂಳೆಗಳನ್ನು ಗುರುತಿಸಬಹುದು. ರಕ್ತದಲ್ಲಿ ಪ್ರಮಾಣ ಏರಿಕೆಯಾಗುತ್ತದೆ. ಪಾಸ್ಪರಸ್ ಮತ್ತು ಕ್ಯಾಲ್ಸಿಯಂ ಪ್ರಮಾಣ ಕಡಿಮೆಯಾಗುತ್ತದೆ

ಚಿಕಿತ್ಸೆ :-

1200-2000 ಯೂನಿಟ್ ವಿಟಮಿನ್ ʼಡಿʼ ಯನ್ನು ಪ್ರತಿದಿನ ಕೊಡಬೇಕು. ಕಾರ್ಡ್ ಲಿವರ್ ಎಣ್ಣೆಯನ್ನು ಒಂದು ಚಮಚ ಪ್ರಮಾಣದಲ್ಲಿ ದಿನಕ್ಕೆ ಮೂರು ಬಾರಿ ಕೊಡಬೇಕು. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಒಂದೆರಡು ಗಂಟೆ ಬಿಸಿಲಲ್ಲಿ ಇರಿಸಬೇಕು. ಕ್ಯಾಲ್ಸಿಯಂ ಗುಳಿಗೆಗಳು ಮತ್ತು ಕ್ಯಾಲ್ಸಿಯಂ ಇರುವ ಆಹಾರವನ್ನು ಹೆಚ್ಚಾಗಿ ಕೊಡಬೇಕು.

ಹಿಂದಿನ ಲೇಖನಲೋಕಸಭಾ ಚುನಾವಣೆಯ ಬಿಜೆಪಿ ಆಕಾಂಕ್ಷಿಗಳ ಪಟ್ಟಿ ಶೀಘ್ರ ತಯಾರಿ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ
ಮುಂದಿನ ಲೇಖನಬಾವಿಗೆ ಹಾರಿ ಯುವ ಕಲಾವಿದ ಆತ್ಮಹತ್ಯೆ